ದೆಹಲಿ/ಬೆಂಗಳೂರು: ಇದೇ ಶನಿವಾರ ವರ್ಷದ ಕೊನೆಯ ಸೂರ್ಯಗ್ರಹಣ ಘಟಿಸಲಿದೆ. ಅಕ್ಟೋಬರ್ 14 ರಂದು ಸಂಭವಿಸಲಿರುವ ಈ ಗ್ರಹಣವು ಭಾರತ ಹೊರತುಪಡಿಸಿ ಪಶ್ಚಿಮ ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಸಾಗರ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಮೆಕ್ಸಿಕೊದಲ್ಲಿ ಕಂಡುಬರಲಿದೆ. ಇದೇ ತಿಂಗಳ ಕೊನೆಯಲ್ಲಿ ಚಂದ್ರಗ್ರಹಣವೂ ಸಂಭವಿಸಲಿದ್ದು ಆಕಾಶ ಎರಡು ವಿಶೇಷ ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ.
-
On Oct. 14, 2023, people in the Americas can view the Sun dimming to 10% its normal brightness, leaving only a bright “ring of fire” of sunlight as the Moon eclipses the Sun.
— NASA Earth (@NASAEarth) October 13, 2023 " class="align-text-top noRightClick twitterSection" data="
Those in parts of New Mexico may also see bright streaks across the sky from the sounding rockets. pic.twitter.com/M9jBliuYfi
">On Oct. 14, 2023, people in the Americas can view the Sun dimming to 10% its normal brightness, leaving only a bright “ring of fire” of sunlight as the Moon eclipses the Sun.
— NASA Earth (@NASAEarth) October 13, 2023
Those in parts of New Mexico may also see bright streaks across the sky from the sounding rockets. pic.twitter.com/M9jBliuYfiOn Oct. 14, 2023, people in the Americas can view the Sun dimming to 10% its normal brightness, leaving only a bright “ring of fire” of sunlight as the Moon eclipses the Sun.
— NASA Earth (@NASAEarth) October 13, 2023
Those in parts of New Mexico may also see bright streaks across the sky from the sounding rockets. pic.twitter.com/M9jBliuYfi
ಸೂರ್ಯಗ್ರಹಣ ಎಂದರೇನು?: ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಖಗೋಳ ಪ್ರಕ್ರಿಯೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಈ ಸೂರ್ಯಗ್ರಹಣ ಆಗುತ್ತದೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬರುವುದರಿಂದ ಚಂದ್ರನು ಸೂರ್ಯನ ಕಿರಣಗಳನ್ನು ಭೂಮಿಯ ಮೇಲೆ ಬೀಳದಂತೆ ತಡೆಯುತ್ತಾನೆ. ಇದನ್ನೇ ಸೂರ್ಯಗ್ರಹಣ ಎನ್ನುವರು.
ಸೂರ್ಯಗ್ರಹಣದ ಸಮಯ: 2023ರ ಏಪ್ರಿಲ್ 20ರಂದು ಸೂರ್ಯಗ್ರಹಣ ಸಂಭವಿಸಿತ್ತು. ಅಕ್ಟೋಬರ್ 14ರಂದು ಸಂಭವಿಸುತ್ತಿರುವುದು ವರ್ಷದ ಎರಡನೇ ಸೂರ್ಯಗ್ರಹಣವಾಗಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:29ಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. 11:34 PMಕ್ಕೆ ಮುಕ್ತಾಯವಾಗುತ್ತದೆ. ಕೇವಲ ಐದು ನಿಮಿಷಗಳ ಕಾಲ ಮಾತ್ರ ಸಂಪೂರ್ಣ ಸೂರ್ಯಗ್ರಹಣ ಇರುತ್ತದೆ. ಉಳಿದಂತೆ ಕೆಲ ಭಾಗಗಳಲ್ಲಿ ಗೋಚರಿಸಲಿದೆ.
-
Watch the solar eclipse with NASA on Saturday, Oct. 14!
— NASA (@NASA) October 7, 2023 " class="align-text-top noRightClick twitterSection" data="
We'll have live updates as the "ring of fire" crosses from Oregon to Texas, starting at 11:30am ET (1530 UTC). Send us your eclipse Qs with #AskNASA—and check out what you'll see from your town: https://t.co/aVM22VO3HR pic.twitter.com/N3iEHmjYnt
">Watch the solar eclipse with NASA on Saturday, Oct. 14!
— NASA (@NASA) October 7, 2023
We'll have live updates as the "ring of fire" crosses from Oregon to Texas, starting at 11:30am ET (1530 UTC). Send us your eclipse Qs with #AskNASA—and check out what you'll see from your town: https://t.co/aVM22VO3HR pic.twitter.com/N3iEHmjYntWatch the solar eclipse with NASA on Saturday, Oct. 14!
— NASA (@NASA) October 7, 2023
We'll have live updates as the "ring of fire" crosses from Oregon to Texas, starting at 11:30am ET (1530 UTC). Send us your eclipse Qs with #AskNASA—and check out what you'll see from your town: https://t.co/aVM22VO3HR pic.twitter.com/N3iEHmjYnt
ಸೂರ್ಯಗ್ರಹಣ ಗೋಚರ: ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿಯಲ್ಲಿ ಸಂಭವಿಸುವುದರಿಂದ, ಭಾರತದಲ್ಲಿ ಕಾಣುವುದಿಲ್ಲ. ಪಶ್ಚಿಮ ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್ ಸಾಗರ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಮೆಕ್ಸಿಕೊ ಸೇರಿ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ನವರಾತ್ರಿ ಪೂಜೆಗಳು ನಡೆಯುತ್ತಿದ್ದು ಸೂರ್ಯಗ್ರಹಣ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ಚಂದ್ರಗ್ರಹಣ ಎಂದರೇನು?: ಇದೇ ತಿಂಗಳ ಕೊನೆಯಲ್ಲಿ ಚಂದ್ರಗ್ರಹಣವೂ ಸಂಭವಿಸಲಿದೆ. ಅಕ್ಟೋಬರ್ 28 ರಂದು ರಾತ್ರಿ 11:31 ಗಂಟೆಗೆ ಪ್ರಾರಂಭವಾಗಿ ಬೆಳಗ್ಗೆ 3:36 ರವರೆಗೆ ಈ ಗ್ರಹಣ ಇರುತ್ತದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಹುಣ್ಣಿಮೆಯ ದಿನ ಮಾತ್ರ ಜರುಗುತ್ತದೆ.
ಇದನ್ನೂ ಓದಿ: ಗ್ರಹಣಗಳ ಅಪಾಯ ತಪ್ಪಿಸಲು ಉಡುಪಿ ಸಮುದ್ರ ತಟದಲ್ಲಿ ಅಘೋರಿಗಳಿಂದ ಅಕಾಲ ಮೃತ್ಯುಂಜಯ ಯಾಗ