ನವದೆಹಲಿ : ಜನವರಿ 1, 2021ರಿಂದ ಡಿಸೆಂಬರ್ 31, 2022ರವರೆಗೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಹಿನ್ನೆಲೆ ಈ ಎರಡು ವರ್ಷದ ಸದಸ್ಯತ್ವದ ಅವಧಿಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಇಂದಿನಿಂದ ಭಾರತ ಒಂದು ತಿಂಗಳ ಕಾಲದವರೆಗೆ ವಹಿಸಿಕೊಳ್ಳಲಿದೆ.
ಇದು ಭಾರತದ ಹತ್ತನೇ ಅಧಿಕಾರವಧಿಯಾಗಿದೆ. ಈ ಹಿಂದೆ ಅಂದರೆ, 1950 ಜೂನ್, 1967 ಸೆಪ್ಟೆಂಬರ್, 1972 ಡಿಸೆಂಬರ್, 1977 ಅಕ್ಟೋಬರ್, 1985 ಫೆಬ್ರವರಿ, 1991 ಅಕ್ಟೋಬರ್, 1992 ಡಿಸೆಂಬರ್, 2011 ಆಗಸ್ಟ್, ನವೆಂಬರ್ 2012ರಲ್ಲಿ ಅಧಿಕಾರವಹಿಸಿಕೊಂಡಿತ್ತು.
ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಮಯದಲ್ಲೇ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಬಹಳ ಹೆಮ್ಮೆ ತಂದಿದೆ. ಭಾರತವು ಎಂದಿನಂತೆ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದೆನಯ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
-
#IndiainUNSC
— PR/Amb T S Tirumurti (@ambtstirumurti) August 1, 2021 " class="align-text-top noRightClick twitterSection" data="
Thank you Ambassador @NDeRiviere, PR of France for steering the UN #SecurityCouncil for the month of July. 👏
India takes over the Presidency for August ⬇️ @MEAIndia @IndiaembFrance @franceonu @FranceinIndia @afpfr @Yoshita_Singh pic.twitter.com/fCAdYj244g
">#IndiainUNSC
— PR/Amb T S Tirumurti (@ambtstirumurti) August 1, 2021
Thank you Ambassador @NDeRiviere, PR of France for steering the UN #SecurityCouncil for the month of July. 👏
India takes over the Presidency for August ⬇️ @MEAIndia @IndiaembFrance @franceonu @FranceinIndia @afpfr @Yoshita_Singh pic.twitter.com/fCAdYj244g#IndiainUNSC
— PR/Amb T S Tirumurti (@ambtstirumurti) August 1, 2021
Thank you Ambassador @NDeRiviere, PR of France for steering the UN #SecurityCouncil for the month of July. 👏
India takes over the Presidency for August ⬇️ @MEAIndia @IndiaembFrance @franceonu @FranceinIndia @afpfr @Yoshita_Singh pic.twitter.com/fCAdYj244g
ಸದಸ್ಯತ್ವದ ಈ ಅವಧಿಯಲ್ಲಿ ಆಗಸ್ಟ್ 2ರಂದು ಮೊದಲ ಬಾರಿಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತದ ನಿಲುವುಗಳ ಕುರಿತು ಟಿ ಎಸ್ ತಿರುಮೂರ್ತಿ ಅವರು ಭಾಷಣ ಮಾಡಲಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ದೊರೆಯಲಿದೆ.
ಜುಲೈನಲ್ಲಿ ಭದ್ರತಾ ಮಂಡಳಿಯ ನೇತೃತ್ವ ವಹಿಸಿದ್ದಕ್ಕಾಗಿ ಮತ್ತು ವಿಶ್ವಸಂಸ್ಥೆಯಲ್ಲಿ ಭಾರತವನ್ನು ಬೆಂಬಲಿಸಿದ್ದಕ್ಕಾಗಿ ತಿರುಮೂರ್ತಿ ಫ್ರಾನ್ಸ್‌ಗೆ ಧನ್ಯವಾದ ಅರ್ಪಿಸಿದರು. ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್, ಇಂದು ಜಗತ್ತು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ನಿಭಾಯಿಸಲು ತನ್ನ ದೇಶವು ಭಾರತದೊಂದಿಗೆ ಕೆಲಸ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ-ಅಮೆರಿಕನ್ ರಶಾದ್ ಹುಸೇನ್ ನೇಮಕ
ಭಾರತವು ಇಂದು UNSC ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ನಾವು ಭಾರತದ ಜೊತೆ ಸಾಗರ ಭದ್ರತೆ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ವಿರುದ್ಧ ಕಾರ್ಯತಂತ್ರದ ವಿಷಯಗಳ ಮೇಲೆ ಕೆಲಸ ಮಾಡಲು ಬದ್ಧರಾಗಿದ್ದೇವೆ. ಇಂದಿನ ಅನೇಕ ಬಿಕ್ಕಟ್ಟುಗಳನ್ನು ಎದುರಿಸಲು ನಿಯಮಗಳನ್ನು ಆಧರಿಸಿದ, ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ರಾಯಭಾರಿ ಲೆನೈನ್ ಟ್ವೀಟ್ ಮಾಡಿದ್ದಾರೆ.