ಸೊಲ್ಲಾಪುರ (ಮಹಾರಾಷ್ಟ್ರ): ಸೊಲ್ಲಾಪುರ-ಪಂಡರಾಪುರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ. ಹೆದ್ದಾರಿಯ ಪೆಣೂರು ಬಳಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ನಡೆದಿದೆ.
ಅಪಘಾತದಲ್ಲಿ ಇನ್ನುಳಿದಂತೆ ಆರು ಮಂದಿ ಗಾಯಗೊಂಡಿದ್ದು, ಕೆಲವರು ಪಂಡರಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಇತರರು ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಎರಡೂ ವಾಹನಗಳು ಜಖಂಗೊಂಡಿವೆ. ಅಫ್ರಿನ್ ಮುಜಾಹಿದ್ ಅತ್ತಾರ್ (30), ಡಾ ಮುಜಾಹಿದ್ ಅತ್ತಾರ್ (35), ಅರ್ಮಾನ್ ಮುಜಾಹಿದ್ ಅತ್ತಾರ್ (5), ಇರ್ಫಾನ್ ಖಾನ್ ಮತ್ತು ಅವರ ಪತ್ನಿ ಮತ್ತು ಮಗ ಸಾವಿಗೀಡಾಗಿದ್ದಾರೆ. ರಾಜೇಂದ್ರ ಹುಂಡೇಕರಿ, ರಾಮಚಂದ್ರ ಶೇಟೆ, ಮಂದಾಕಿನಿ ಶೇಟೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ತೊರೆದು ಟಿಎಂಸಿಗೆ ಮರು ಸೇರ್ಪಡೆಯಾದ ಸಂಸದ ಅರ್ಜುನ್ ಸಿಂಗ್