ETV Bharat / bharat

ಮಗುವಿನೊಂದಿಗೆ ಆಟೋ ಓಡಿಸಿ ಜೀವನ.. ಗಂಡನ ಆಸರೆಯಿಲ್ಲದೇ ಸ್ವಾವಲಂಬನೆ ಬದುಕು ಕಟ್ಟಿಕೊಂಡಿರುವ ಗಟ್ಟಿಗಿತ್ತಿ!

ಇ- ರಿಕ್ಷಾವನ್ನು ಬಾಡಿಗೆ ಪಡೆಯುವ ಚಂಚಲ್​ ಅದಕ್ಕಾಗಿ 300 ರೂ ಪಾವತಿಸುತ್ತಾರೆ. ಇನ್ನು ದಿನಕ್ಕೆ 600 ರೂ. ದಿಂದ 700 ರೂ. ಸಂಪಾದನೆ ಮಾಡ್ತಾರೆ. ಇನ್ನು ಇವರು ಗಂಡನಿಂದ ದೂರವಾಗಿದ್ದು, ಮಗುವಿನೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.

Single mother drives E-rickshaw with son in Noida
ಮಗುವಿನೊಂದಿಗೆ ಆಟೋ ಓಡಿಸಿ ಜೀವನ
author img

By

Published : Sep 24, 2022, 10:16 PM IST

ನೋಯ್ಡಾ( ಉತ್ತರಪ್ರದೇಶ): ಮನಸೊಂದಿದ್ದರೆ ಮಾರ್ಗ ತನ್ನಿಂದ ತಾನೆ ತೆರೆದುಕೊಳ್ಳುತ್ತದೆ. ಜೀವನದಲ್ಲಿ ಯಾವುದು ಅಸಾಧ್ಯವಲ್ಲ. ಸಾಧಿಸುವ ಛಲ ಬೇಕೇಬೇಕು. ಆಗ ಮಾತ್ರ ಸಾಧನೆ ಸಾಧ್ಯ. ಈ ಮಾತಿಗೆ ಇಂಬು ನೀಡುವಂತೆ, ಉತ್ತರ ಪ್ರದೇಶದ ನೋಯ್ಡಾದಲ್ಲಿ 27 ವರ್ಷದ ಮಹಿಳೆ ಚಂಚಲ್ ಶರ್ಮಾ ಎನ್ನುವವರು ಇ-ರಿಕ್ಷಾ ಓಡಿಸುವ ಮೂಲಕ ಅನೇಕ ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆ ಆಗಿದ್ದಾರೆ.

ಹೆಚ್ಚಿನ ದಿನಗಳಲ್ಲಿ ಅವಳು ತಮ್ಮ ಇ-ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವಾಗ ತಮ್ಮ ಒಂದು ವರ್ಷದ ಮಗನನ್ನು ಬೇಬಿ ಕ್ಯಾರಿಯರ್‌ನಲ್ಲಿ ಇಟ್ಟುಕೊಂಡು ಆಟೋ ಚಲಾವಣೆ ಮಾಡಿದ್ದಾರೆ. ಚಾಲನೆ ಅಷ್ಟೇ ಅಲ್ಲ ಮಗುವನ್ನು ಪಾಲನೆ ಪೋಷಣೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ನಿತ್ಯದ ಕೆಲಸ ಆರಂಭವಾಗುವುದು ಯಾವಾಗ: ಆಟೋ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿರುವ ಚಂಚಲ್​, ಬೆಳಗ್ಗೆ 6.30 ಕ್ಕೆ ಕೆಲಸ ಆರಂಭಿಸುತ್ತಾರೆ. ಮಗ ಅಂಕುಶ್‌ಗೆ ಸ್ನಾನ ಮತ್ತು ಊಟ ಮಾಡಿಸಲು ಮಧ್ಯಾಹ್ನ ಅವರು ಸ್ಪಲ್ಪ ಸಮಯ ಬಿಡುವು ತೆಗೆದುಕೊಳ್ತಾರೆ. ಮಧ್ಯಾಹ್ನದ ವಿರಾಮದ ಬಳಿಕ ಮತ್ತೆ ಕೆಲಸ ಆರಂಭಿಸುವ ಅವರು ಸಂಜೆವರೆಗೂ ಆಟೋ ಓಡಿಸ್ತಾರೆ.

ದಿನದ ದುಡಿಮೆ ಎಷ್ಟು: ಇ- ರಿಕ್ಷಾವನ್ನು ಬಾಡಿಗೆ ಪಡೆಯುವ ಚಂಚಲ್​ ಅದಕ್ಕಾಗಿ 300 ರೂ ಪಾವತಿಸುತ್ತಾರೆ. ಇನ್ನು ದಿನಕ್ಕೆ 600 ರೂ. ದಿಂದ 700 ರೂ. ಸಂಪಾದನೆ ಮಾಡ್ತಾರೆ. ಇನ್ನು ಇವರು ಗಂಡನಿಂದ ದೂರವಾಗಿದ್ದು, ಮಗುವಿನೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.

ಯಾವುದೇ ಕೆಲಸ ಕೀಳಲ್ಲ: ಯಾರ ಸಹಾಯಕ್ಕೆ ಕೈ ಚಾಚದೇ ಸ್ವಂತ ಕಾಲಿನ ಮೇಲೆ ನಿಂತುಕೊಂಡಿರುವ ಚಂಚಲ್​ ಶರ್ಮಾ, ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ತಮ್ಮ ಬುದುಕಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮಾಡುವ ಯಾವುದೇ ಕೆಲಸವನ್ನು ಕೀಳು ಎಂದು ಪರಿಗಣಿಸಲಾಗುವುದಿಲ್ಲ ಎನ್ನುವುದು ಚಂಚಲ್​ ಅವರ ಸ್ಪಷ್ಟವಾದ ನುಡಿ.

ಮಗು ತೀರಾ ಚಿಕ್ಕವನಾಗಿದ್ದಾಗ ಎಲ್ಲೂ ಕೆಲಸ ಮಾಡಲಿಲ್ಲ. ಯಾಕೆಂದರೆ ಮಗುವನ್ನು ನನ್ನ ಸಹೋದರಿಯರ ಬಳಿ ಬಿಟ್ಟು ಹೋಗುವುದು ತುಂಬಾ ಕಷ್ಟ. ಹೀಗಾಗಿ ಮಗು ಸ್ಪಲ್ಪ ದೊಡ್ಡದಾಗುವವರೆಗೂ ಮನೆಯಲ್ಲೇ ಇದ್ದೆ, ಈಗ ಕಳೆದೆರಡು ವರ್ಷಗಳಿಂದ, ನಾನು ಇ-ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ತಮ್ಮ ಬದುಕಿನ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನು ಓದಿ: ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಮನೆಯಲ್ಲೇ ಆರೈಕೆ.. ಮೂಕ ಜೀವಿಗಳ ರಕ್ಷಕಿ ಈ ರೈತ ಕುಟುಂಬದ ನಿಧಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.