ನವ ದೆಹಲಿ: ಐದು ರಾಜ್ಯಗಳಲ್ಲಿ ನಡೆದ ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭೆ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ಏಳು ಕ್ಷೇತ್ರಗಳ ಪೈಕಿ ಕೇಂದ್ರದ ಆಡಳಿತಾರೂಢ ಬಿಜೆಪಿ ಎರಡು ಕಡೆ ಮಾತ್ರ ಗೆಲುವು ಸಾಧಿಸಿದೆ.
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ನಿಧನದಿಂದ ತೆರವಾಗಿದ್ದ ಉತ್ತರ ಪ್ರದೇಶದ ಮೈನ್ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಸೊಸೆ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷ ತನ್ನ ಕ್ಷೇತ್ರವನ್ನು ಮರು ವಶಪಡಿಸಿಕೊಂಡಿತು.
ಅದೇ ರೀತಿಯಾಗಿ ಉತ್ತರ ಪ್ರದೇಶದ ರಾಮ್ಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಜಯ ಸಾಧಿಸಿದ್ದಾರೆ. ಖಟೌಲಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ)ದ ಮದನ್ ಭಾಟಿಯಾ ಗೆದ್ದಿದ್ದಾರೆ. ಒಡಿಶಾದ ಪದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಡಿಯ ಬರ್ಶಾ ಸಿಂಗ್ ಗೆದ್ದಿದ್ದಾರೆ.
ಬಿಹಾರದ ಕುರ್ಹಾನಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಜಯ ದಾಖಲಿಸಿದ್ದಾರೆ. ಛತ್ತೀಸ್ಗಢನ ಬಾನುಪ್ರತಾಪ್ಪುರ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮಂಡಾವಿ ಗೆಲುವು ಸಾಧಿಸಿದ್ದರೆ, ರಾಜಸ್ಥಾನದ ಸರ್ದಾರ್ಶಹರ್ ವಿಧಾನಸಭಾ ಕ್ಷೇತ್ರದ ಉಪ ಕದನಲ್ಲಿ ಕಾಂಗ್ರೆಸ್ನ ಅನಿಲ್ ಕುಮಾರ್ ಜಯ ದಾಖಲಿಸಿದ್ದಾರೆ.
ಇದನ್ನೂ ಓದಿ: ಮೈನ್ಪುರಿ ಲೋಕಸಭಾ ಉಪ ಚುನಾವಣೆ: ಮುಲಾಯಂ ಸಿಂಗ್ ಸೊಸೆ ಡಿಂಪಲ್ ಗೆಲುವು