ಹೈದರಾಬಾದ್: ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ಹರಿದ ಜೀನ್ಸ್ ಬಗ್ಗೆ ಪ್ರತಿಕ್ರಿಯಿಸಿದ ಕೆಲ ದಿನಗಳ ನಂತರ, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ.
ಮಹಿಳೆಯರ ಹರಿದ ಜೀನ್ಸ್ ಚಿತ್ರಗಳ ಜೊತೆಗೆ ಕಾಮೆಂಟ್‌ಗಳು ಸಾಲುಸಾಲಾಗಿ ಬರುತ್ತಿವೆ. ರಾವತ್ ಅವರ ಹೇಳಿಕೆಯ ಬಗ್ಗೆ ಸಾಮಾನ್ಯ ಜನರು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ಬಟ್ಟೆಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವ ಬದಲು ಅವರ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿ ಎಂದು ಸೂಚಿಸಿದ್ದಾರೆ.
ಡೆಹ್ರಾಡೂನ್‌ನಲ್ಲಿ ಉತ್ತರಾಖಂಡ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಆಯೋಜಿಸಿದ್ದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ್ದ ರಾವತ್, ಹರಿದ ಜೀನ್ಸ್ ಧರಿಸಿದ್ದ ಮಹಿಳೆ ನನ್ನ ಪಕ್ಕ ವಿಮಾನದಲ್ಲಿ ಕುಳಿತಿದ್ದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ರಿಪ್ಡ್ ಜೀನ್ಸ್ ಧರಿಸಿ ಮಹಿಳೆ ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದೆ : ಉತ್ತರಾಖಂಡ ಸಿಎಂ
ಇತ್ತೀಚೆಗೆ ನಾನು ಜೈಪುರದಿಂದ ಹಿಂದಿರುಗುತ್ತಿದ್ದಾಗ ನನ್ನ ಪಕ್ಕದಲ್ಲಿ ಒಬ್ಬ ಮಹಿಳೆ ಕುಳಿತಿದ್ದನ್ನು ನಾನು ಗಮನಿಸಿದೆ. ಮೊಣಕಾಲಿನ ಭಾಗದಲ್ಲಿ ಹರಿದ ಜೀನ್ಸ್ ಧರಿಸಿದ್ದಳು. ಎನ್‌ಜಿಒ ನಡೆಸುತ್ತಿದ್ದ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಇದ್ದಳು ಎಂದು ಮಾಹಿತಿ ನೀಡಿದ ಅವರು, ನೀವು ಯಾವ ರೀತಿಯ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ತುಂಡು ಜೀನ್ಸ್ ಬಗೆಗಿನ ಉತ್ತರಾಖಂಡದ ಸಿಎಂ ಹೇಳಿಕೆಗೆ ಅಮಿತಾಬ್ ಮೊಮ್ಮಗಳಿಂದ ತಕ್ಕ ಪ್ರತ್ಯುತ್ತರ!!
ದೇಶದ ಸಂಸ್ಕೃತಿ ಮತ್ತು ಸಂಸ್ಕಾರವು ಮಹಿಳೆಯರನ್ನು ಮತ್ತು ಅವರ ಆಯ್ಕೆಗಳನ್ನು ಕುಳಿತು ನಿರ್ಣಯಿಸುವ ಪುರುಷರಿಂದ ಪ್ರಭಾವಿತವಾಗಿರುತ್ತದೆ. ನಿಮ್ಮ ಯೋಚನೆಯನ್ನು ಬದಲಾವಣೆ ಮಾಡಿಕೊಳ್ಳಿ, ಆಗ ದೇಶ ಬದಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಲಾಗಿದೆ.