ವಿಜಯವಾಡ(ಆಂಧ್ರಪ್ರದೇಶ): ಇಲ್ಲಿನ ದುರ್ಗಮ್ಮನ ದೇವಸ್ಥಾನದಲ್ಲೇ ಕಳೆದ ಕೆಲ ವರ್ಷಗಳಿಂದ ವಾಸವಿದ್ದ ಹಾವು ಸಾವನ್ನಪ್ಪಿದ್ದರಿಂದ ಹಿಂದೂ ಸಂಪ್ರದಾಯದಂತೆ ಅದರ ಅಂತ್ಯಕ್ರಿಯೆ ನಡೆಸಲಾಗಿದೆ.
ದುರ್ಗಮ್ಮ ದೇವಸ್ಥಾನದ ವೈದಿಕ ಸಮಿತಿ ಅರ್ಚಕರು ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ. ದೇವಸ್ಥಾನದ ಇಂದ್ರಕೀಲಾದ್ರಿಯಲ್ಲಿ ಎರಡು ಸರ್ಪಗಳು ವಾಸವಾಗಿದ್ದವು. ಮೇಲಿಂದ ಮೇಲೆ ಇವುಗಳ ದರ್ಶನವಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಹಾವು, ಬೆಟ್ಟದ ಕೆಳಭಾಗದ ತಿರುವಿನಲ್ಲಿ ಸತ್ತು ಬಿದ್ದಿತ್ತು. ಇದೀಗ ಅದರ ಅಂತ್ಯಕ್ರಿಯೆ ನಡೆಸಲಾಗಿದೆ.
ಇದನ್ನೂ ಓದಿರಿ: ಭೀಕರ ರಸ್ತೆ ಅಪಘಾತ: ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ದುರ್ಮರಣ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅರ್ಚಕರು, ದೇವರ ಸನ್ನಿಧಿಗಳಲ್ಲಿ ಹಾವು ಸಾವನ್ನಪ್ಪಿದರೆ ಅವುಗಳ ಅಂತ್ಯಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದಾರೆ.