ETV Bharat / bharat

ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿಯ ಮೃತದೇಹ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ? - ಇಂದಿನ ಕ್ರೈಂ ಸುದ್ದಿಗಳು

ಮನೆಯೊಂದರಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಸಾವುಗಳಲ್ಲಿ ನಿಗೂಢತೆ ಕಂಡುಬಂದಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

Six of family found murdered in Odisha village
ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿಯ ಮೃತದೇಹ ಪತ್ತೆ
author img

By

Published : Nov 11, 2020, 11:41 PM IST

ಒಲಂಗೀರ್ (ಒಡಿಶಾ): ಒಡಿಶಾದ ಬೋಲಂಗೀರ್ ಜಿಲ್ಲೆಯ ಪಟ್ನಾಘರ್​ ಪೊಲೀಸ್ ಠಾಣಾ ವ್ಯಾಪ್ತಿಯ ಸಂರಪಾಡ ಎಂಬ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಆಶ್ಚರ್ಯಕರ ರೀತಿಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಬುಲು ಜಾನಿ (50), ಅವರ ಪತ್ನಿ ಜ್ಯೋತಿ (48), ಇಬ್ಬರು ಪುತ್ರಿಯರಾದ ಸರಿತಾ ಮತ್ತು ಶ್ರೇಯಾ ಹಾಗೂ ಪುತ್ರರಾದ ಭೀಷ್ಮ ಮತ್ತು ಸಂಜೀವ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಇಂದು (ಬುಧವಾರ) ಬೆಳಗ್ಗೆ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ನೆರೆಹೊರೆಯವರು ಸಂಶಯ ವ್ಯಕ್ತಪಡಿಸಿ ಕಿಟಕಿಯ ಮೂಲಕ ನೋಡಿದಾಗ ಪ್ರಕರಣ ಹೊರಬಿದ್ದಿದೆ. ಮೃತದೇಹಗಳ ಮೇಲೆ ಮುಸಕು ಹಾಕಿದ್ದನ್ನು ಗುರುತಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Six of family found murdered in Odisha village
ಒಂದೇ ಕುಟುಂಬಕ್ಕೆ ಸೇರಿದ ಆರು ಮಂದಿಯ ಮೃತದೇಹ ಪತ್ತೆ

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತಪಟ್ಟಿರುವುದನ್ನು ಖಚಿತಪಡಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಿಗೂಢ ರೀತಿಯಲ್ಲಿ ಮೃತದೇಹಗಳನ್ನು ಪತ್ತೆಯಾಗಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಕುಟುಂಬದ ಆರೂ ಸದಸ್ಯರನ್ನು ಯಾರೋ ತೀಕ್ಷ್ಣವಾದ ಆಯುಧಗಳಿಂದ ಹತ್ಯೆ ಮಾಡಿರಬಹುದು ಎಂಬ ಶಂಖ್ಯೆ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬೋಲಂಗೀರ್ ಪೊಲೀಸ್ ವರಿಷ್ಠಾಧಿಕಾರಿ ಮಡ್ಕರ್ ಸಂದೀಪ್ ಸಂಪತ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.