ETV Bharat / bharat

ಔಷಧದ ಜತೆ ಜತೆಗೆ ಸಂಗೀತದ ಮೂಲಕ ಚಿಕಿತ್ಸೆ: ಡಾ.ಧವಲ್ ಕಣ್ವಾಸಿಗೆ ಹಿರಿಯ ವೈದ್ಯರ ಸಾಥ್​ - ಧವಲ್ ಕಣ್ವಾಸಿ

ಡಾ.ಧವಲ್ ಕಣ್ವಾಸಿ ಅವರು ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವುದು ಮಾತ್ರವಲ್ಲದೇ ತಮ್ಮ ಗಾಯನ ಕೌಶಲ್ಯವನ್ನು ಜೀವಂತವಾಗಿರಿಸಿಕೊಳ್ಳುತ್ತಿದ್ದಾರೆ. ಸಂಗೀತದ ಮೂಲಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬಹುದು ಎಂಬುದು ಅವರ ನಂಬಿಕೆ.

Dr Dhaval Kanwasi
ಡಾ.ಧವಲ್ ಕಣ್ವಾಸಿ
author img

By

Published : Jan 30, 2023, 7:54 PM IST

ಡಾ.ಧವಲ್ ಕಣ್ವಾಸಿ..

ಡೆಹ್ರಾಡೂನ್(ಉತ್ತರಾಖಂಡ) ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಡಾ.ಧವಲ್ ಕಣ್ವಾಸಿ ಅವರು ಉತ್ತಮ ವೈದ್ಯ ಜತೆಗೆ ಗಾಯಕ ಕೂಡ. ಸಂಗೀತದ ಮೂಲಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಬಹುದು ಎಂಬುದು ಅವರ ನಂಬಿಕೆ. ಸಂಗೀತವು ದೇಹದ ವ್ಯವಸ್ಥೆಗಳ ಮೇಲೆ ತನ್ನ ಪ್ರಭಾವ ಬೀರುತ್ತದೆ. ಅದಕ್ಕಾಗಿಯೇ ಇವರು ರೋಗಿಗಳಿಗೆ ಔಷಧದ ಜೊತೆಗೆ ಸಂಗೀತದ ಮೂಲಕ ಚಿಕಿತ್ಸೆ ನೀಡುತ್ತಾರೆ. ಹಿರಿಯ ವೈದ್ಯರು ಕೂಡ ಡಾ.ಕಣ್ವಾಸಿ ಅವರ ಕೌಶಲ್ಯವನ್ನು ಕೊಂಡಾಡುತ್ತಿದ್ದಾರೆ.

ತಾಯಿಯೇ ಪ್ರೇರಣೆ: ಡಾ.ಧವಳ್ ಕಣ್ವಾಸಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. ಇವರ ತಂದೆ ಜಗಜೀಶ್ ಸಿಂಗ್ ಕಣ್ವಾಸಿ. ಚಮೋಲಿ ಜಿಲ್ಲೆಯ ಗೋಚಾರ್ ನಿವಾಸಿ. ತಾಯಿ ಪುಷ್ಪಾ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದ ಇವರಿಗೆ ಹಾಡಲು ತಾಯಿಯೇ ಪ್ರೇರಣೆಯಂತೆ.

ಸಂಸ್ಕೃತದಲ್ಲೂ ಪಾಂಡಿತ್ಯ: ಡಾ.ಧವಳ್ ಅವರು ಸಂಸ್ಕೃತದಲ್ಲೂ ಪಾಂಡಿತ್ಯವನ್ನು ಪಡೆದಿದ್ದಾರೆ. ಅಖಿಲ ಭಾರತ ಸಂಸ್ಕೃತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಹಾಡುವ ಜತೆಗೆ ರೋಗಿಗಳ ಸೇವೆ ಮಾಡುತ್ತಿರುವ ಇವರ ಕಾರ್ಯಕ್ಕೆ ಹಿರಿಯ ವೈದ್ಯರು ಸಹ ಸಾಥ್​ ನೀಡುತ್ತಾರೆ. ಆಸ್ಪತ್ರೆಯ ಹಿರಿಯ ವೈದ್ಯರು ಯಾವಾಗಲೂ ತಮ್ಮ ಮನೋಬಲವನ್ನು ಹೆಚ್ಚಿಸುತ್ತಾರಂತೆ ಎಂದು ಡಾ.ಧವಳ್ ಹೇಳಿದ್ದಾರೆ.

