ETV Bharat / bharat

ಕೊರೊನಾ ಭೀತಿಯಿಂದ ವೃದ್ಧ ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿದ ಮಗ - ಹೆತ್ತ ತಾಯಿಯನ್ನೇ ಕೋಣೆಯೊಳಗೆ ಕೂಡಿ ಹಾಕಿದ್ದ ಮಗ

ಆಗ್ರಾ ಜಿಲ್ಲೆಯ ಕಮಲಾ ನಗರದಲ್ಲಿ ಕೊರೊನಾ ಭೀತಿಯಿಂದ ಮಗನೊಬ್ಬ ವೃದ್ಧ ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿದ್ದ ಘಟನೆ ನಡೆದಿದೆ. ಈ ವಿಷಯ ತಿಳಿದ ಮಹಿಳೆಯ ಮೊಮ್ಮಗ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಅಜ್ಜಿಯನ್ನು ರಕ್ಷಿಸಿದ್ದಾನೆ.

Agra
ವೃದ್ಧ ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿದ್ದ ಮಗ
author img

By

Published : May 5, 2021, 10:45 AM IST

ಆಗ್ರಾ (ಉತ್ತರ ಪ್ರದೇಶ): ಕೊರೊನಾ ಭೀತಿಯಿಂದ ಮಗನೊಬ್ಬ ಹೆತ್ತ ತಾಯಿಯನ್ನೇ ಕೋಣೆಯೊಳಗೆ ಕೂಡಿ ಹಾಕಿದ್ದ ಘಟನೆ ಆಗ್ರಾ ಜಿಲ್ಲೆಯ ಕಮಲಾ ನಗರದಲ್ಲಿ ನಡೆದಿದೆ.

ವೃದ್ಧ ತಾಯಿಯನ್ನು ಕೋಣೆಯೊಳಗೆ ಕೂಡಿ ಹಾಕಿದ್ದ ಮಗ

ವೃದ್ಧ ಮಹಿಳೆಯ ಪತಿ ಇತ್ತೀಚೆಗೆ ಕೋವಿಡ್​​​ನಿಂದ ಮೃತಪಟ್ಟಿದ್ದರು. ಪತಿಯ ಅಂತಿಮ ವಿಧಿವಿಧಾನ ಮುಗಿಸಿ ಮನೆಗೆ ಹಿಂದಿರುಗಿದಾಗ ಆಕೆಯ ಮಗ ರಾಕೇಶ್ ಅಗರ್ವಾಲ್, ಒಂದು ಕೋಣೆಯೊಳಗೆ ಕೂಡಿ ಹಾಕಿ ಬೀಗ ಹಾಕಿದ್ದಾನೆ. ಬಳಿಕ ರಾಕೇಶ್​ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಯಾರಿಗೂ ತಿಳಿಯದ ಹಾಗೆ ಮನೆ ತೊರೆದಿದ್ದಾನೆ. ಈ ವಿಷಯ ತಿಳಿದ ಮಹಿಳೆಯ ಮೊಮ್ಮಗ ಅನುಪ್ ಗರ್ಗ್ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಅಜ್ಜಿಯನ್ನು ರಕ್ಷಿಸಿದ್ದಾನೆ. ಜೊತೆಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನೆಯ ಬಗ್ಗೆ ಕೇಳಿದಾಗ, ವೃದ್ಧ ಮಹಿಳೆ ತನ್ನ ಮಗನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮಗ ತನ್ನೊಂದಿಗೆ ತುಂಬಾ ಅಸಭ್ಯವಾಗಿ ವರ್ತಿಸುತ್ತಾನೆ. ನಾನು ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿಲ್ಲವಾದರೂ ಕೋಣೆಯೊಳಗೆ ಬೀಗ ಹಾಕಿ ತಿಳಿಸದೆ ಮನೆಯಿಂದ ಹೊರಟುಹೋಗಿದ್ದಾನೆ ಎಂದು ದೂರಿದ್ದಾರೆ.

ಇದನ್ನೂ ಓದಿ: ಮೂರನೇ ಬಾರಿಗೆ ಬಂಗಾಳದ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.