ಗೋಲ್ಪಾರಾ (ಅಸ್ಸೋಂ): ಇಲ್ಲಿನ ಲಕ್ಷ್ಮಿಪುರದ ಸೈರಾಬರಿಯಲ್ಲಿ 6 ಆನೆಗಳು ಹೊಂಡದಲ್ಲಿ ಸಿಲುಕಿ ಮೇಲೆ ಬರಲಾಗದೆ ಪರದಾಡಿದ ಘಟನೆ ನಡೆದಿದೆ. ನಿನ್ನೆ ರಾತ್ರಿಯಿಂದಲೂ ಘೀಳಿಡುತ್ತಾ ನೀರು ತುಂಬಿದ್ದ ಹೊಂಡದಿಂದ ಹೊರ ಬರಲು ಪರದಾಡುತ್ತಿವೆ.
ಬಳಿಕ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆನೆಗಳ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ಬುಧವಾರ ರಾತ್ರಿ ಸಹ ಇದೇ ಹೊಂಡದಲ್ಲಿ 5 ಆನೆಗಳು ಸಿಲುಕಿದ್ದವು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಹಳಿ ತಪ್ಪಿದ ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್ : ಪ್ರಯಾಣಿಕರು ಪಾರು