ETV Bharat / bharat

ಸೇತುವೆಯಿಂದ ನದಿಗೆ ಬಿದ್ದ ಬಸ್​: ಚಾಲಕ ಸೇರಿ ಆರು ಮಂದಿ ಬಲಿ - Shillong

ಮೇಘಾಲಯದ ಶಿಲ್ಲಾಂಗ್​ನಲ್ಲಿ ಸೇತುವೆ ಮೇಲಿಂದ ನದಿಗೆ ಬಸ್​ ಉರುಳಿದ್ದು, ಚಾಲಕ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಸೇತುವೆಯಿಂದ ನದಿಗೆ ಬಿದ್ದ ಬಸ್
ಸೇತುವೆಯಿಂದ ನದಿಗೆ ಬಿದ್ದ ಬಸ್
author img

By

Published : Sep 30, 2021, 11:20 AM IST

ಶಿಲ್ಲಾಂಗ್ (ಮೇಘಾಲಯ): 21 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್​ ನದಿಗೆ ಬಿದ್ದು, ಚಾಲಕ ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಮೇಘಾಲಯದ ಶಿಲ್ಲಾಂಗ್​ನಲ್ಲಿ ತಡರಾತ್ರಿ ನಡೆದಿದೆ.

ತುರಾ ಪ್ರದೇಶದಿಂದ ಶಿಲ್ಲಾಂಗ್​ಗೆ ತೆರಳುತ್ತಿದ್ದ ಬಸ್​ ತಡರಾತ್ರಿ 12 ಗಂಟೆಗೆ ನೊಂಗ್‌ಶ್ರಾಮ್ ಸೇತುವೆಯಿಂದ ರಿಂಗ್ಡಿ ನದಿಯಲ್ಲಿ ಬಿದ್ದಿದೆ. ಸ್ಥಳಕ್ಕೆ ಬಂದ ಪೊಲೀಸರು, ರಕ್ಷಣಾ ಪಡೆ ಹಾಗೂ ಸ್ಥಳೀಯರು ಈವರೆಗೆ 16 ಮಂದಿ ಪ್ರಯಾಣಿಕರನ್ನು ರಕ್ಷಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕೊಲೆಯಾದ ವ್ಯಕ್ತಿಯ ಶವ ಅರೆಬೆಂದ ಸ್ಥಿತಿಯಲ್ಲಿ ಶಿರಾಡಿ ಘಾಟ್‌ನಲ್ಲಿ ಪತ್ತೆ

ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಬಸ್​ನೊಳಗೆ ಇನ್ನೆರಡು ಮೃತದೇಹಗಳು ಸಿಲುಕಿಕೊಂಡಿವೆ. ಚಾಲಕ ವೇಗವಾಗಿ ಬಸ್​ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಗಾಯಗೊಂಡ ಪ್ರಯಾಣಿಕರು ತಿಳಿಸಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.