ETV Bharat / bharat

ಬುಡಕಟ್ಟು ಮಹಿಳೆಯರ ಶ್ರಮಕ್ಕೆ ಸಿಕ್ಕಿತು ಫಲ.. ಆನ್​ಲೈನ್​​​ ಮಾರುಕಟ್ಟೆಗೂ ಲಗ್ಗೆ ಇಟ್ಟ ಪೊರಕೆ..

ಕಾಡುಮೇಡು ಅಲೆದು ಕಚ್ಚಾ ವಸ್ತು ಸಂಗ್ರಹಿಸುವ ಮಹಿಳೆಯರು ಬಳಿಕ ಅದರಿಂದ ಸುಂದರ ಪೊರಕೆ ಉತ್ಪಾದಿಸುತ್ತಾರೆ. ಆದರೆ, ಅಷ್ಟು ಕಷ್ಟ ಪಟ್ಟು ತಯಾರಿಸುವ ಪೊರಕೆಯನ್ನು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಈಗ ಜಿಲ್ಲಾಡಳಿತದ ಸಹಾಯದಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದು, ಪೊರಕೆಗಳ ಮಾರಾಟದಿಂದ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ..

author img

By

Published : Apr 22, 2021, 6:05 AM IST

soft-brooms-of-rayagada-would-be-available-in-e-market
ಬುಡಕಟ್ಟು ಮಹಿಳೆಯರ ಶ್ರಮಕ್ಕೆ ಸಿಕ್ಕಿತು ಫಲ

ಒಡಿಶಾ : ಮನೆಯ ಅಂದ ಹೆಚ್ಚಿಸುವ ಮೊದಲ ಸಾಧನ ಅಂತ ಏನಾದರೂ ಇದ್ರೇ ಅದು ಪೊರಕೆ. ಶ್ರೀಮಂತ-ಬಡವ ಎನ್ನದೇ ಪ್ರತಿಯೊಬ್ಬರ ಮನೆ ಸೌಂದರ್ಯ ಹೆಚ್ಚಿಸಿ ಶುಚಿಯಾಗಿಡುವ ಗೃಹಿಣಿಯರ ಒಡನಾಡಿ ಈ ಪೊರಕೆ. ಆದರೆ, ಇದೇ ಪೊರಕೆ ಈಗ ಗೃಹಿಣಿಯರ ಆದಾಯದ ಮೂಲವಾಗಿ ಮಾರ್ಪಟ್ಟಿದೆ.

ಪೊರಕೆ ಈಗ ಕೇವಲ ಆಕೆಯ ಒಡನಾಡಿಯಾಗಿ ಮಾತ್ರ ಉಳಿಯದೇ, ವಿದೇಶಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ರಾಯ್​​​ಗಢದ ಮೃದುವಾದ ಪೊರಕೆ ಈಗ ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್​​​ಗೂ ಲಗ್ಗೆ ಇಟ್ಟಿದೆ. ನೀವೆಲ್ಲೇ ಇದ್ದರೂ ಈ ದೇಶೀಯ ನಿರ್ಮಿತ ಪೊರಕೆಯನ್ನ ಒಂದೇ ಒಂದು ಕ್ಲಿಕ್​ನಲ್ಲಿ ಪಡೆದುಕೊಳ್ಳಬಹುದು.

ರಾಯ​ಗಢದ ಈ ಮೃದುವಾದ ಪೊರಕೆ ಈಗ ಆನ್​ಲೈನ್​​ ಜಗತ್ತಿಗೆ ಎಂಟ್ರಿ ಕೊಡಲು ಸಿದ್ಧಗೊಳ್ಳುತ್ತಿದೆ. ಬಾರ್​​ಕೋಡ್ ಕೆಲಸ ಮುಗಿಯುತ್ತಿದ್ದಂತೆ ಅಮೆಜಾನ್​ನಿಂದಲೇ ಆರ್ಡರ್ ಮಾಡಬಹುದು. ಈ ಮೃದು ಪೊರಕೆಗಳನ್ನು ಬುಡಕಟ್ಟು ಜನರು ವಾಸಿಸುವ ಒಡಿಶಾದ ಗುಡ್ಡಗಾಡು ಪ್ರದೇಶವಾದ ಕೊರಾಪುಟ್​, ಕಲಹುಂಡಿ, ಮಲ್ಕನ್​​ಗಿರಿ ಮತ್ತು ರಾಯ್​ಗಢ ಜಿಲ್ಲೆಯಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ.

