ನವದೆಹಲಿ: ದೇಶದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಮೋಟಾರು ವಾಹನ ನಿಯಮದಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗ್ತಿದ್ದು, ಇದೀಗ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
8 ಪ್ರಯಾಣಿಕರನ್ನು ಸಾಗಿಸುವ ವಾಹನದಲ್ಲಿ ಕನಿಷ್ಠ 6 ಏರ್ಬ್ಯಾಗ್ ಕಡ್ಡಾಯಗೊಳಿಸುವ ಕರಡು ಜಿಎಸ್ಆರ್ ಅಧಿಸೂಚನೆಗೆ ಗಡ್ಕರಿ ಅನುಮೋದನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಚಿವರು ಟ್ವೀಟ್ ಮಾಡಿದ್ದಾರೆ.
ಕಾರಿನಲ್ಲಿ ಕನಿಷ್ಠ ಎರಡು ಏರ್ಬ್ಯಾಗ್ ಇರಬೇಕೆಂದು ತಿಳಿಸಿದ್ದ ಕೇಂದ್ರ ಸರ್ಕಾರ, ಇದೇ ನಿಯಮಕ್ಕೆ ತಿದ್ದುಪಡಿ ಮಾಡಿ ಕನಿಷ್ಠ ಆರು ಏರ್ಬ್ಯಾಗ್ ಕಡ್ಡಾಯಗೊಳಿಸಿದೆ.
-
In order to enhance the safety of the occupants in motor vehicles carrying upto 8 passengers, I have now approved a Draft GSR Notification to make a minimum of 6 Airbags compulsory. #RoadSafety #SadakSurakshaJeevanRaksha
— Nitin Gadkari (@nitin_gadkari) January 14, 2022 " class="align-text-top noRightClick twitterSection" data="
">In order to enhance the safety of the occupants in motor vehicles carrying upto 8 passengers, I have now approved a Draft GSR Notification to make a minimum of 6 Airbags compulsory. #RoadSafety #SadakSurakshaJeevanRaksha
— Nitin Gadkari (@nitin_gadkari) January 14, 2022In order to enhance the safety of the occupants in motor vehicles carrying upto 8 passengers, I have now approved a Draft GSR Notification to make a minimum of 6 Airbags compulsory. #RoadSafety #SadakSurakshaJeevanRaksha
— Nitin Gadkari (@nitin_gadkari) January 14, 2022
ಹೊಸ ನಿಯಮದ ಪ್ರಕಾರ, ಇದೀಗ ಯಾವುದೇ ಮಾಡೆಲ್‌ಗಳ ಕಾರುಗಳಲ್ಲಿ ಆರು ಏರ್ಬ್ಯಾಗ್ ಅಳವಡಿಸಲೇಬೇಕಿದೆ.
ಇದನ್ನೂ ಓದಿ: Watch: ಕೊನೆ ಕ್ಷಣದಲ್ಲಿ ಕೈ ತಪ್ಪಿದ ಟಿಕೆಟ್: ಬಿಕ್ಕಿ ಬಿಕ್ಕಿ ಅತ್ತ ಬಿಎಸ್‌ಪಿ ಕಾರ್ಯಕರ್ತ
ಇಷ್ಟು ದಿನ ಡ್ರೈವರ್ ಹಾಗೂ ಕೋ ಡ್ರೈವರ್ಗೆ ಎರಡು ಏರ್ಬ್ಯಾಗ್ ಕಡ್ಡಾಯಗೊಳಿಸಲಾಗಿತ್ತು. ಆದರೆ, ಹೊಸ ನಿಯಮದ ಪ್ರಕಾರ, ಹಿಂಬದಿ ಪ್ರಯಾಣಿಕರ ಸುರಕ್ಷತೆಗೂ ಏರ್ಬ್ಯಾಗ್ ಇರಲೇಬೇಕು. ಹೆಚ್ಚುವರಿ ಏರ್ಬ್ಯಾಗ್ ಸೇರಿಸಲು 8 ರಿಂದ 10 ಸಾವಿರ ರೂ. ವೆಚ್ಚವಾಗಲಿದ್ದು, ಕಾರಿನ ಬೆಲೆಯಲ್ಲೂ ಮತ್ತಷ್ಟು ಏರಿಕೆ ಕಂಡುಬರುವ ಸಾಧ್ಯತೆ ಇದೆ.