ETV Bharat / bharat

ಒಂದೇ ಕುಟುಂಬದ 6 ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ ಭಗ್ನಪ್ರೇಮಿ; ಯುವತಿ ಸೇರಿ ಮೂವರು ಸಾವು - ಲವ್​ ಮಾಡಿದ್ದ ಹುಡುಗಿ​ ಸಮೇತ ಮೂವರು ಸಾವು

Firing in Lakhisarai, Bihar: ಬಿಹಾರದ ಲಖಿಸರಾಯ್​ ಎಂಬಲ್ಲಿ ಒಂದೇ ಕುಟುಂಬದ ಆರು ಜನರನ್ನು ಗುಂಡಿಕ್ಕಿ ಕೊಲ್ಲುವ ಯತ್ನ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Six people of same family shot in Lakhisarai bihar  firing in Lakhisarai bihar  Two people shot dead in Lakhisarai  murder in Lakhisarai  ಭಗ್ನ ಪ್ರೇಮಿಯಿಂದ ಗುಂಡಿನ ದಾಳಿ  ಲವ್​ ಮಾಡಿದ್ದ ಹುಡುಗಿ​ ಸಮೇತ ಮೂವರು ಸಾವು  ಆರು ಜನರನ್ನು ಗುಂಡಿಕ್ಕಿ ಕೊಲ್ಲಲು ಯತ್ನ  ಅಪ್ರಚೋದಿತ ಗುಂಡಿನ ದಾಳಿ  ಆರು ಮಂದಿಗೆ ಗುಂಡೇಟು  ಛತ್​ ಸಂಭ್ರಮದಲ್ಲಿ ಭಗ್ನ ಪ್ರೇಮಿಯಿಂದ ಗುಂಡಿನ ದಾಳಿ  ಲವ್​ ಮಾಡಿದ್ದ ಹುಡುಗಿ​ ಸಮೇತ ಮೂವರು ಸಾವು  ಆರು ಮಂದಿಗೆ ಗುಂಡೇಟು
ಲವ್​ ಮಾಡಿದ್ದ ಹುಡುಗಿ​ ಸಮೇತ ಮೂವರು ಸಾವು!
author img

By ETV Bharat Karnataka Team

Published : Nov 20, 2023, 11:37 AM IST

Updated : Nov 20, 2023, 2:14 PM IST

ಗುಂಡಿನ ದಾಳಿ ನಡೆದ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು

ಲಖಿಸರಾಯ್(ಬಿಹಾರ): ಒಂದೇ ಕುಟುಂಬದ ಆರು ಜನರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಲಖಿಸರಾಯ್ ನಗರದ ಪಂಜಾಬಿ ಪ್ರದೇಶದಲ್ಲಿ ಇಂದು ನಡೆದಿದೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಾಜಧಾನಿಯ ಪಿಎಂಸಿಎಚ್‌ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳಿಗ್ಗೆ ಲಖಿಸರಾಯ್‌ನಲ್ಲಿ ಒಂದೆಡೆ ಜನರು ಛತ್‌ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಮತ್ತೊಂದೆಡೆ, ಇದೇ ನಗರದ ಪಂಜಾಬಿ ಪ್ರದೇಶದಲ್ಲಿ ಯುವಕನೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಛತ್​ಘಾಟ್​ನಿಂದ ಮನೆಗೆ ಮರಳುತ್ತಿದ್ದ ಕುಟುಂಬವನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದಾನೆ.

"ನಾವು ಛತ್​ಘಾಟ್‌ನಿಂದ ಹಿಂತಿರುಗುತ್ತಿದ್ದಾಗ, ನಮ್ಮ ನೆರೆಯ ಆಶಿಶ್ ಚೌಧರಿ ನಮಗೆ ಹಿಂದಿನಿಂದ ಗುಂಡು ಹಾರಿಸಿದ. ನನ್ನ ಅತ್ತಿಗೆ, ಮಾವ ಸೇರಿದಂತೆ ಆರು ಜನರನ್ನು ಆತ ಟಾರ್ಗೆಟ್‌ ಮಾಡಿದ್ದಾನೆ. ನನ್ನ ಮನೆಯ ಹುಡುಗಿ ಆ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆರೋಪಿ ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ನಮ್ಮ ಹುಡುಗಿ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡು ಎಲ್ಲರಿಗೂ ಗುಂಡು ಹಾರಿಸಿದ್ದಾನೆ" ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರೊಬ್ಬರು ಹೇಳಿದರು.

"ಆರೋಪಿ ಮೃತ ಕುಟುಂಬದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದ. ಆದರೆ ಆಕೆಯ ಕುಟುಂಬ ನಿರಾಕರಿಸಿತ್ತು. ಹೀಗಾಗಿ ಕುಪಿತಗೊಂಡು ಗುಂಡಿನ ದಾಳಿ ನಡೆಸಿದ್ದಾನೆ. ಸದ್ಯ ಆತ ಪರಾರಿಯಾಗಿದ್ದು, ಶೋಧ ಮುಂದುವರಿದಿದೆ" ಎಂದು ಲಖಿಸರಾಯ್ ಎಸ್ಪಿ ಪಂಕಜ್ ಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: ಸೈಬರ್​ ದಾಳಿಗೆ ಹೆದರಿ ಅಭ್ಯರ್ಥಿ ಆತ್ಮಹತ್ಯೆ

Last Updated : Nov 20, 2023, 2:14 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.