ETV Bharat / bharat

ಸಾರ್ವಜನಿಕ ವಿನಾಶಕಾರಿ ಆಯುಧವಾಗುತ್ತಿರುವ 'ಸೋಷಿಯಲ್​ ಮೀಡಿಯಾ': ಬಾಂಬೆ ಹೈಕೋರ್ಟ್​ ಜಡ್ಜ್​

ಸಾಮಾಜಿಕ ಮಾಧ್ಯಮಗಳ ಮೂಲಕ ಸೃಷ್ಟಿಯಾಗುವ ಅನರ್ಥಗಳ ಬಗ್ಗೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ನ್ಯಾಯಮೂರ್ತಿ ಮಹೇಶ್ ಸೋನಕ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾ
ಸೋಷಿಯಲ್​ ಮೀಡಿಯಾ
author img

By ETV Bharat Karnataka Team

Published : Sep 30, 2023, 7:04 PM IST

ಪಣಜಿ (ಗೋವಾ) : ಸೋಷಿಯಲ್​ ಮೀಡಿಯಾ ಅದೆಷ್ಟು ಪ್ರಯೋಜಕಾರಿಯೋ ಅಷ್ಟೇ ಅಪಾಯಕಾರಿಯಾಗಿವೆ. ಇವು ಜನರನ್ನು ಹೆಚ್ಚು ಸೆಳೆಯುತ್ತಿವೆ. ಆದರೆ, ಇಂತಹ ಮಾಧ್ಯಮಗಳ ಮೇಲೆ ಕಡಿವಾಣ ಹಾಕುವ ಯಾವುದೇ ಸಂಘಟಿತ ಪ್ರಯತ್ನಗಳು ನಡೆದಿಲ್ಲ. ಇದು ಸ್ವಸ್ಥ ಸಮಾಜಕ್ಕೆ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದ ನ್ಯಾಯಮೂರ್ತಿ ಮಹೇಶ್ ಸೋನಕ್ ಶನಿವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೋವಾದಲ್ಲಿನ ಕಾಲೇಜೊಂದರಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ಮಾತನಾಡಿದ ನ್ಯಾಯಮೂರ್ತಿ ಸೋನಕ್ ಅವರು, ಹಲವಾರು ವಿಷಯಗಳನ್ನು ತಿಳಿಯದೇ, ಓದದೇ ನಿರ್ಧಾರಕ್ಕೆ ಬರುತ್ತಿದ್ದೇವೆ. ಇದು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಅನರ್ಥಕ್ಕೆ ಕಾರಣವಾಗುತ್ತಿದೆ. ಇಂದು ನಾವು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಯಂತ್ರಗಳನ್ನೇ ಆಧಾರವಾಗಿಟ್ಟುಕೊಂಡಿದ್ದರಿಂದ, ಯೋಚಿಸುವ ಪ್ರಯತ್ನ ಕೂಡ ಮನುಷ್ಯ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ನಾವು ಪರಿಸ್ಥಿತಿ ಮತ್ತು ಮನುಷ್ಯರ ಮೇಲೆಯೇ ಅನುಮಾನ ಪಡುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆಯು (ಎಐ) ತನ್ನದೇ ಆದ ಮಿತಿಯನ್ನು ಹೊಂದಿದೆ. ಆದರೆ, ನಾವು ಕೃತಕ ಬುದ್ಧಿಮತ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ನಮ್ಮ ಬುದ್ಧಿವಂತಿಕೆಯಿಂದ ಮಾಡಬೇಕಾದ ಪ್ರತಿ ಕೆಲಸಗಳನ್ನು ಯಂತ್ರ ಅಥವಾ ಅಲ್ಗಾರಿದಮ್‌ ಮೊರೆ ಹೋಗುತ್ತಿರುವುದು ಸಮಸ್ಯೆಗಳ ದಿನಗಳು ಸಮೀಪಿಸುತ್ತಿವ ಸೂಚನೆ ಇರಬಹುದು. ಮನುಷ್ಯ ಮತ್ತು ಯಂತ್ರದ ನಡುವೆ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಹಾಗೆಯೇ ಆಲೋಚನಾ ಸಾಮರ್ಥ್ಯಗಳನ್ನು ಕ್ಷೀಣಿಸಲು ಬಿಡಬಾರದು. ಕನಿಷ್ಠ ಪಕ್ಷ ಮಾನವಕುಲದ ವಿಶೇಷ ಗುಣವಾದ ಮಾನವೀಯತೆಯೂ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಸೋನಕ್ ಸಲಹೆ ನೀಡಿದರು.

ಸಾಮಾಜಿಕ ಮಾಧ್ಯಮಗಳನ್ನು ಅರಿಯಿರಿ: ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಯಾವುದೇ ಮಾಹಿತಿ ಮತ್ತು ಸುದ್ದಿಗಳ ಸತ್ಯಾಸತ್ಯತೆಗಳನ್ನು ಮೊದಲು ಅರಿಯಬೇಕು. ಸ್ಪಷ್ಟವಾಗಿ, ಸ್ವತಂತ್ರವಾಗಿ ಮತ್ತು ನಿರ್ಭಯವಾಗಿ ಆಲೋಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರತಿ ನಿಮಿಷವೂ ಶಕ್ತಿಯುತವಾಗಿ ಬೆಳೆಯುತ್ತಿರುವ ಸಮೂಹ ಮಾಧ್ಯಮ ಸಾಧನಗಳು ನಿರಂತರವಾಗಿ ನೀಡುವ ವಿಷಯಗಳ ಶೋಧ, ವಿಮರ್ಶೆ, ಅಗತ್ಯವಿದ್ದಲ್ಲಿ ತಿರಸ್ಕರಿಸುವುದನ್ನೂ ನಾವು ಕಲಿಯಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು.

ಈ ಹಿಂದೆ, ವಿಶ್ವವು ಸಾಮೂಹಿಕ ನಾಶದ ಆಯುಧಗಳ (ಡಬ್ಲ್ಯುಎಂಡಿ) ವಿರುದ್ಧ ಹೋರಾಡುತ್ತಿತ್ತು. ಅದರ ಜಾಗವನ್ನೀಗ ಸೋಷಿಯಲ್​ ಮೀಡಿಯಾಗಲೂ ಆಕ್ರಮಿಸಿವೆ. ಸಾಮೂಹಿಕ ಗಮನವನ್ನು ಸೆಳೆಯುವ ಅಸ್ತ್ರಗಳಾಗಿ ಮಾರ್ಪಟ್ಟಿವೆ. ಅವುಗಳನ್ನು ನಿಯಂತ್ರಿಸುವ ಪ್ರಬಲ ಅಸ್ತ್ರ ನಮ್ಮಲ್ಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾ ಕ್ರೇಜ್: ಶೇ.95 ರಷ್ಟು ಹದಿಹರೆಯದವರೇ ಆನ್ ಲೈನ್ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.