ETV Bharat / bharat

ಅಪಘಾತದಲ್ಲಿ ಏರ್​ಬ್ಯಾಗ್ ತೆರೆಯದೇ ವೈದ್ಯ ಸಾವು​: ಆನಂದ್​ ಮಹೀಂದ್ರಾ ಸೇರಿ 13 ಜನರ ಮೇಲೆ ಕೇಸ್​ ದಾಖಲಿಸಿದ ವ್ಯಕ್ತಿ

ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಕಾರು ಅಪಘಾತಕ್ಕೀಡಾದಾಗ ಏರ್​ಬ್ಯಾಗ್​ ಓಪನ್​ ಆಗಿರಲಿಲ್ಲ. ಘಟನೆಯಲ್ಲಿ ವೈದ್ಯರೊಬ್ಬರು ಸಾವನ್ನಪ್ಪಿದ್ದರು. ಸಾವಿಗೆ ಕಾರಿನ ದೋಷ ಕಾರಣ ಎಂದು ಕಂಪನಿಯ ಮೇಲೆಯೇ ವ್ಯಕ್ತಿಯೊಬ್ಬರು ಕೇಸ್​ ದಾಖಲಿಸಿದ್ದಾರೆ.

ಆನಂದ್​ ಮಹೀಂದ್ರಾ
ಆನಂದ್​ ಮಹೀಂದ್ರಾ
author img

By ETV Bharat Karnataka Team

Published : Sep 25, 2023, 11:06 PM IST

ಕಾನ್ಪುರ (ಉತ್ತರಪ್ರದೇಶ) : ಕಾರು ಅಪಘಾತಕ್ಕೀಡಾದಾಗ ಜೀವ ರಕ್ಷಣಾ ಕವಚಗಳನ್ನು ಅಳವಡಿಸಲಾಗಿರುತ್ತದೆ. ಅದರಲ್ಲಿ ಏರ್​ಬ್ಯಾಗ್​ ಕೂಡ ಒಂದಾಗಿದೆ. ಉತ್ತರಪ್ರದೇಶದ ಕಾನ್ಪುರದಲ್ಲಿ ವೈದ್ಯರ ಕಾರು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದರೂ, ಏರ್​ಬ್ಯಾಗ್​ ಮಾತ್ರ ತೆರೆದುಕೊಂಡಿಲ್ಲ. ಇದರಿಂದಾಗಿ ತನ್ನ ಮಗ ಸಾವಿಗೀಡಾಗಿದ್ದಾನೆ ಎಂದು ಮಹೀಂದ್ರಾ ಸಂಸ್ಥೆಯ ವಿರುದ್ಧ ಕೇಸ್​ ಹಾಕಲಾಗಿದೆ.

ಘಟನೆಯನ್ನು ಮಹೀಂದ್ರಾ ಗ್ರೂಪ್‌ ಮೊದಲು ನಿರ್ಲಕ್ಷಿಸಿತ್ತು. ಇದರ ವಿರುದ್ಧ ಕೋರ್ಟ್ ಮೊರೆ ಹೋದ ಬಳಿಕ ಪೊಲೀಸರು ಗ್ರೂಪ್​ ಅಧ್ಯಕ್ಷರು ಸೇರಿದಂತೆ 13 ಜನರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಘಟನೆಯ ವಿವರ: 2021 ರಲ್ಲಿ ಈ ಅಪಘಾತ ಸಂಭವಿಸಿತ್ತು. ಕಾನ್ಪುರದ ಜೂಹಿ ನಿವಾಸಿಯಾದ ವೈದ್ಯ ಅಪೂರ್ವ್​ ಎಂಬುವರು ಸಾವಿಗೀಡಾದವರು. ವೈದ್ಯ ಅಪೂರ್ವ್​ ಅವರು ಜನವರಿ 14 ರಂದು ಸ್ನೇಹಿತರೊಂದಿಗೆ ಕಾನ್ಪುರಕ್ಕೆ ಮಹೀಂದ್ರಾ ಸಂಸ್ಥೆಯ ಸ್ಕಾರ್ಪಿಯೋ ಕಾರಿನಲ್ಲಿ ತೆರಳುತ್ತಿದ್ದರು. ತಂದೆ ರಾಜೇಶ್​ ಮಿಶ್ರಾ ಅವರು ಈ ಕಾರನ್ನು ತಮ್ಮ ವೈದ್ಯ ಪುತ್ರ ಅಪೂರ್ವಗೆ 2020 ರಲ್ಲಿ ಉಡುಗೊರೆಯಾಗಿ ನೀಡಿದ್ದರು. ಒಂದು ವರ್ಷದಿಂದ ಅವರ ಕಾರನ್ನು ಬಳಸುತ್ತಿದ್ದರು.

