ಜಿಂದ್: ಹರಿಯಾಣದ ಜಿಂದ್‌ನಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 15 ವರ್ಷದ ಮಕ್ಕಳಿಂದ 70 ವರ್ಷದ ವೃದ್ಧರೂ ಸೇರಿದ್ದಾರೆ. ಇವರೆಲ್ಲರೂ ಕುಟುಂಬ ಸದಸ್ಯರೊಬ್ಬರ ಚಿತಾಭಸ್ಮವನ್ನು ನದಿಗೆ ವಿಸರ್ಜಿಸಿ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ.
ಹಿಸಾರ್ನ ನಾರ್ನಾಂಡ್ ನಿವಾಸಿ ಪ್ಯಾರೆ ಲಾಲ್ ಎಂಬುವವರು ಇತ್ತೀಚೆಗೆ ಮೃತಪಟ್ಟಿದ್ದರು. ಸುರ್ಜಿ ದೇವಿ ತನ್ನ ಕುಟುಂಬದೊಂದಿಗೆ ಗಂಡನ ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸಲು ಸೋಮವಾರ ಹರಿದ್ವಾರಕ್ಕೆ ತೆರಳಿದ್ದರು. ಎಲ್ಲವೂ ಅಂದುಕೊಂಡಂತೆ ಕಾರ್ಯಕ್ರಮ ಮುಗಿದಿದೆ. ಬೆಳಗ್ಗೆ ಹರಿದ್ವಾರದಿಂದ ತಮ್ಮ ಸ್ವಗ್ರಾಮಕ್ಕೆ ಪಿಕ್ ಅಪ್ ವಾಹನದಲ್ಲಿ ಹಿಂದುರುಗುತ್ತಿದ್ದರು. ಇದೇ ಸಂದರ್ಭದಲ್ಲಿ ತಡರಾತ್ರಿ ಜಿಂದ್‌ನ ಕಾಂಡೇಲಾ ಗ್ರಾಮದಲ್ಲಿ ಪಿಕ್ ಅಪ್ ವಾಹನ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನ ಗಾಯಗೊಂಡರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಖಾಸಗಿ ಬಸ್-ಲಾರಿ ಮಧ್ಯೆ ಭೀಕರ ಅಪಘಾತ: 8 ಮಂದಿ ದುರ್ಮರಣ
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ಜಿಂದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಐವರ ಸ್ಥಿತಿ ಚಿಂತಾಜನಕವಾಗಿದೆ.
ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮೃತರನ್ನು ಚನ್ನೋ (45), ಶೀಷ್ಪಾಲ್ (39), ಅಂಕುಶ್ (15), ಧನ್ನಾ (70) ಮತ್ತು ಸುರ್ಜಿ ದೇವಿ (65) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.