ETV Bharat / bharat

ಕಿನ್ನೌರ್​ನಲ್ಲಿ ಭಾರಿ ಹಿಮಪಾತ: ಸೇಬು ಬೆಳೆ ಹಾನಿ, ಸಂಕಷ್ಟದಲ್ಲಿ ಬೆಳೆಗಾರರು

ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಹಿಮಪಾತವಾಗುತ್ತಿದೆ. ಈ ಹಿನ್ನೆಲೆ ಸೇಬು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

author img

By

Published : Oct 19, 2021, 5:24 PM IST

ಸೇಬು ಬೆಳೆ ಹಾನಿ, ಸಂಕಷ್ಟದಲ್ಲಿ ಬೆಳೆಗಾರ
ಸೇಬು ಬೆಳೆ ಹಾನಿ, ಸಂಕಷ್ಟದಲ್ಲಿ ಬೆಳೆಗಾರ

ಕಿನ್ನೌರ್ (ಹಿಮಾಚಲ ಪ್ರದೇಶ): ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಆಗುತ್ತಿರುವ ಹಿಮಪಾತವು ಸೇಬು ಬೆಳೆಗೆ ಹಾನಿಯನ್ನುಂಟು ಮಾಡಿದೆ. ಪೂಹ್ ಖಂಡದ ಸುಮಾರು 24 ಹಳ್ಳಿಗಳ ತೋಟಗಳಲ್ಲಿ ಆ್ಯಪಲ್ ಬೆಳೆ ಹಾನಿಗೊಳಗಾಗಿವೆ. ಕಲ್ಪಖಂಡದಲ್ಲೂ ಬೆಳೆಹಾನಿಯಿಂದಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸೇಬು ಬೆಳೆ ಹಾನಿ, ಸಂಕಷ್ಟದಲ್ಲಿ ಬೆಳೆಗಾರ

ಭಾರಿ ಹಿಮಪಾತದಿಂದಾಗಿ ಸೇಬಿನ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಬೆಳೆಗಾರರ ಒಂದು ವರ್ಷದ ಶ್ರಮ ವ್ಯರ್ಥವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉಪ ಆಯುಕ್ತ ಅಬಿದ್ ಹುಸೇನ್​ ಸಾದಿಕ್, ಎರಡು ದಿನಗಳಿಂದ ಸತತವಾಗಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಸೇಬಿನ ಬೆಳೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳು ಹಾನಿ ಕುರಿತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂಬಂಧ ಪಟ್ಟ ಇಲಾಖೆಗಳಿಗೆ ವರದಿ ಕಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.