ETV Bharat / bharat

ಆಸ್ತಿಗಾಗಿ ತಂದೆಯನ್ನೇ ಕೊಲ್ಲಲು ಮುಂದಾದ ಕುಡುಕ ಮಗ: ಸಿಸಿಟಿವಿ ವಿಡಿಯೋ ಭಯಾನಕ - ತಂದೆಯನ್ನೇ ಕೊಲ್ಲಲು ಬಂದ ಮಗ

ಮಗ ಸಹಚರರ ಜತೆ ಸೇರಿ ತಂದೆಯ ಕೊಲೆಗೆ ಯತ್ನಿಸಿದ ಘಟನೆ ಕಳೆದ ಜುಲೈ 6ರ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಆಸ್ತಿಗಾಗಿ ತಂದೆಯನ್ನೇ ಕೊಲ್ಲಲು ಮುಂದಾದ ಕುಡುಕ ಮಗ: ಸಿಸಿಟಿವಿ ವಿಡಿಯೋ ಭಯಾನಕ

author img

By

Published : Jul 15, 2022, 9:57 PM IST

ಮೋತಿಹಾರಿ(ಬಿಹಾರ): ಪೂರ್ವ ಚಂಪಾರಣ್‌ನ ಚೌರಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಿಟಿವಿಯಲ್ಲಿ ಭಯಾನಕ ಘಟನೆಯೊಂದು ಸೆರೆಯಾಗಿದೆ. ತಂದೆಯನ್ನು ಕೊಲ್ಲಲು ಯತ್ನಿಸಿದ ಮಗನ ಕೃತ್ಯ ಸೆರೆಯಾಗಿದೆ.

ಮೋತಿಹಾರಿಯಲ್ಲಿ ತಂದೆಯನ್ನು ಕೊಲ್ಲಲು ಮಗ ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ ಈತ ಆರು ಮಂದಿ ಸಹಚರರ ಜೊತೆಗೂಡಿ ಬಂದಿದ್ದಾನೆ. ಘಟನೆ ಸಂಬಂಧ ತಂದೆ ಚಂದೇಶ್ವರ್ ಪ್ರಸಾದ್ ಅವರು ತಮ್ಮ ಕಿರಿಯ ಮಗ ಸಂಜಯ್ ಕುಮಾರ್ ಮತ್ತು ಅವರ ಆರು ಸಹಚರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಗ ಸಹಚರರ ಜತೆ ಸೇರಿ ತಂದೆಯ ಕೊಲೆಗೆ ಯತ್ನಿಸಿದ ಘಟನೆ ಕಳೆದ ಜುಲೈ 6ರ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಸಿಲಿನ ತಾಪ ಹೆಚ್ಚಾದ ಕಾರಣ ಚಂದೇಶ್ವರ್ ಪ್ರಸಾದ್ ಟೆರೇಸ್ ಮೇಲೆ ಮಲಗಿದ್ದರು. ಅದೇ ವೇಳೆಗೆ ಚಂದೇಶ್ವರ್ ಪ್ರಸಾದ್ ಅವರ ಕಿರಿಯ ಮಗ ಸಂಜಯ್ ಕುಮಾರ್ ತನ್ನ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಯೊಂದಿಗೆ ರಹಸ್ಯವಾಗಿ ಟೆರೇಸ್ ತಲುಪಿದ್ದಾರೆ. ಅಲ್ಲಿ ಮಲಗಿದ್ದ ಚಂದೇಶ್ವರ್ ಪ್ರಸಾದ್ ನನ್ನು ದಿಂಬಿನಿಂದ ಮುಖಕ್ಕೆ ಒತ್ತಿ ಕೊಲೆ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಮಗನ ಕೃತ್ಯ: ಚಂದೇಶ್ವರ್ ಪ್ರಸಾದ್ ಮೂಲತಃ ಲಖುರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ವಾ ವೆಸ್ಟ್ ನಿವಾಸಿಯಾಗಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬ ಮಗ ಸುಮಂತ್ ಕುಮಾರ್ ಎಂಬುವರು ಶಿಕ್ಷಕರಾಗಿದ್ದು, ಅವರು ತಮ್ಮ ಕುಟುಂಬದೊಂದಿಗೆ ದುಹೋ ಸುಹೋ ಫತುಹಾದಲ್ಲಿ ವಾಸಿಸುತ್ತಿದ್ದಾರೆ. ಚಂದೇಶ್ವರ್ ಪ್ರಸಾದ್ ಪ್ರಕಾರ, ಅವರ ಕಿರಿಯ ಮಗ ಸಂಜಯ್ ಕುಮಾರ್ ಮದ್ಯವ್ಯಸನಿ, ಜೂಜು ಕೋರನಾಗಿದ್ದಾನಂತೆ.

ಆಸ್ತಿಗಾಗಿ ತಂದೆಯನ್ನೇ ಕೊಲ್ಲಲು ಮುಂದಾದ ಕುಡುಕ ಮಗ: ಸಿಸಿಟಿವಿ ವಿಡಿಯೋ ಭಯಾನಕ

ಅಂಗಡಿ, ಜಮೀನಿಗೆ ಜಗಳ: ಚಂದೇಶ್ವರ ಪ್ರಸಾದ್ ಎಂಬುವರು ದುಹೋ ಸುಹೋದಲ್ಲಿ ರಾಡ್ ಸಿಮೆಂಟ್ ಅಂಗಡಿ ಹೊಂದಿದ್ದು, ಅಲ್ಲಿಯೇ ವಾಸವಾಗಿದ್ದಾರೆ. ಆ ಆಸ್ತಿಯನ್ನು ತನಗೆ ನೀಡಬೇಕು ಎಂದು ಸಂಜಯ್ ಕುಮಾರ್ ಅಣ್ಣ ಹಾಗೂ ತಂದೆ ಮೇಲೆ ಒತ್ತಡ ಹೇರುತ್ತಿದ್ದನಂತೆ. ಇದಕ್ಕೆ ಚಂದೇಶ್ವರ್ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಎಷ್ಟೇ ಪ್ರಯತ್ನಪಟ್ಟರು ಅಂಗಡಿ ಹಾಗೂ ಜಮೀನನ್ನು ನೀಡದ ಕಾರಣಕ್ಕೆ ಕೊಲ್ಲಲು ಯೋಚನೆ ಮಾಡಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಚಂದೇಶ್ವರ ಪ್ರಸಾದ್ ಮನೆಗೆ ತೆರಳಿ ವಿಚಾರಣೆ ನಡೆಸಿದ್ದು, ಇಬ್ಬರ ನಡುವಿನ ಜಮೀನು ವಿವಾದ ಸೇರಿದಂತೆ ವಿವಾದದ ಬಗ್ಗೆ ಮಾಹಿತಿ ಲಭಿಸಿದೆ. ದೂರು ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಎಫ್​ಆರ್ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ.

ಇದನ್ನೂ ಓದಿ: ಒಟ್ಟಿಗೆ ಇನ್ಸ್​ಪೆಕ್ಟರ್​​ ಹುದ್ದೆ ಗಿಟ್ಟಿಸಿಕೊಂಡ ಸಹೋದರಿಯರು: ಬಡ ಕುಟುಂಬದ ಹೆಣ್ಣು ಮಕ್ಕಳ ಅದ್ಭುತ ಸಾಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.