ಕಾನ್ಪುರಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಹಲವು ಬಾರಿ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ. ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಭೀಕರ ಅಪಘಾತದ ವೇಳೆ ಡಾ.ಅಪೂರ್ವ ಅವರು ಮತ್ತು ಅವರ ಸ್ನೇಹಿತರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರು. ಇಂತಹ ದೊಡ್ಡ ದುರಂತ ಸಂಭವಿಸಿದ್ದರೂ, ಜೀವ ರಕ್ಷಕವಾದ ಏರ್​​ಬ್ಯಾಗ್​ ತೆರೆದುಕೊಂಡಿರಲಿಲ್ಲ.

ಕಾರಿನ ದೋಷದಿಂದಾಗಿ ಸಾವು: ಅಪಘಾತದಲ್ಲಿ ಡಾ.ಅಪೂರ್ವ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ತಂದೆ ರಾಜೇಶ್ ಮಿಶ್ರಾ ಅವರು ಪೊಲೀಸರ ನೆರವಿನೊಂದಿಗೆ ಕಾರಿನ ಸ್ಥಿತಿಯನ್ನು ಪರಿಶೀಲಿಸಿದಾಗ ಕಾರಿನ ದೋಷ ಕಂಡುಬಂದಿತ್ತು. ಇದನ್ನೇ ಕಾರಣ ಮಾಡಿಕೊಂಡು ಮಿಶ್ರಾ ಅವರು ಏರ್ ಬ್ಯಾಗ್ ತೆರೆಯದ ಕಾರಣ ಮಗ ಸಾವನ್ನಪ್ಪಿದ್ದಾನೆ ಎಂದು ದೂರಿದ್ದರು. ಘಟನೆಯ ಬಗ್ಗೆ ಮಹೀಂದ್ರಾ ಗ್ರೂಪ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ನೆರವಿಗೆ ಬರುವ ಬದಲು ದೂರನ್ನು ನಿರ್ಲಕ್ಷಿಸಿದ್ದರು.

ಇದರ ವಿರುದ್ಧ ರಾಜೇಶ್ ಮಿಶ್ರಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ, ಕಾರಿನ ಸಂಸ್ಥೆಯ ವಿರುದ್ಧ ಕೇಸ್​ ದಾಖಲಿಸಲು ಸೂಚಿಸಿತ್ತು. ಕೋರ್ಟ್​ ಆದೇಶದ ಮೇರೆಗೆ ರಾಯಪುರ ಪೊಲೀಸ್ ಠಾಣೆಯಲ್ಲಿ ಮಹೀಂದ್ರಾ ಗ್ರೂಪ್‌ನ 13 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಅಧ್ಯಕ್ಷರ ಮೇಲೂ ಕೇಸ್​: ಕೋರ್ಟ್​ ಸೂಚನೆಯ ಮೇರೆಗೆ ಗ್ರೂಪ್​ನ ಮುಖ್ಯಸ್ಥರಾದ ಆನಂದ್​ ಮಹೀಂದ್ರಾ ಅವರು ಸೇರಿದಂತೆ ಇನ್ನಿತರ ಅಧಿಕಾರಿಗಳ ವಿರುದ್ಧ ಕೇಸ್​ ಜಡಿಯಲಾಗಿದೆ. ಪುತ್ರನ ಸಾವಿಗೆ ಏರ್​ಬ್ಯಾಗ್​ ಕಾರಣ ಎಂದು ಮಿಶ್ರಾ ಅವರು ದೂರಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿದೆ.

ಇದನ್ನೂ ಓದಿ: ಮತ್ತೆ ಎನ್​ಡಿಎ ಕೂಟಕ್ಕೆ ಜೆಡಿಯು: ಗಾಳಿಸುದ್ದಿ ಅಲ್ಲಗಳೆದ ಸಿಎಂ ನಿತೀಶ್​ಕುಮಾರ್​, ಮರಳಿ ಸೇರಿಸಲ್ಲ ಎಂದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.