ETV Bharat / bharat

ದಾದಾ ಪಶ್ಚಿಮ ಬಂಗಾಳದ ನೂತನ ರಾಯಭಾರಿ: ಬಿಜಿಬಿಎಸ್ ವೇದಿಕೆಯಲ್ಲಿ ಘೋಷಣೆ - ETV Bharath Kannada news

ಮಮತಾ ಬ್ಯಾನರ್ಜಿ ಅವರು ಸೌರವ್ ಗಂಗೂಲಿ ಅವರನ್ನು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯ ವೇದಿಕೆಯಲ್ಲಿ ಪಶ್ಚಿಮ ಬಂಗಾಳದ ನೂತನ ರಾಯಭಾರಿಯಾಗಿ ಘೋಷಣೆ ಮಾಡಿದ್ದಾರೆ.

Sourav Ganguly
Sourav Ganguly
author img

By ETV Bharat Karnataka Team

Published : Nov 21, 2023, 8:42 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಪಶ್ಚಿಮ ಬಂಗಾಳದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ (ಬಿಜಿಬಿಎಸ್) ವೇದಿಕೆಯಲ್ಲಿ ಈ ಘೋಷಣೆ ಮಾಡಿದರು.

ಘೋಷಣೆ ಮಾಡಿದ ಬೆನ್ನಲ್ಲೇ ಮಮತಾ ಅವರು ಗಂಗೂಲಿ ಅವರಿಗೆ ನೇಮಕಾತಿ ಪತ್ರವನ್ನು ತಕ್ಷಣವೇ ಹಸ್ತಾಂತರಿಸಿದರು. 2011ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬ್ಯಾನರ್ಜಿ ಅವರು ನಟ ಶಾರುಖ್ ಖಾನ್ ಅವರನ್ನು ಪಶ್ಚಿಮ ಬಂಗಾಳದ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಶಾರುಖ್ ಖಾನ್ ನಟರಾಗಿ ಪರಿಚಿತರಲ್ಲದೇ, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಹ- ಮಾಲೀಕರಾಗಿದ್ದರು. ಗಂಗೂಲಿ ಅವರನ್ನು ರಾಯಭಾರಿಯನ್ನಾಗಿ ಘೋಷಿಸಿದ ನಂತರ ಶಾರುಖ್ ಖಾನ್ ಅವರೂ ಸಹ ಮುಂದುವರೆಯಲಿದ್ದಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ ವೇದಿಕೆಯಲ್ಲಿ"ಸೌರವ್ ಜನಪ್ರಿಯ ವ್ಯಕ್ತಿತ್ವ. ಅವರು ಹೊಸ ಪೀಳಿಗೆಗೆ ಒಳ್ಳೆಯ ಕೆಲಸ ಮಾಡುತ್ತಾರೆ. ಬಂಗಾಳದ ಬ್ರಾಂಡ್ ಅಂಬಾಸಿಡರ್ ಹುದ್ದೆಗೆ ಅವರ ಹೆಸರನ್ನು ಘೋಷಿಸುತ್ತಿದ್ದೇನೆ" ಎಂದು ಮಮತಾ ಹೇಳಿದ್ದಾರೆ.

ಟಿಎಂಸಿ ಆಡಳಿತಕ್ಕೆ ಬರುವ ಮೊದಲು ರಾಜ್ಯವು ಯಾವುದೇ ಬ್ರಾಂಡ್ ಅಂಬಾಸಿಡರ್ ಅನ್ನು ಹೊಂದಿರಲಿಲ್ಲ. ಈ ಮೊದಲು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ನಟ ದೇವ್ ಅವರನ್ನು ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ರಾಯಭಾರಿಯಾಗಿ ಮಮತಾ ಘೋಷಿಸಿದ್ದರು.

ಮಮತಾ ಅವರೊಂದಿಗಿನ ಗಂಗೂಲಿ ಅವರ ಉತ್ತಮ ಒಡನಾಟವನ್ನು ಹೊಂದಿದ್ದಾರೆ. ವಿವಿಧ ರಾಜಕೀಯ ಊಹಾಪೋಹಗಳ ಹೊರತಾಗಿಯೂ, ಮುಖ್ಯಮಂತ್ರಿ ಮತ್ತು ದಾದಾ ಗಂಗೂಲಿ ನಡುವೆ ಯಾವುದೇ ಅಂತರ ಕಂಡುಬಂದಿಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಸ್ಪೇನ್ ಪ್ರವಾಸದ ವೇಳೆ ಗಂಗೂಲಿ ಕೂಡ ಮಮತಾ ಜೊತೆಗಿದ್ದರು. ಗಂಗೂಲಿ ಅವರು ಮಿಡ್ನಾಪುರದಲ್ಲಿ ಉಕ್ಕಿನ ಕಾರ್ಖಾನೆಯನ್ನು ನಿರ್ಮಿಸಲು ಹೂಡಿಕೆ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದಾರೆ.

ಸೌರವ್ ಅವರು ವ್ಯಾಪಾರ ಸಮಾವೇಶದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೊಗಳಿದರು. "ನನ್ನನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಅವರು ನನಗೆ ಸಂದೇಶ ಕಳಿಸುತ್ತಾರೆ. ನಾನು ಅವರಿಗೆ ಸಂದೇಶ ಕಳುಹಿಸಿದಾಗಲೆಲ್ಲಾ ಅವರು ಒಂದು ನಿಮಿಷದೊಳಗೆ ಉತ್ತರಿಸಿದ್ದಾರೆ. ಅವರು ಉತ್ತರಿಸಲು ಎಂದಿಗೂ ತಡಮಾಡುವುದಿಲ್ಲ" ಎಂದು ಹೇಳಿದರು.

ಬಂಗಾಳ ಮೂಲದ ಸೌರವ್​ ಗಂಗೂಲಿ 1992 ರಿಂದ 2008ರ ವರೆಗೆ ಭಾರತಕ್ಕಾಗಿ ಆಡಿದ್ದಾರೆ. ಇವರ ಬ್ಯಾಟಿಂಗ್​ ಶೈಲಿಯಿಂದಲೇ ದಾದಾ ಎಂಬ ಹೆಸರನ್ನು ಪಡೆದಿದ್ದಾರೆ. 113 ಟೆಸ್ಟ್​ ಹಾಗೂ 311 ಏಕದಿನ ಪಂದ್ಯಗಳನ್ನಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಇಂಜಮಾಮ್ ಉಲ್ ಹಕ್ ನಂತರ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ದಾಟಿದ ಮೂರನೇ ಬ್ಯಾಟರ್​ ಎಂಬ ಖ್ಯಾತಿಯೂ ಇವರಿಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ 35 ನೇ ಅಧ್ಯಕ್ಷರಾಗಿ 23 ಅಕ್ಟೋಬರ್ 2019 ರಿಂದ 18 ಅಕ್ಟೋಬರ್ 2022 ವರೆಗೆ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಫೈನಲ್​ ನೋಡುತ್ತಿದ್ದಾಗ ಟಿವಿ ಆಫ್​ ಮಾಡಿದ್ದಕ್ಕೆ ಮಗನ ಕತ್ತು ಹಿಸುಕಿ ಕೊಂದ ಅಪ್ಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.