ETV Bharat / bharat

ಕೇಂದ್ರ ರೈತರನ್ನು ಶೋಷಿಸುವ ಮೂಲಕ ಜನ ವಿರೋಧಿಯಾಗಿದೆ : ಸೋನಿಯಾ ಗಾಂಧಿ

ಬಾಗೆಲ್ ನೇತೃತ್ವದ ಸರ್ಕಾರವು ಆರ್ಥಿಕವಾಗಿ ಸಬಲೀಕರಣಗೊಳ್ಳುವ ಮೂಲಕ ಸಾಮಾನ್ಯ ಜನರ ಜೀವನದಲ್ಲಿ, ವಿಶೇಷವಾಗಿ ಅನ್ನದಾತನ ಜೀವನದಲ್ಲಿ ಸಂತೋಷ ಮತ್ತು ಬದಲಾವಣೆಯನ್ನು ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೊಗಳಿದ್ದಾರೆ..

Sonia
Sonia
author img

By

Published : May 21, 2021, 7:54 PM IST

ರಾಯ್‌ಪುರ : ಬಿಜೆಪಿ ನೇತೃತ್ವದ ಸರ್ಕಾರವು ಜನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ. ರೈತರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಮತ್ತು ಹೊಸ ಕೃಷಿ ಕಾನೂನುಗಳನ್ನು ತರುವ ಮೂಲಕ ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೋದಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಛತ್ತೀಸ್​​​​ಗಢದ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದ ಅವರು, ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಸಾಮಾನ್ಯ ಜನರ, ವಿಶೇಷವಾಗಿ ರೈತರ ಜೀವನದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ರಾಜ್ಯ ಸರ್ಕಾರದ ಎರಡು ಯೋಜನೆಗಳಡಿ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ನಗದು ಸವಲತ್ತುಗಳನ್ನು ವಿತರಿಸಲು ಅಲ್ಲಿನ ಸರ್ಕಾರ ಮುಂದಾಗಿದೆ.

ಈ ಯೋಜನೆಗಳು ರಾಜೀವ್ ಗಾಂಧಿಗೆ ನಿಜವಾದ ಅರ್ಥದಲ್ಲಿ ಸಲ್ಲಿಸಿದ ಗೌರವ ಎಂದು ಭೂಪೇಶ್ ಬಾಗೆಲ್ ನೇತೃತ್ವದ ಸರ್ಕಾರವನ್ನು ಅವರು ತಮ್ಮ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಜನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೃಷಿಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ನೂತನ ಕಾನೂನುಗಳನ್ನು ತರುವ ಮೂಲಕ ಮತ್ತು ಅವುಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇಂತಹ ಸಂದರ್ಭದಲ್ಲಿ ಛತ್ತೀಸ್​​​ಗಢದ ಕಾಂಗ್ರೆಸ್ ಸರ್ಕಾರ ತನ್ನ ಮತದಾರನ ಭರವಸೆಗಳನ್ನು ಗಂಭೀರವಾಗಿ ಪೂರೈಸುತ್ತಿದೆ ಎಂದು ನನಗೆ ತೃಪ್ತಿ ಇದೆ ಎಂದಿದ್ದಾರೆ.

ಬಾಗೆಲ್ ನೇತೃತ್ವದ ಸರ್ಕಾರವು ಆರ್ಥಿಕವಾಗಿ ಸಬಲೀಕರಣಗೊಳ್ಳುವ ಮೂಲಕ ಸಾಮಾನ್ಯ ಜನರ ಜೀವನದಲ್ಲಿ, ವಿಶೇಷವಾಗಿ ಅನ್ನದಾತನ ಜೀವನದಲ್ಲಿ ಸಂತೋಷ ಮತ್ತು ಬದಲಾವಣೆಯನ್ನು ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೊಗಳಿದ್ದಾರೆ.

ರಾಜೀವ್ ಗಾಂಧಿ ಜಿ ಯಾವಾಗಲೂ ಸಾಮಾನ್ಯ ಜನರ ಆಸಕ್ತಿ ಪೂರೈಕೆಯನ್ನು ಇಟ್ಟುಕೊಂಡಿದ್ದರು. ರೈತರು, ಕಾರ್ಮಿಕರು, ಬಡವರು ಮತ್ತು ಹಿಂದುಳಿದ ಜನರನ್ನು ಆರ್ಥಿಕವಾಗಿ ಸದೃಢವಾಗಿ ಮತ್ತು ಸಂತೋಷದಿಂದ ನೋಡಬೇಕೆಂದು ಅವರು ಬಯಸಿದ್ದರು.

ಅವರ ಪುಣ್ಯತಿಥಿಯಂದು ಸರ್ಕಾರ ರೈತ ಮತ್ತು ಜಾನುವಾರು ಸಾಕುವವರಿಗೆ ನಗದು ಲಾಭವನ್ನು ಒದಗಿಸಲು ಮುಂದಾಗಿರುವುದು ರಾಜೀವ್ ಅವರಿಗೆ ನಿಜವಾದ ಅರ್ಥದಲ್ಲಿ ಗೌರವವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.