ಸಮಸ್ತಿಪುರ (ಬಿಹಾರ): ಹಾವುಗಳು ಎಂದರೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ. ಯಾರೇ ಆದರೂ ಹಾವುಗಳು ಕಂಡೊಡನೆ ದೂರ ಓಡಿ ಹೋಗುತ್ತಾರೆ. ಆದರೆ, ಬಿಹಾರದ ಸಮಸ್ತಿಪುರ ಜಿಲ್ಲೆಯ ಸಿಂಘಿಯಾ ಘಾಟ್‌ನಲ್ಲಿ ಅದೊಂದು ಮಾತ್ರ ಇಡೀ ಗ್ರಾಮಸ್ಥರು ಹಾವುಗಳನ್ನು ಅಟಿಕೆಗಳನ್ನು ಬಳಸಿದಂತೆ ಬಳಸುತ್ತಾರೆ. ಕೈಯಲ್ಲಿ ಹಿಡಿದು, ಕುತ್ತಿಗೆ ಹಾಕಿಕೊಂಡು ಅವುಗಳೊಂದಿಗೆ ಮನಬಂದಂತೆ ಆಟವಾಡುತ್ತಾರೆ. ಇದನ್ನು ನಾಗಜಾತ್ರೆ ಎಂದೇ ಆಚರಿಸುತ್ತಾರೆ.
ಹೌದು, ಸೋಮವಾರ ಆಚರಿಸಿದ ನಾಗಪಂಚಮಿ ಹಬ್ಬದಂದು (ಬಿಹಾರದಲ್ಲಿ ಆಷಾಢದಲ್ಲೂ ನಾಗಪಂಚಮಿ ಆಚರಣೆ ಪದ್ಧತಿ ಇದೆಯಂತೆ) ದೊಡ್ಡವರು ಹಾಗೂ ಸಣ್ಣವರು ಎನ್ನದೇ ಎಲ್ಲರೂ ಹಾವುಗಳೊಂದಿಗೆ ಆಟವಾಡಿದ್ಧಾರೆ. ಇಲ್ಲಿನ ಭಗತ್ ನದಿಗೆ ಹೋಗಿ ಅದರಲ್ಲಿ ಮುಳುಗಿ ವಿಷಕಾರಿ ಹಾವುಗಳನ್ನು ಹಿಡಿದು ನಾಗ ಜಾತ್ರೆ ಆಚರಿಸಲಾಗಿದೆ. ಇದೊಂದು ದಿನ ಮಾತ್ರ ಯಾವುದೇ ಹಾವುಗಳು ಕಚ್ಚುವುದಿಲ್ಲ ಎಂಬುವುದು ಭಕ್ತರ ನಂಬಿಕೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಹಾವು ಯಾರಿಗಾದರೂ ಕಚ್ಚಿದರೆ ಅದು ಸಾಯಬಹುದು. ಆದರೆ, ಈ ನಾಗಪಂಚಮಿ ದಿನದಂದು ಹಾವು ಯಾರಿಗೂ ಕಚ್ಚುವುದಿಲ್ಲವಂತೆ. ಹೀಗಾಗಿ ನಿರ್ಭಯದಿಂದ ಹಾವುಗಳನ್ನು ಕೈಯಲ್ಲಿ ಹಿಡಿದು, ಕುತ್ತಿಗೆ ಹಾಕಿಕೊಳ್ಳುತ್ತಾರೆ. ಈ ದೃಶ್ಯವನ್ನು ನೋಡಲು ಸುತ್ತ-ಮುತ್ತಲಿನ ಸಾವಿರಾರು ಜನರು ನದಿಯ ದಂಡೆಯಲ್ಲಿ ಸೇರಿರುತ್ತಾರೆ.
ಇದನ್ನೂ ಓದಿ: ನಾಟಕ ಪ್ರದರ್ಶನದ ವೇಳೆ ಸ್ತಬ್ಧವಾದ ಹೃದಯ: ವೇದಿಕೆಯಲ್ಲಿ ಕುಸಿದು ಬಿದ್ದು ಕಲಾವಿದ ಸಾವು: ವಿಡಿಯೋ