ETV Bharat / bharat

ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ ಸೋನಿಯಾ ಗಾಂಧಿ

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸತತ ಅನರೋಗ್ಯಕ್ಕೀಡಾಗುತ್ತಿರುವ ಕಾರಣ ಆರೋಗ್ಯ ತಪಾಸಣೆಗಾಗಿ ಶೀಘ್ರದಲ್ಲೇ ವಿದೇಶಕ್ಕೆ ತೆರಳಿದ್ದಾರೆ. ಈ ವೇಳೆ, ಮಕ್ಕಳು ಜೊತೆಗಿರಲಿದ್ದಾರೆ ಎಂದು ಪಕ್ಷ ತಿಳಿಸಿದೆ.

author img

By

Published : Aug 24, 2022, 6:44 AM IST

Sonia Gandhi traveling abroad for treatment
ಆರೋಗ್ಯ ತಪಾಸಣೆಗಾಗಿ ಸೋನಿಯಾ ಗಾಂಧಿ ವಿದೇಶಕ್ಕೆ

ನವದೆಹಲಿ: ಎರಡು ಬಾರಿ ಕೋವಿಡ್ ಸೇರಿದಂತೆ ಪದೇ ಪದೆ ಅನಾರೋಗ್ಯಕ್ಕೆ ಈಡಾಗುತ್ತಿರುವ ಕಾಂಗ್ರೆಸ್​ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರೋಗ್ಯ ತಪಾಸಣೆಗಾಗಿ ಶೀಘ್ರದಲ್ಲೇ ವಿದೇಶಕ್ಕೆ ತೆರಳಲಿದ್ದಾರೆ. ಮಕ್ಕಳಾದ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಜೊತೆಗಿರಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ತಪಾಸಣೆ ಬಳಿಕ ಸೋನಿಯಾ ಗಾಂಧಿ ಅನಾರೋಗ್ಯಕ್ಕೀಡಾಗಿರುವ ಅವರ ತಾಯಿಯನ್ನು ಭೇಟಿ ಮಾಡಲಿದ್ದಾರೆ. ಬಳಿಕ ದೆಹಲಿ ವಾಪಸ್​ ಆಗಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್​ ತಿಳಿಸಿದರು.

ನ್ಯಾಷನಲ್​ ಹೆರಾಲ್ಡ್​ ಹಗರಣ ವಿಚಾರಣೆಗೂ ಮೊದಲು ಅವರು ಮೊದಲ ಬಾರಿಗೆ ಕೋವಿಡ್​ಗೆ ತುತ್ತಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ವೈದ್ಯಕೀಯ ತಂಡದ ನೇತೃತ್ವದಲ್ಲೇ ಎದುರಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಮತ್ತೆ ಕೋವಿಡ್​ ಅವರನ್ನು ಬಾಧಿಸಿತ್ತು.

ಇದರಿಂದ ಕೊರೊನೋತ್ತರ ಸಮಸ್ಯೆಗಳಿಂದ ಬಳಲುತ್ತಿರುವ ಸೋನಿಯಾ ಅವರು, ಪದೇ ಪದೆ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ತಪಾಸಣೆಗಾಗಿ ವಿದೇಶಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಪಕ್ಷ ಮುಂದಾಗಿದೆ. ಇನ್ನು ಸೆಪ್ಟೆಂಬರ್ 4 ರಂದು ದೆಹಲಿಯಲ್ಲಿ 'ಮೆಹಂಗೈ ಪರ್ ಹಲ್ಲಾ ಬೋಲ್' ರ್ಯಾಲಿಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಮಾತನಾಡಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಕೆಲ ದಿನಗಳ ಹಿಂದಷ್ಟೇ ಸೋನಿಯಾ ಅವರಲ್ಲಿ ಎರಡನೇ ಬಾರಿಗೆ ಕೋವಿಡ್​​ ದೃಢಪಟ್ಟಿತ್ತು. ಕ್ವಾರಂಟೈನ್​ ಮುಗಿಸಿರುವ ಅವರು ನಿನ್ನೆಯಷ್ಟೇ ನೂತನವಾಗಿ ಆಯ್ಕೆಯಾಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇನ್ನು ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಈ ವೇಳೆಯೇ ಸೋನಿಯಾ ಅವರು ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಇದಲ್ಲದೇ, ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿಯ ಭಾರತ್​ ಜೋಡೋ ಪಾದಯಾತ್ರೆಯೂ ಶೀಘ್ರದಲ್ಲೇ ಆರಂಭವಾಗಲಿದೆ.

ಓದಿ: ಬಿಜೆಪಿ ಶಾಸಕ ರಾಜಾ ಸಿಂಗ್​ಗೆ ಷರತ್ತುಗಳಿಲ್ಲದೆ 45 ನಿಮಿಷದಲ್ಲೇ ಸಿಕ್ತು ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.