ETV Bharat / bharat

ಪತಂಜಲಿಯ ಸಾಸಿವೆ ಎಣ್ಣೆಯಲ್ಲಿ ಕಲಬೆರಕೆ ಆರೋಪ : ಸಿಂಘಾನಿಯಾ ಕಾರ್ಖಾನೆ ಸೀಜ್​

ವಾಸ್ತವವಾಗಿ, ಪತಂಜಲಿಯ ಸಾಸಿವೆ ಎಣ್ಣೆಯ ಜಾಹೀರಾತಿನಲ್ಲಿ,ಪತಂಜಲಿ ಹೊರತುಪಡಿಸಿ ಎಲ್ಲಾ ಕಂಪನಿಗಳು ಕಚ್ಚಾ ತೈಲದಲ್ಲಿ ಕಲಬೆರಕೆ ಹೊಂದಿರುವಂತೆ ತೋರಿಸಲಾಗಿದೆ. ಹೀಗಾಗಿ, ಖಾದ್ಯ ತೈಲ ಸಂಸ್ಥೆ ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದೆ..

patanjali
patanjali
author img

By

Published : May 28, 2021, 9:58 PM IST

ರಾಜಸ್ಥಾನ : ಕಲಬೆರಕೆ ಆರೋಪ ಹಿನ್ನೆಲೆ ರಾಜಸ್ಥಾನದ ಕಿಶನ್‌ಗರ್‌ ಬಾಸ್ ಪ್ರದೇಶದಲ್ಲಿರುವ ಖೈರ್ಥಾಲ್‌ನಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಬ್ರ್ಯಾಂಡ್ ಹೆಸರಿನಲ್ಲಿ ಸಾಸಿವೆ ಎಣ್ಣೆಯನ್ನು ಪ್ಯಾಕ್ ಮಾಡುವ ಸಿಂಘಾನಿಯಾ ತೈಲ ಕಾರ್ಖಾನೆಯ ಮೇಲೆ ದಾಳಿ ನಡೆಸಲಾಗಿದೆ.

ಇಂದು, ಜಿಲ್ಲಾ ಆಡಳಿತವು ಖೈರ್ಥಾಲ್‌ನ ಇಸ್ಮಾಯಿಲ್‌ಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಸಿಂಘಾನಿಯಾ ಆಯಿಲ್ ಮಿಲ್ ಮೇಲೆ ದಾಳಿ ನಡೆಸಿ ಪತಂಜಲಿಯ ಹೆಸರಿನಲ್ಲಿ ಕಲಬೆರಕೆ ಸಾಸಿವೆ ಎಣ್ಣೆಯನ್ನು ಪೂರೈಸಿದ ಆರೋಪದ ಮೇಲೆ ಸೀಜ್ ಮಾಡಿದೆ.

ಕಾರ್ಖಾನೆಯಲ್ಲಿ ಪತಂಜಲಿಯ ಅಪಾರ ಪ್ರಮಾಣದ ಪ್ಯಾಕಿಂಗ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಖೈರ್ಥಾಲ್‌ನಿಂದ ಹೆಚ್ಚಿನ ಪ್ರಮಾಣದ ಸಾಸಿವೆ ಎಣ್ಣೆ ಈ ಕಾರ್ಖಾನೆಯಿಂದ ಬಾಬಾ ರಾಮ್‌ದೇವ್ ಅವರ ಕಂಪನಿ ಪತಂಜಲಿಗೆ ಹೋಗುತ್ತದೆ ಎಂದು ಹೇಳಲಾಗುತ್ತಿದೆ.

ಈ ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿ ನನ್ನುಮಾಲ್ ಪಹಾದಿಯಾ ಶೀಘ್ರ ಕ್ರಮಕೈಗೊಂಡು ಈ ಕುರಿತು ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.

ಪತಂಜಲಿಗೆ ಸಂಬಂಧಿಸಿದ ಸಾಸಿವೆ ಎಣ್ಣೆ ಬಾಟಲಿಗಳು ಮತ್ತು ಹೊದಿಕೆಗಳು ಇತ್ಯಾದಿ ಖೈರ್ಥಾಲ್‌ನ ಸಿಂಘಾನಿಯಾ ಆಯಿಲ್ ಮಿಲ್‌ನಲ್ಲಿವೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ಸಿಕ್ಕಿದೆ.

ಈ ಹಿನ್ನೆಲೆ ಡಿಸಿ ನೇತೃತ್ವದಲ್ಲಿ ದಾಳಿ ನಡೆಸಿ ಕೆಲ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಜಿಲ್ಲಾಡಳಿತ ಕಾರ್ಖಾನೆಯನ್ನು ಮೊಹರು ಮಾಡಿದೆ. ಪೊಲೀಸರು ಸಹ ತನಿಖೆ ಮುಂದುವರಿಸಿದ್ದಾರೆ.

ಖಾದ್ಯ ತೈಲ ಸಂಸ್ಥೆಗಳು ಈಗಾಗಲೇ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿವೆ : ಪತಂಜಲಿ ಬ್ರ್ಯಾಂಡ್ ಸಾಸಿವೆ ಎಣ್ಣೆಯ ಜಾಹೀರಾತನ್ನು ಖಾದ್ಯ ತೈಲ ಸಂಸ್ಥೆಗಳು ಈಗಾಗಲೇ ಆಕ್ಷೇಪಿಸಿವೆ.

ವಾಸ್ತವವಾಗಿ, ಪತಂಜಲಿಯ ಸಾಸಿವೆ ಎಣ್ಣೆಯ ಜಾಹೀರಾತಿನಲ್ಲಿ,ಪತಂಜಲಿ ಹೊರತುಪಡಿಸಿ ಎಲ್ಲಾ ಕಂಪನಿಗಳು ಕಚ್ಚಾ ತೈಲದಲ್ಲಿ ಕಲಬೆರಕೆ ಹೊಂದಿರುವಂತೆ ತೋರಿಸಲಾಗಿದೆ. ಹೀಗಾಗಿ, ಖಾದ್ಯ ತೈಲ ಸಂಸ್ಥೆ ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.