ಚೆನ್ನೈ(ತಮಿಳುನಾಡು): ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಡಿವೇಲುಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಚೆನ್ನೈನ ರಾಮಚಂದ್ರನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
![South Indian Comedian actor Vadivelu affected by Covid 19](https://etvbharatimages.akamaized.net/etvbharat/prod-images/vadivelu_2412newsroom_1640341448_827.jpg)
ಕಳೆದ 10 ದಿನಗಳಿಂದ ಲಂಡನ್ನಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಇವರು, ನಿನ್ನೆಯಷ್ಟೇ ವಾಪಸ್ ಆಗಿದ್ದರು. ಇದರ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಗೊಂಡಿದೆ.
![South Indian Comedian actor Vadivelu affected by Covid 19](https://etvbharatimages.akamaized.net/etvbharat/prod-images/vadivelu-2_2412newsroom_1640341448_391.jpg)
ಇದನ್ನೂ ಓದಿರಿ: ಸ್ನೇಹಿತರಿಂದಲೇ ದುಷ್ಕೃತ್ಯ: 20ರ ಯುವತಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು
ಸೋಂಕು ಇರುವುದು ದೃಢವಾಗುತ್ತಿದ್ದಂತೆ ಎಸ್ಆರ್ಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಕೋವಿಡ್ನ 2ನೇ ಅಲೆಯಿಂದ ಭಾರತ ತತ್ತರಿಸಿದ್ದ ಸಂದರ್ಭದಲ್ಲಿ ತಮಿಳುನಾಡು ಸಿಎಂ ಪರಿಹಾರ ನಿಧಿಗೆ ಹಾಸ್ಯನಟ ವಡಿವೇಲು 5 ಲಕ್ಷ ರೂ. ನೆರವು ನೀಡಿದ್ದರು.