ETV Bharat / bharat

ನ್ಯಾಷನಲ್​ ಹೆರಾಲ್ಡ್​ ಹಗರಣ: ಇಂದು ಸೋನಿಯಾಗೆ 2ನೇ ಸುತ್ತಿನ ಇಡಿ ವಿಚಾರಣೆ - ETV bharat kannada news

ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು 2ನೇ ಬಾರಿಗೆ ಇಡಿ ಕಚೇರಿಗೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನ್ಯಾಷನಲ್​ ಹೆರಾಲ್ಡ್​ ಹಗರಣ ಕುರಿತು ಇಡಿ ಮಾಹಿತಿ ಕಲೆಹಾಕುತ್ತಿದೆ.

sonia-gandhi
ಸೋನಿಯಾ ಗಾಂಧಿ
author img

By

Published : Jul 26, 2022, 9:56 AM IST

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಜುಲೈ 21 ರಂದು ಇಡಿ ಮುಂದೆ ಹಾಜರಾಗಿದ್ದ ಸೋನಿಯಾರನ್ನು 2 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸೋನಿಯಾ ಅವರು ಪುತ್ರಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಡಿ ಕಚೇರಿಗೆ ವಿಚಾರಣೆಗೆ ತೆರಳಿದ್ದರು.

2 ಗಂಟೆಗಳ ವಿಚಾರಣೆಯ ಬಳಿಕ ಸೋನಿಯಾ ಗಾಂಧಿ ಅವರು ಔಷಧಿ ತೆಗೆದುಕೊಳ್ಳಬೇಕಿದ್ದ ಕಾರಣ ಮನೆಗೆ ಹಿಂತಿರುಗಿದರು. ಕಾಂಗ್ರೆಸ್​ ಅಧ್ಯಕ್ಷೆ ಕೆಲ ದಿನಗಳ ಹಿಂದಷ್ಟೇ ಕೊರೊನಾಗೆ ತುತ್ತಾಗಿದ್ದರು. ಚೇತರಿಸಿಕೊಂಡಿರುವ ಅವರು ಕೊರೊನೋತ್ತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಜುಲೈ 21 ರ ವಿಚಾರಣೆಯ ಬಳಿಕ ಜುಲೈ 25 ರಂದು ಮತ್ತೆ ಬರುವಂತೆ ಇಡಿ ನೋಟಿಸ್​ ನೀಡಿತ್ತು. ಬಳಿಕ ವಿಚಾರಣೆಯನ್ನು ಒಂದು ದಿನ ಮುಂದೂಡಿ ಮಂಗಳವಾರ ಬರಲು ಸೂಚಿಸಿತ್ತು.

ವೈದ್ಯರ ವ್ಯವಸ್ಥೆ: ಕೊರೊನೋತ್ತರ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾರ ಈ ಹಿಂದಿನ ವಿಚಾರಣೆಯ ವೇಳೆ ಇಬ್ಬರು ವೈದ್ಯರು ಮತ್ತು ಆಂಬ್ಯುಲೆನ್ಸ್​ ಅನ್ನು ಇಡಿ ಕಚೇರಿಯ ಮುಂದೆ ಸನ್ನದ್ಧವಾಗಿಡಲಾಗಿತ್ತು. ಅಲ್ಲದೇ, ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೂ ಜೊತೆಯಲ್ಲಿರಲು ಅವಕಾಶ ಮಾಡಕೊಡಲಾಗಿದೆ.

ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್​ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಇದು ರಾಜಕೀಯ ದ್ವೇಷದ ನಡೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ. ಕಳೆದ ತಿಂಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಅವರನ್ನು 5 ದಿನಗಳ ಕಾಲ ವಿಚಾರಣೆ ನಡೆಸಿತ್ತು.

ಇದನ್ನೂ ಓದಿ: ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರಿಗೆ ಗೌರವ: ದ್ರಾಸ್‌ನಲ್ಲಿ ಸ್ಮಾರಕಕ್ಕೆ ಪುಷ್ಪ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.