ಭುಜ್(ಗುಜರಾತ್): ಗುಜರಾತ್‌ನ ಭುಜ್ನಲ್ಲಿ 2001 ರಲ್ಲಿ ಉಂಟಾದ ಭಾರಿ ಭೂಕಂಪನದಿಂದ 1,300 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಭೂಕಂಪನ ಕೇಂದ್ರವಾಗಿದ್ದ ಭುಜ್ನಲ್ಲುಂಟಾದ ಅನಾಹುತವನ್ನು ಧೈರ್ಯವಾಗಿ ಎದುರಿಸಿ ಬದುಕಲು ಮತ್ತು ಜೀವ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಸ್ಮೃತಿ ವನ ಹೆಸರಿನಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.
-
#WATCH | Smritivan earthquake memorial and museum inaugurated by PM Narendra Modi in Bhuj, Gujarat; CM Bhupendra Patel also present pic.twitter.com/v7EnnkSlam
— ANI (@ANI) August 28, 2022 " class="align-text-top noRightClick twitterSection" data="
">#WATCH | Smritivan earthquake memorial and museum inaugurated by PM Narendra Modi in Bhuj, Gujarat; CM Bhupendra Patel also present pic.twitter.com/v7EnnkSlam
— ANI (@ANI) August 28, 2022#WATCH | Smritivan earthquake memorial and museum inaugurated by PM Narendra Modi in Bhuj, Gujarat; CM Bhupendra Patel also present pic.twitter.com/v7EnnkSlam
— ANI (@ANI) August 28, 2022
ಈ ಭವ್ಯ ಸ್ಮಾರಕವನ್ನು 470 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಮೃತಿ ವನದಲ್ಲಿ ಭೂಕಂಪ ದುರಂತದಲ್ಲಿ ಮಡಿದವರ ಹೆಸರುಗಳನ್ನು ಹೆಸರನ್ನು ಇದು ಹೊಂದಿದೆ. ಇದರಲ್ಲಿ ಅತ್ಯಾಧುನಿಕ ಭೂಕಂಪ ವಸ್ತುಸಂಗ್ರಹಾಲಯವೂ ಇದೆ.
ಇದರಲ್ಲಿ ಗುಜರಾತ್‌ನ ಮಾಹಿತಿ, ಭೂಕಂಪನದಿಂದಾದ ಅನಾಹುತಗಳು, ಭುಜ್ ಪ್ರದೇಶದ ಪುನರ್ನಿರ್ಮಾಣ, ದುರಂತದಲ್ಲಿ ಮಡಿದವರ ಕಣ್ಣೀರ ಕತೆಗಳು, ಪ್ರಕೃತಿ ವಿಕೋಪಗಳ ಬಗ್ಗೆ ಮಾಹಿತಿ, ಅವುಗಳನ್ನು ಎದುರಿಸುವ ಬಗೆಯ ಕುರಿತು ಚಿತ್ರಿಸಲಾಗಿದೆ. 5D ಸಿಮ್ಯುಲೇಟರ್‌ನ ಸಹಾಯದಿಂದ ಭೂಕಂಪದ ಅನುಭವವನ್ನು ಮರುಕಳಿಸುವ ವ್ಯವಸ್ಥೆಯೂ ಇಲ್ಲಿದೆ.
-
Prime Minister Narendra Modi along with CM Bhupendra Patel at the 'Smritivan'- 2001 earthquake memorial and museum, in Gujarat's Bhuj pic.twitter.com/OavMZy2OJl
— ANI (@ANI) August 28, 2022 " class="align-text-top noRightClick twitterSection" data="
">Prime Minister Narendra Modi along with CM Bhupendra Patel at the 'Smritivan'- 2001 earthquake memorial and museum, in Gujarat's Bhuj pic.twitter.com/OavMZy2OJl
— ANI (@ANI) August 28, 2022Prime Minister Narendra Modi along with CM Bhupendra Patel at the 'Smritivan'- 2001 earthquake memorial and museum, in Gujarat's Bhuj pic.twitter.com/OavMZy2OJl
— ANI (@ANI) August 28, 2022
ಇದರ ವಿಶೇಷತೆಗಳೇನು?: ಈ ಸ್ಮೃತಿವನ ಸ್ಮಾರಕದಲ್ಲಿನ ಭೂಕಂಪ ವಸ್ತುಸಂಗ್ರಹಾಲಯ ಏಳು ಹಂತಗಳಲ್ಲಿ ರೂಪಿಸಲಾಗಿದೆ. ಮೊದಲನೆಯದು ರೀಬರ್ತ್(ಮರುಜನ್ಮ), ಮರು ಹುಡುಕಾಟ(ರಿಡಿಸ್ಕವರ್), ರೀಸ್ಟೋರ್(ಸರಿಪಡಿಸು), ರೀಬಿಲ್ಟ್(ಮರುಸೃಷ್ಟಿ), ಮತ್ತೆ ಯೋಚಿಸು(ರಿಥಿಂಕ್), ಮತ್ತೆ ಜೀವಿಸು (ರಿಲೀವ್), ಹೊಸದಾಗಿ ಬಳಸುವುದು(ರಿನ್ಯೂ) ಎಂಬ ಏಳು ಆಶಯಗಳ ಥೀಂ ಅನ್ನು ಇಲ್ಲಿ ಸೃಜಿಸಲಾಗಿದೆ.
ಇದನ್ನೂ ಓದಿ: ಸ್ಪೆಷಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ: ಈ ರೀತಿಯ ಸುರಂಗ ನಿರ್ಮಿಸಲು ಗಡ್ಕರಿಗೆ ಮನವಿ