ETV Bharat / bharat

Abhilash Tomy: ಮಾನವಸಹಿತ ಬಾಹ್ಯಾಕಾಶ ಗಗನ್​ಯಾನ್ ಪಯಣದಲ್ಲಿ ಟೋಮಿ.. ಮಾಹಿತಿ ಹಂಚಿಕೊಂಡ ಅಭಿಲಾಷ್ ​ - ಮಾನವಸಹಿತ ಬಾಹ್ಯಾಕಾಶ ಗಗನ್​ಯಾನ್ ಪಯಣ

Gaganyaan Manned Space Mission: ಇಸ್ರೋದ 3 ಜನರನ್ನು ಒಳಗೊಂಡ ಮಾನವ ಸಹಿತ ಗಗನ್​ಯಾನ್ ಯೋಜನೆಯಲ್ಲಿ ​ಮಾಜಿ ನೌಕಾ ಅಧಿಕಾರಿ ಅಭಿಲಾಷ್ ಟೋಮಿ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Abhilash Tomy
Abhilash Tomy
author img

By ETV Bharat Karnataka Team

Published : Aug 23, 2023, 3:36 PM IST

ಕೊಚ್ಚಿ (ಕೇರಳ): ಇಸ್ರೋ ಇಂದು ಒಂದು ಮಹತ್ವದ ಪ್ರಯೋಗದ ಯಶಸ್ಸನ್ನು ಎದುರು ನೋಡುತ್ತಿದೆ. ಇದೇ ವೇಳೆ ಮುಂದಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯೋಜನೆಯ ಬಗ್ಗೆ ಕಮಾಂಡರ್ ಅಭಿಲಾಷ್ ಟೋಮಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ 2022 ರಲ್ಲಿ ಎರಡನೇ ಸ್ಥಾನ ಗಳಿಸಿದ ಕೇರಳದ ಮಾಜಿ ನೌಕಾ ಅಧಿಕಾರಿ ಮತ್ತು ಭೂಮಿಯನ್ನು ಏಕಾಂಗಿಯಾಗಿ ಪ್ರದಕ್ಷಿಣೆ ಹಾಕಿದ ವ್ಯಕ್ತಿ ಅಭಿಲಾಷ್ ಟೋಮಿ. ಇವರು ಮುಂದಿನ ಇಸ್ರೋದ ಗಗನ್‌ಯಾನ್​ನಲ್ಲಿ ಇರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಟಾಮಿ ಇಸ್ರೋದೊಂದಿಗೆ ಸೇರಿ ಬಾಹ್ಯಾಕಾಶದಲ್ಲಿ ಭೂಮಿಯನ್ನು ಸುತ್ತಿ ಬರುವುದಕ್ಕೆ ಕುತೂಹಲವನ್ನು ಹೊಂದಿದ್ದೇನೆ. ಇಸ್ರೋದೊಂದಿಗೆ ಮಾತುಕತೆ ನಡೆದಿರುವುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್‌ ಆ್ಯಪ್ (ಹಿಂದಿನ ಟ್ವಿಟರ್​)​ನಲ್ಲಿ ಹಂಚಿಕೊಂಡಿದ್ದಾರೆ.

  • Update

    I will be working with the Navy for their next circumnavigation attempt.

    In addition I am also helping @isro with India’s first manned space mission.

    Thrilled to be consulting for a sea and space circumnavigation simultaneously. Both have been very close to my heart.… https://t.co/m7sYDZvJqu

    — Cdr Abhilash Tomy KC, NM (@abhilashtomy) August 21, 2023 " class="align-text-top noRightClick twitterSection" data=" ">

