ಶಿಮ್ಲಾ/ಹಿಮಾಚಲ ಪ್ರದೇಶ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ತಾಯಿಯ ಮೃತದೇಹವನ್ನು ಹೊರಲು, ಅಂತ್ಯಸಂಸ್ಕಾರ ಮಾಡಲು ಯಾರೂ ಮುಂದೆ ಬರದ ಹಿನ್ನೆಲೆ ಆಕೆಯ ಮಗ ಒಬ್ಬನೇ ಶವ ಹೆಗಲ ಮೇಲೆ ಹೊತ್ತುಕೊಂಡು ಹೋದ ಹೃದಯ ವಿದ್ರಾವಕ ಘಟನೆ ನಡೆದಿದೆ.
ರಾನಿತಾಲ್ ಬಳಿಯ ಭಂಗ್ವಾರ್ನಲ್ಲ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕಿತರಿಗೆ ಸಹಾಯ ಮಾಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಜನ ಹೇಳ್ತಾರೆ. ಆದರೆ, ಸಹಾಯ ಮಾಡುವ ಸಮಯ ಬಂದಾಗ ಯಾರೂ ಮುಂದೆ ಬರುವುದಿಲ್ಲ.
ಇನ್ನ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಿಮ್ಲಾ ಗ್ರಾಮೀಣ ಪ್ರದೇಶದ ಕಾಂಗ್ರೆಸ್ ಶಾಸಕ ವಿಕ್ರಮಾದಿತ್ಯ ಸಿಂಗ್, ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ "ದೇವಭೂಮಿ ಹಿಮಾಚಲ್ ಸಂಸ್ಕೃತಿ ನಮಗೆ ಇದನ್ನು ಕಲಿಸುವುದಿಲ್ಲ, ಇದು ನಮ್ಮೆಲ್ಲರಿಗೂ ನಾಚಿಕೆಗೇಡಿನ ಸಂಗತಿ" ಎಂದು ಬರೆದಿದ್ದಾರೆ.