ETV Bharat / bharat

ಮದುವೆಗೊಪ್ಪದ ಯುವಕ.. ಶೌಚಾಲಯದಲ್ಲಿ ನೇಣಿಗೆ ಶರಣಾದ ಸಾಫ್ಟ್​ವೇರ್​ ಇಂಜಿನಿಯರ್​​! - ಟೆಕ್ಸಾಸ್​ನಲ್ಲಿ ಚಿತ್ತೂರು ಜಿಲ್ಲೆಯ ಸ್ವಾಫ್ಟ್​ವೇರ್ ಉದ್ಯೋಗಿ ಆತ್ಮಹತ್ಯೆ,

ಯುವಕನೊಬ್ಬ ಮದುವೆಗೆ ನಿರಾಕರಿಸಿದ್ದರಿಂದ ಯುವತಿಯೊಬ್ಬಳು ಶೌಚಾಲಯದಲ್ಲಿ ನೇಣಿಗೆ ಶರಣಾದ ಘಟನೆ ಅಮೆರಿಕಾದ ಟೆಕ್ಸಾಸ್​ನಲ್ಲಿ ನಡೆದಿದೆ.

software employee committed suicide, Chittoor district software employee committed suicide, Chittoor district software employee committed suicide in Texas, Chittoor crime news, ಸ್ವಾಫ್ಟ್​ವೇರ್ ಉದ್ಯೋಗಿ ಆತ್ಮಹತ್ಯೆ, ಚಿತ್ತೂರು ಜಿಲ್ಲೆಯ ಸ್ವಾಫ್ಟ್​ವೇರ್ ಉದ್ಯೋಗಿ ಆತ್ಮಹತ್ಯೆ, ಟೆಕ್ಸಾಸ್​ನಲ್ಲಿ ಚಿತ್ತೂರು ಜಿಲ್ಲೆಯ ಸ್ವಾಫ್ಟ್​ವೇರ್ ಉದ್ಯೋಗಿ ಆತ್ಮಹತ್ಯೆ, ಚಿತ್ತೂರು ಅಪರಾಧ ಸುದ್ದಿ,
ಶೌಚಾಲಯದಲ್ಲಿ ನೇಣಿಗೆ ಶರಣಾದ ಸಾಫ್ಟ್​ವೇರ್​ ಎಂಜನಿಯರ್
author img

By

Published : Mar 5, 2021, 10:54 AM IST

ಚಿತ್ತೂರು/ಟೆಕ್ಸಾಸ್​ : ನಿಶ್ಚಿಯವಾಗಿದ್ದ ಮದುವೆಯನ್ನು ಯುವಕ ನಿರಾಕರಿಸಿದ್ದಕ್ಕೆ ಯುವತಿ ನೇಣಿಗೆ ಶರಣಾಗಿರುವ ಘಟನೆ ಅಮೆರಿಕದ ಟೆಕ್ಸಾಸ್​ನಲ್ಲಿ ನಡೆದಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ಚಿತ್ತೂರು ಪೊಲೀಸ್ ಕಾಲೋನಿಯ ಶ್ರೀಹರಿಯ ಮಗಳು ಸುಷ್ಮಾ (25) ತನ್ನ ಸಹೋದರನ ಮನೆಯಲ್ಲಿದ್ದು, ವ್ಯಾಸಂಗದ ಜೊತೆ ಸಾಫ್ಟ್​ವೇರ್​ ಕಂಪನಿಯೊಂದರಲ್ಲಿ​ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಪುತಲ್ಪಟ್ಟು ವಲಯದ ಬಂದರ್‌ಲಾಪಳ್ಳಿಯ ಮುರಳಿ ಮಗ ಭರತ್ ಟೆಕ್ಸಾಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇವರಿಬ್ಬರು ಟೆಕ್ಸಾಸ್​ನಲ್ಲಿದ್ದ ಕಾರಣ ಇವರ ಕುಟುಂಬಸ್ಥರು ಇಬ್ಬರಿಗೂ ಮದುವೆ ಮಾಡಬೇಕು ಎಂದು ನಿಶ್ಚಿಯಿಸಿದ್ದರು. ಅದರಂತೆ ಇಬ್ಬರಿಗೂ ಇದೇ ತಿಂಗಳು ಮದುವೆ ಫಿಕ್ಸ್​ ಆಗಿತ್ತು. ಮದುವೆಗೆ ಮನೆಯಲ್ಲಿ ಲಗ್ನಪತ್ರಿಕೆ ಮುದ್ರಿಸಿ ಭರ್ಜರಿ ತಯಾರಿ ನಡೆಸಿದ್ದರು. ಸುಮಾರು ಹತ್ತು ದಿನಗಳ ಹಿಂದೆ ಮದುವೆ ಸಮೀಪಿಸುತ್ತಿದ್ದಂತೆ ಇಬ್ಬರ ಮಧ್ಯೆ ಜಗಳವಾಗಿದೆ. ಇದರಿಂದಾಗಿ ಭರತ್​ ಈ ಮದುವೆಯನ್ನು ನಿರಾಕರಿಸಿದ್ದಾನೆ.

ಈಗ ನಾನು ನಿಮ್ಮ ಮಗಳನ್ನು ಮದುವೆಯಾಗಲು ಬಯಸುವುದಿಲ್ಲ. ನನಗೆ ಇನ್ನಷ್ಟು ಕಾಲಾವಕಾಶಬೇಕು ಎಂದು ಯುವತಿ ಪೋಷಕರಿಗೆ ಭರತ್​ ತಿಳಿಸಿದ್ದಾನೆ. ಇದರಿಂದ ಎರಡೂ ಕುಟುಂಬಗಳು ಇಬ್ಬರಿಗೂ ಬುದ್ಧಿ ಹೇಳಿದ್ದರು. ಕೆಲವು ದಿನಗಳ ನಂತರ ಎಲ್ಲವೂ ಸರಿಯಾಗುವುದೆಂದು ತಿಳಿದು ಎರಡು ಕುಟುಂಬಗಳು ಮದುವೆ ತಯಾರಿ ಮುನ್ನಡೆಸಿದ್ದರು.

ಆದ್ರೆ ಭರತ್​ ಮದುವೆಗೆ ನಿರಾಕರಿಸಿದ್ದಾನೆ ಎಂದು ಮನಸ್ತಾಪಗೊಂಡ ಸುಷ್ಮಾ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ವಿಷಯವನ್ನು ಸಹೋದರ ಕುಟುಂಬಸ್ಥರಿಗೆ ತಿಳಿಸಿದ್ದು, ಸುಷ್ಮಾ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.