ತಿರುವನಂತಪುರಂ(ಕೇರಳ): ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಸುಮಾರು 200 ಹಾಡುಗಳನ್ನು ಹಾಡಿರುವ ಹಿನ್ನೆಲೆ ಗಾಯಕಿ ಸಂಗೀತಾ ಸಚಿತ್ (46) ಅವರು ಭಾನುವಾರ ತಮ್ಮ ಸಹೋದರಿಯ ಮನೆಯಲ್ಲಿ ನಿಧನರಾದರು. ಇವರು ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಸಂಗೀತಾ ಅವರು ತಮಿಳಿನ ‘ನಾಲೈ ತೀರ್ಪು’ ಚಿತ್ರದಲ್ಲಿ ಹಾಡುವ ಮೂಲಕ ಸಂಗೀತ ಲೋಕಕ್ಕೆ ಪಾದಾರ್ಪಣೆ ಮಾಡಿದರು ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋದಲ್ಲಿ ಅವರ ಹಾಡಿದ 'ತಣ್ಣೀರೈ ಕತಲಿಕ್ಕುಮ್' ಹಾಡು ಹಿಟ್ ಆಗಿತ್ತು. ಮಲಯಾಳಂ ಚಿತ್ರದ ಕಕ್ಕುಯಿಲ್‌ನ ‘ಅಲಾರೆ ಗೋವಿಂದಾ’, ಎನ್ನ್ ಸ್ವಂತಂ ಜಾನಕಿಕುಟ್ಟಿಯ ‘ಅಂಬಿಲಿಪೂವಟ್ಟಂ’ ಮತ್ತು ‘ಧುಮ್ ಧುಮ್ ಧುಮ್ ಧುರಯಾತೋ’ ಅವರು ಹಾಡಿರುವ ಜನಪ್ರಿಯ ಹಾಡುಗಳು.
ಮಲಯಾಳಂನಲ್ಲಿ ಅವರ ಕೊನೆಯ ಹಾಡು ಕುರುತಿ ಚಿತ್ರದ ಥೀಮ್ ಸಾಂಗ್. ಕಾರ್ಯಕ್ರಮದ ವೇಳೆ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಧರಿಸಿದ್ದ 10 ಪವನ್ ಚಿನ್ನದ ಸರವನ್ನು ಗೌರವಾರ್ಥವಾಗಿ ಉಡುಗೊರೆಯಾಗಿ ನೀಡಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ತೈಕಾಡು ಶಾಂತಿ ಕವಾಡಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಾನ್ ಚಲನಚಿತ್ರೋತ್ಸವದಲ್ಲಿ ಧುಯಿನ್ ಹವಾ!..