ETV Bharat / bharat

ಕೇರಳದಲ್ಲಿ ಹೆಚ್ಚಾಯ್ತು COVID: ಆಯ್ದ ಜಿಲ್ಲೆಗೆ ಕೇಂದ್ರ ತಜ್ಞರ ತಂಡ ಭೇಟಿ, ಪರಿಶೀಲನೆ

ದೇಶದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಕೇಸ್​ ದಾಖಲಾಗುತ್ತಿದೆ. ಈ ಹಿನ್ನೆಲೆ ಕೇಂದ್ರದಿಂದ ತಜ್ಞರ ತಂಡ ಕೇರಳ ತಲುಪಿದ್ದು, ಕೋವಿಡ್ ತಡೆಗೆ ಮುಂದಾಗಲಿದ್ದಾರೆ. ​

Six-member team to reach Kerala today
ಕೇರಳದಲ್ಲಿ ಹೆಚ್ಚಾಯ್ತು ಕೋವಿಡ್
author img

By

Published : Jul 30, 2021, 1:39 PM IST

ತಿರುವನಂತಪುರ (ಕೇರಳ): ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಪ್ರಕರಣ ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರದ ಪರಿಣಿತ ತಂಡ ಶುಕ್ರವಾರ ಕೇರಳಕ್ಕೆ ತೆರಳುತ್ತಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​​ನ ನಿರ್ದೇಶಕರಾದ ಎಸ್.ಕೆ.ಸಿಂಗ್ ನೇತೃತ್ವದ 6 ಸದಸ್ಯರ ತಂಡವು ಇಂದು ತಲುಪಲಿದೆ.

ಹೆಚ್ಚಿನ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಗಳಿಗೆ ಈ ತಂಡ ಭೇಟಿ ನೀಡಲಿದ್ದು, ಕೋವಿಡ್ ಹೆಚ್ಚಳಕ್ಕೆ ಕಾರಣ ಪತ್ತೆಗೆ ಮುಂದಾಗಲಿದೆ. ಜೊತೆಗೆ ಕೋವಿಡ್ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕಾರ್ಯತಂತ್ರ ರೂಪಿಸಲಿದೆ.

ದೇಶದ ಒಟ್ಟು ಕೋವಿಡ್ ರೋಗಿಗಳಲ್ಲಿ ಶೇ.37ರಷ್ಟು ಕೇರಳದಲ್ಲಿದ್ದಾರೆ ಎಂದು ಕೇಂದ್ರ ಹೇಳಿದೆ. ಈ ಹಿನ್ನೆಲೆ ತಜ್ಞರ ತಂಡ ರಾಜ್ಯಕ್ಕೆ ಭೇಟಿ ನೀಡುತ್ತಿದೆ. ಈ ನಡುವೆ ರಾಜ್ಯದಲ್ಲಿ ಪಾಸಿಟಿವಿಟಿ ದರವು ಶೇಕಡಾ 13ಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ: ಹೊಸ ಐಟಿ ನಿಯಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಾಟ್ಸ್​ಆ್ಯಪ್-ಫೇಸ್‌ಬುಕ್: ವಿಚಾರಣೆ ಮುಂದೂಡಿದ ದೆಹಲಿ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.