ಇದಲ್ಲದೆ, ಟೋಮಿ ಅವರು ಭಾರತೀಯ ನೌಕಾಪಡೆಯೊಂದಿಗೆ ಮತ್ತೊಮ್ಮೆ ಭೂಮಿಯನ್ನು ಪರ್ಯಟನೆ ಮಾಡುವ ಮಹಾತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದ್ದಾರೆ. "ಸಮುದ್ರ ಮತ್ತು ಬಾಹ್ಯಾಕಾಶ ಪ್ರದಕ್ಷಿಣೆಗೆ ಏಕಕಾಲದಲ್ಲಿ ಸಮಾಲೋಚನೆ ನಡೆಸುತ್ತಿರುವುದಕ್ಕೆ ರೋಮಾಂಚನವಾಗಿದೆ. ಎರಡೂ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿವೆ. ನಿಜವಾಗಿ, ಸಾಹಸವು ಅಪರಿಚಿತ ಫಲಿತಾಂಶವನ್ನು ಹೊಂದಿದೆ. #gaganyaan," ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಗಗನ್​ಯಾನ್ ಎಂಬುದು ಇಸ್ರೋದ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ಇದರಲ್ಲಿ ಮಾನವ ಸಹಿತ ನೌಕೆ 400 ಕಿಲೋ ಮೀಟರ್​ ಎತ್ತರದಲ್ಲಿ ಕಕ್ಷೆಗೆ 3 ದಿನಗಳವರೆಗೆ ಪರ್ಯಟನೆ ಮಾಡಲಿದೆ. ಮೂರು ಜನ ಇದರಲ್ಲಿ ಪ್ರಯಾಣ ಮಾಡಲಿದ್ದು, ಈ ತಂಡದಲ್ಲಿ ಅಭಿಲಾಷ್ ಟೋಮಿ ಸಹ ಇದ್ದಾರೆ. ಮೂರು ದಿನದ ಪ್ರಯಾಣದ ನಂತರ ಅಂತರಿಕ್ಷ ನೌಕೆಯಲ್ಲಿರುವವರನ್ನು ಸಮುದ್ರದಲ್ಲಿ ಇಳಿಸಲಾಗುತ್ತದೆ. ಈ ಮೂಲಕ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡಲಿದೆ.

ಈ ವರ್ಷ ಏಪ್ರಿಲ್​ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ರೇಸ್ 2022 ಟೋಮಿ ಅವರು ಪೂರ್ಣಗೊಳಿಸಿದರು. ಈ ರೇಸ್​ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ. ಗೋಲ್ಡನ್ ಗ್ಲೋಬ್ ರೇಸ್ 2022 ನಲ್ಲಿ ಟೋಮಿ ಎರಡನೇ ಸ್ಥಾನವನ್ನು ಗಳಿಸಿದರು. ಫ್ರಾನ್ಸ್‌ನ ಲೆಸ್ ಸೇಬಲ್ಸ್-ಡಿ'ಒಲೋನ್‌ನಿಂದ ಸೆಪ್ಟೆಂಬರ್ 4, 2022 ರಂದು ಏಕವ್ಯಕ್ತಿ ಪ್ರಪಂಚ ಪರ್ಯಟನಾ ನೌಕಾಯಾನ ಸ್ಪರ್ಧೆ ಇದಾಗಿತ್ತು. ಅದಕ್ಕೂ ಮೊದಲು, ಅಭಿಲಾಷ್ ಟೋಮಿ 2018 ರಲ್ಲಿ ಗೋಲ್ಡನ್ ಗ್ಲೋಬ್‌ನ 50 ನೇ ವಾರ್ಷಿಕೋತ್ಸವದ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಆ ವರ್ಷದ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾಗ ನೌಕೆ ಚಂಡಮಾರುತದಿಂದ ಹಾನಿಗೊಳಗಾಯಿತು. ಇದರಿಂದ ಅವರು 82 ದಿನ ಸಮುದ್ರದಲ್ಲಿ ಕಳೆದಿದ್ದರು, ನಂತರ ಅವರನ್ನು ರಕ್ಷಿಸಲಾಗಿತ್ತು. (ಪಿಟಿಐ)

ಇದನ್ನೂ ಓದಿ: Chandrayaan 3: ಕೊನೆಯ ಮಹತ್ವದ ಇಪ್ಪತ್ತು ನಿಮಿಷ.. ನೌಕೆಯ ಚಲನೆಯಲ್ಲಾಗುವ ಬದಲಾವಣೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.