ಹಿರಿಯ ವೈದ್ಯರು ಸಾಥ್​: ಮತ್ತೊಂದೆಡೆ, ಕಾರೊನೇಷನ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಡಿ.ಪಿ.ಜೋಶಿ ಡಾ.ಕಣ್ವಾಸಿ ಅವರನ್ನು ಕೊಂಡಾಡಿದ್ದಾರೆ. ಆಸ್ಪತ್ರೆಯ ಒಪಿಡಿ ಹಾಗೂ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಪೂರ್ಣ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಲು ಡಾ.ಕಣ್ವಾಸಿ ಸದಾ ಸಿದ್ಧ. ವಿಶೇಷವಾಗಿ ಕ್ರಿಟಿಕಲ್ ಕೇರ್ ರೋಗಿಗಳ ಸೇವೆಯಲ್ಲಿ ಯಾವಾಗಲೂ ಸಮರ್ಪಿತ. ಹಾಡುವ ಹವ್ಯಾಸವನ್ನೂ ಅವರು ಜೀವಂತವಾಗಿಟ್ಟಿದ್ದಾರೆ.

ಯುವ ವೈದ್ಯ ತುಂಬಾ ಒಳ್ಳೆಯ ಮತ್ತು ಉತ್ತಮ ಗಾಯಕ ಎನ್ನುತ್ತಾರೆ ಡಾ.ಜೋಶಿ. ಸಂಗೀತವು ಮನಸ್ಸಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಂತಹ ಪ್ರತಿಭಾವಂತ ವೈದ್ಯರಿಗೆ ವೇದಿಕೆ ಕಲ್ಪಿಸಿವುದರ ಜೊತೆಗೆ ಯುವಕರಿಗೆ ಮಾದರಿಯಾಗಬೇಕು ಎಂದು ಡಾ.ಜೋಶಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನೃತ್ಯ ಥೆರಪಿ ಮೂಲಕ ಚಿಕಿತ್ಸೆ‌: ಕಳೆದ ವರ್ಷ ಕೋವಿಡ್ ಸೋಂಕಿಗೆ ಒಳಗಾದವರಿಗೆ ಆತ್ಮವಿಶ್ವಾಸ ಮೂಡಿಸಲು ನಿತ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಾಯಾಮ, ಡ್ಯಾನ್ಸ್ ಮೂಲಕ‌ ನೃತ್ಯ ಥೆರಪಿ ಮಾಡಿಸಿ ಅವರನ್ನು ಬೇಗ ಗುಣಮುಖರಾಗಿ ಮಾಡುತ್ತಿದ್ದರು. ಪಾಸಿಟಿವ್ ಜೊತೆಗೆ ಇತರ ರೋಗಗಳು ಇರುವ ಸೋಂಕಿತರು ಕೋವಿಡ್ ಜಿಲ್ಲಾ ಆಸ್ಪತ್ರೆಗೆ ಬಂದರೆ, ಕೋವಿಡ್ ನಿಂದ ಗುಣಮುಖರಾಗಲು ಕನಿಷ್ಠ 10 ರಿಂದ 15 ದಿನಗಳು ಬೇಕು. ಆ ಸಂದರ್ಭದಲ್ಲಿ ಸೋಂಕಿತರು ಬೆಡ್ ಮೇಲೆ ಮಲಗಿರುವುದರಿಂದ ದೇಹದ ರಕ್ತ ಚಲನೆಯು ಕಡಿಮೆಯಾಗಿತ್ತದೆ. ‌

ಜೀವನ ಬೇಡ ಎಂಬ‌ ನಿರುತ್ಸಾಹ ಉಂಟಾಗುತ್ತದೆ. ಇಂತಹ ಸೋಂಕಿತರಲ್ಲಿ ಆತ್ಮ ವಿಶ್ವಾಸ ಹಾಗೂ ಜೀವನದ ಉತ್ಸಾಹ ತುಂಬಲು ವಾರ್ಡ್ ನಲ್ಲಿ‌ ವ್ಯಾಯಾಮ ಹಾಗೂ ಗೀತೆಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಅವರಿಗೆ ಗೊತ್ತಾಗದ ರೀತಿಯಲ್ಲಿ ಜೀವನದ ಬಗ್ಗೆ ಉತ್ಸಾಹ ಮೂಡಿಸಲಾಗುತ್ತಿತ್ತು.

ಇದನ್ನೂ ಓದಿ: ಮೈಸೂರು: ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತರಿಗೆ ನೃತ್ಯ ಥೆರಪಿ ಮೂಲಕ ಚಿಕಿತ್ಸೆ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.