ETV Bharat / bharat

ಹೊಸ ಮೊಬೈಲ್​ ಕೊಡಿಸಲಿಲ್ಲವೆಂದು, ತಾಯಿಯನ್ನು ರುಬ್ಬುಗಲ್ಲಿನಿಂದ ಹೊಡೆದು ಕೊಂದ ಮಗ! - ರುಬ್ಬುಗಲ್ಲಿನಲ್ಲಿ ಹೊಡೆದು ತಾಯಿಯನ್ನು ಕೊಂದ ಮಗ

ತೆಲಂಗಾಣದ ಜೋಗುಲಂಬ ಗದ್ವಾಲ್ ಜಿಲ್ಲೆಯಲ್ಲಿ ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ಮಗನೋರ್ವ ತನ್ನ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ..

Son killed mother for not giving money to buy a cellphone in Telangana
ಹೊಸ ಮೊಬೈಲ್​ ಕೊಡಿಸಲಿಲ್ಲವೆಂದು, ತಾಯಿಯನ್ನು ರುಬ್ಬುಗಲ್ಲಿನಿಂದ ಹೊಡೆದು ಕೊಂದ ಮಗ!
author img

By

Published : Mar 26, 2022, 4:36 PM IST

ಜೋಗುಲಂಬ, ತೆಲಂಗಾಣ : ಮೊಬೈಲ್ ತೆಗೆದುಕೊಳ್ಳಲು ಹಣ ನೀಡಲಿಲ್ಲವೆಂದು ಮಗನೇ ತಾಯಿಯನ್ನು ಬರ್ಬರವಾಗಿ ಕೊಂದ ಘಟನೆ ಜೋಗುಲಂಬ ಗದ್ವಾಲ್ ಜಿಲ್ಲೆಯ ಉಂಡವ್ಲಲಿ ಮಂಡಲ್​ನ ಶೆರುಪಲ್ಲಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿ ಎಂಬುವರು ಕೊಲೆಗೀಡಾಗಿದ್ದು, ಪುತ್ರ ಮಹೇಶ್ ಎಂಬಾತ ರುಬ್ಬುಗಲ್ಲು ಎತ್ತಿ ಹಾಕಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಮೃತ ಮಹಿಳೆ ಕೂಲಿ ಕೆಲಸ ಮಾಡಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಕೊಲೆಯಾದ ಲಕ್ಷ್ಮಿವೆಂಕಟೇಶ್ವರುಲು ಎಂಬುವರ ಪತ್ನಿಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವೆಂಕಟೇಶ್ವರುಲು ಅನಾರೋಗ್ಯ ಸಮಸ್ಯೆಯಿಂದ ಕೂಲಿ ಕೆಲಸಕ್ಕೆ ಕೆಲವು ದಿನಗಳಿಂದ ತೆರಳದೇ ಮನೆಯಲ್ಲಿ ಉಳಿದುಕೊಂಡಿದ್ದರು. ಲಕ್ಷ್ಮು ಕೂಲಿ ಕೆಲಸಕ್ಕೆ ತೆರಳಿ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಹಿರಿಯ ಮಗ ಮಹೇಶ್ ಇಂಟರ್​ಮೀಡಿಯೇಟ್ ನಂತರ ಬೇರೆಯವರ ಜಮೀನುಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ.

Son killed mother for not giving money to buy a cellphone, jogulamba district
ಕೊಲೆಯಾದ ಲಕ್ಷ್ಮಿ

ಕೆಲವು ದಿನಗಳ ಹಿಂದೆ, ಮಹೇಶ್ ತನ್ನ ತಾಯಿ ಲಕ್ಷ್ಮಿಗೆ ಹೊಸ ಮೊಬೈಲ್​ ಕೊಡಿಸುವಂತೆ ಕೇಳಿದ್ದಾನೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಅವರ ತಾಯಿ ಮೊಬೈಲ್ ಫೋನ್ ಕೊಡಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಮತ್ತೆ ಫೋನ್​ ಕೊಡಿಸುವಂತೆ ಕೇಳಿದ್ದಾನೆ. ಈ ವೇಳೆ ಮಾತಿನ ಚಕಮಕಿಯಾಗಿ, ಜಗಳವಾಗಿದೆ. ಈ ವೇಳೆ ಮಹೇಶ್ ರುಬ್ಬುಗುಂಡಿನಿಂದ ಹಲ್ಲೆ ನಡೆಸಿದ್ದಾನೆ. ಲಕ್ಷ್ಮಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಆ್ಯಂಬುಲೆನ್ಸ್​ಗೆ ಫೋನ್ ಮಾಡಿದ್ದು, ಆ್ಯಂಬುಲೆನ್ಸ್ ಬರುವ ವೇಳೆಗೆ ತೀವ್ರ ರಕ್ತಸ್ರಾವದಿಂದ ಲಕ್ಷ್ಮಿ ಸಾವನ್ನಪ್ಪಿದ್ದಾರೆ.

ಮೊಬೈಲ್ ವಿಚಾರಕ್ಕೆ ತಾಯಿಯನ್ನು ಕೊಂದ ಮಗ

ಮಕ್ಕಳಿಬ್ಬರೂ ಕ್ರಿಮಿನಲ್​ಗಳು : ಕಿರಿಯ ಮಗ ಸಾಲೆಮನ್ ಇತ್ತೀಚೆಗೆ ಕಾರೊಂದರ ಗಾಜುಗಳನ್ನು ಒಡೆದು, ಇಬ್ಬರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಇನ್ನು ಮಹೇಶ್ ಕೆಲವು ದಿನಗಳ ಹಿಂದೆ ತೋಟವೊಂದರಲ್ಲಿದ್ದ ಒಣಗಿದ್ದ ಮೆಣಸಿನಕಾಯಿ ಗಿಡಗಳ ರಾಶಿಗೆ ಬೆಂಕಿ ಇಟ್ಟು, ಅದರೊಳಗೆ ಹಾರಿದ್ದು, ಕೈಗಳಿಗೆ ಗಾಯ ಮಾಡಿಕೊಂಡಿದ್ದನು. ಇದರಿಂದಾಗಿ ಅವನ ಗಾಯಗಳನ್ನು ಗುಣಪಡಿಸುವ ಸಲುವಾಗಿ ಲಕ್ಷ್ಮಿ ಮನೆಯಲ್ಲಿಯೇ ಇದ್ದಳು ಎಂದು ತಿಳಿದು ಬಂದಿದ್ದು, ಇದೇ ವೇಳೆ ಮೊಬೈಲ್​ ಫೋನ್​ಗಾಗಿ ಜಗಳ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಸದಾ ಫೋನ್​​ನಲ್ಲಿ ಮಾತನಾಡುತ್ತಾಳೆ ಎಂದು ಪತ್ನಿಯನ್ನ ಬರ್ಬರವಾಗಿ ಕೊಂದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.