ಲಕ್ನೋ: ಲಖೀಮ್ಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿ ಯುಪಿ ಸಿಎಂ ಯೋಗಿ ಆದಿತ್ಯ ಸರ್ಕಾರ ಆದೇಶ ಹೊರಡಿಸಿದೆ.
ಲಖೀಮ್ಪುರ ಗಲಭೆಯಲ್ಲಿ 9 ಜನ ಮೃತಪಟ್ಟ ಪ್ರಕರಣದ ತನಿಖೆಯನ್ನು ಎಸ್ಐಟಿ ಕೈಗೊಳ್ಳಲಿದೆ. ಆರು ಸದಸ್ಯರ ಎಸ್ಐಟಿ ತನಿಖಾ ತಂಡವನ್ನು ಹೆಚ್ಚುವರಿ ಎಸ್ಪಿ ಅರುಣ್ ಕುಮಾರ ನೇತೃತ್ವ ವಹಿಸಲಿದ್ದು, ಡಿವೈಎಸ್ಪಿ ಸಂದೀಪ್ ಸಿಂಗ್ ಹಾಗೂ ಮೂವರು ಇನ್ಸ್ಪೆಕ್ಟರ್ಗಳು ತಂಡದಲ್ಲಿ ಇರಲಿದ್ದಾರೆ.
ಭಾನುವಾರ ಲಖೀಮ್ಪುರದಲ್ಲಿ ರೈತರ ಪ್ರತಿಭಟನೆ ವೇಳ ಹಿಂಸಾಚಾರ ಉಂಟಾಗಿ 9 ಜನ ಮೃತಪಟ್ಟಿದ್ದಾರೆ. ಇದು ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಪ್ರತಿಭಟನೆ ವೇಳೆ ರೈತರ ಮೇಲೆ ಕಾರು ಹರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಲಖೀಮ್ಪುರ ಪ್ರಕರಣ ದಿನದಿಂದ ದಿನಕ್ಕೆ ಹೊರ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಇಳಿದಿದೆ. ಇನ್ನು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.