ಮುಂಬೈ: ಕೋವಿಡ್ ತಡೆಗಟ್ಟುವ ಲಸಿಕೆ ಅಗತ್ಯವಿರುವವರಿಗೆ ಉಚಿತವಾಗಿ ಸಿಗಬೇಕು ಮತ್ತು ಬೆಲೆ ನಿಗದಿಗೆ ಮಿತಿ ಇರಬೇಕು ಎಂದು ನಟ ಸೋನು ಸೂದ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಪ್ರತಿಯೊಬ್ಬ ನಿರ್ಗತಿಕರು ಉಚಿತವಾಗಿ ಲಸಿಕೆ ಪಡೆಯಬೇಕು. ಇದು ವ್ಯಾಪಾರ ಮಾಡುವ ಸಮಯವಲ್ಲ, ಮುಂದೊಂದು ದಿನ ಅದನ್ನು ಮಾಡೋಣ. ಹಾಗಾಗಿ ಬೆಲೆ ನಿಗದಿಗೆ ಮಿತಿ ಇರಲಿ, ಎಲ್ಲರಿಗೂ ಲಸಿಕೆ ಸಿಗುವಂತಾಗಲು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬರಬೇಕು ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ರಾಜ್ಯಗಳಿಗೆ ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್‌ಗೆ 400 ರೂ., ಖಾಸಗಿ ಆಸ್ಪತ್ರೆಗಳಲ್ಲಿ 600 ರೂ. ಮತ್ತು ಕೇಂದ್ರಕ್ಕೆ 150 ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ 21.57 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಪ್ರಸ್ತುತ ದೇಶದಲ್ಲಿ ಗರಿಷ್ಠ ಸಂಖ್ಯೆಯ ಸಕ್ರಿಯ ಪ್ರಕರಣಗಳಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.