ETV Bharat / bharat

ರುಬ್ಬು ಕಲ್ಲು ಎತ್ತಿಹಾಕಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಂಗಿ!

ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕೆ ಸ್ವಂತ ಅಣ್ಣನನ್ನೇ ತಂಗಿಯೋರ್ವಳು ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

sister killed brother for behaving indecently in karimnagar district
ರುಬ್ಬುಕಲ್ಲು ಎತ್ತಿಹಾಕಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಂಗಿ
author img

By

Published : Jun 11, 2021, 7:19 PM IST

ಕರೀಂನಗರ್, ತೆಲಂಗಾಣ: ಕುಡಿದ ಮತ್ತಿನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಅಣ್ಣನನ್ನು ತಂಗಿಯೋರ್ವಳು ರುಬ್ಬು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

ಸತೀಶ್ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದು, ಕುಟುಂಬದೊಂದಿಗೆ ತಾನೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಗುರುವಾರ ಬೆಳಗ್ಗೆಯಿಂದ ಕುಟುಂಬದಲ್ಲಿ ಗಲಾಟೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ಸತೀಶ್ ತನ್ನ ಕುಟುಂಬದವರೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಇದೇ ವೇಳೆ ತನ್ನ ತಂಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದನ್ನೂ ಓದಿ: ಮೊಬೈಲ್ ಫೋನ್​​ಗಾಗಿ ರಸ್ತೆ ಮೇಲೆ ಬಿದ್ದು, ಪ್ರಾಣ ಕಳೆದುಕೊಂಡ ಯುವತಿ!

ಇದರಿಂದ ನೊಂದ ತಂಗಿ ಮನೆಯಲ್ಲಿನ ರುಬ್ಬು ಕಲ್ಲನ್ನು ಸತೀಶ್ ತಲೆಯ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾಳೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್​ಪೆಕ್ಟರ್ ಲಕ್ಷ್ಮೀಬಾಬು ಮತ್ತು ಸಬ್​ ಇನ್ಸ್​​ಪೆಕ್ಟರ್​​ ನಾಯುಡು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದು, ಪೂರ್ಣ ಮಾಹಿತಿ ಹೊರ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.