ಆನ್​ಲೈನ್​​​ ಮಾರುಕಟ್ಟೆಗೂ ಲಗ್ಗೆ ಇಟ್ಟ ಪೊರಕೆ

ಕಾಡುಮೇಡು ಅಲೆದು ಕಚ್ಚಾ ವಸ್ತು ಸಂಗ್ರಹಿಸುವ ಮಹಿಳೆಯರು ಬಳಿಕ ಅದರಿಂದ ಸುಂದರ ಪೊರಕೆ ಉತ್ಪಾದಿಸುತ್ತಾರೆ. ಆದರೆ, ಅಷ್ಟು ಕಷ್ಟ ಪಟ್ಟು ತಯಾರಿಸುವ ಪೊರಕೆಯನ್ನು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಈಗ ಜಿಲ್ಲಾಡಳಿತದ ಸಹಾಯದಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದು, ಪೊರಕೆಗಳ ಮಾರಾಟದಿಂದ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ಬೆಟ್ಟದ ಪೊರಕೆ ಅಂತಲೇ ಫೇಮಸ್ : ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಪೊರಕೆಗಳಿಗೆ ಹೋಲಿಸಿದರೆ ರಾಯ್​ಗಢದ ಪೊರಕೆಗಳು ಗುಣಮಟ್ಟದಲ್ಲಿ ಶ್ರೇಷ್ಠವಾಗಿವೆ. ಬೆಟ್ಟದಿಂದ ಸಂಗ್ರಹಿಸಿದ ವಸ್ತುವಿನಿಂದ ಮಾಡಲಾದ ಪೊರಕೆಯನ್ನು ಬೆಟ್ಟದ ಪೊರಕೆ ಅಂತಲೂ ಕರೆಯಲಾಗುತ್ತದೆ. ಸಾಮಾನ್ಯ ಪೊರಕೆಗಳು 2-3 ತಿಂಗಳಲ್ಲಿ ಹಾಳಾಗುತ್ತವೆ.

ಆದರೆ, ಈ ಮೃದು ಪೊರಕೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಇದರಿಂದಲೇ ಈ ಪೊರಕೆಗೆ ಬೇಡಿಕೆ ಹೆಚ್ಚಿದ್ದು, ಗ್ರಾಮೀಣ ಮಹಿಳೆಯರ ಜೀವನ ಹಸನಾಗಿಸಿದೆ. ಮನೆಯ ಮೂಲೆಯಲ್ಲಿ ಬಿದ್ದಿರುತ್ತಿದ್ದ ಪೊರಕೆಗಳು ಈಗ ಬುಡಕಟ್ಟು ಮಹಿಳೆಯರ ಜೀವನ ಬೆಳಗಿವೆ. ಅಲ್ಲದೇ ಅವರನ್ನೆಲ್ಲ ಸ್ವಾವಲಂಬಿಗಳನ್ನಾಗಿ ಮಾಡಿದೆ. ಅಷ್ಟೇ ಅಲ್ಲ, ಸ್ಥಳೀಯ ಮಾರುಕಟ್ಟೆಯ ಜೊತೆ ವಿದೇಶಿ ಮಾರುಕಟ್ಟೆಗೂ ಲಗ್ಗೆ ಇಟ್ಟು, ಲೋಕಲ್ ಫಾರ್ ವೋಕಲ್ ಎಂಬ ಅಭಿಯಾನಕ್ಕೆ ಸೂಕ್ತ ಉದಾಹರಣೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.