ಬಾಗ್ಡೋಗ್ರಾ (ಪಶ್ಚಿಮ ಬಂಗಾಳ):ಇಲ್ಲಿನ ಬಾಗ್ಡೋಗ್ರಾ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಶನಿವಾರ ಉತ್ತರ ಸಿಕ್ಕಿಂನ ಝೀಮಾದಲ್ಲಿ ಆಕಸ್ಮಿಕ ನಡೆದ ದುರಂತದಲ್ಲಿ ಸಾವಿಗೀಡಾದ 16 ಭಾರತೀಯ ಸೇನಾ ಯೋಧರಿಗೆ ಪುಷ್ಪಾಪರ್ಚನೆ ಮಾಡಿ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದು ಭಾರತೀಯ ಸೇನೆ ತಿಳಿಸಿದೆ.
ಉತ್ತರ ಸಿಕ್ಕಿಂನ ಝೆಮಾ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಕಡಿದಾದ ಇಳಿಜಾರಿನಲ್ಲಿ ಸೇನಾ ಟ್ರಕ್ ಸಂಚರಿಸುತ್ತಿದ್ದ ವೇಳೆ ತಿರುವಿನಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಸೇನಾ ಅಧಿಕಾರಿಗಳು ಸೇರಿದಂತೆ 16 ಯೋಧರು ಪ್ರಾಣ ಕಳೆದುಕೊಂಡಿದ್ದರು. ಸೇನಾ ಟ್ರಕ್ ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದು, ಅದು ಚಾಟೆನ್‌ನಿಂದ ತಂಗು ಕಡೆಗೆ ಪ್ರಯಾಣಿಸುತ್ತಿತ್ತು. ತೀಕ್ಷ್ಣವಾದ ತಿರುವಿನಲ್ಲಿ ವಾಹನವು ಕಡಿದಾದ ಇಳಿಜಾರಿನಲ್ಲಿ ಸ್ಕಿಡ್ ಆಗಿ ಪ್ರಪಾತಕ್ಕೆ ಬಿದ್ದಿತು. ಈ ಘಟನೆಯಲ್ಲಿ ದುರದೃಷ್ಟಕರ ವಾಗಿ ಮೂವರು ಕಿರಿಯ ಆಯೋಗದ ಅಧಿಕಾರಿಗಳು ಸೇರಿದಂತೆ 16 ಸೇನಾ ಯೋಧರ ಸಾವಿಗೆ ಕಾರಣವಾಯಿತು ಎಂದು ಸೇನೆಯೂ ಹೇಳಿದೆ.
ಭಾರತೀಯ ಸೇನೆಯೂ ರಕ್ಷಣಾ ಕಾರ್ಯಾಚರಣೆ ತಕ್ಷಣ ಪ್ರಾರಂಭಿಸಿತು. ಅದರಲ್ಲಿ ಗಾಯಗೊಂಡಿದ್ದ ನಾಲ್ವರು ಸೈನಿಕರಿಗೆ ಏರ್ಲಿಪ್ಟ್ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮೃತ ಯೋಧರು 285 ಮೆಡಿಕಲ್ ರೆಜಿಮೆಂಟ್‌ನ ನೈಬ್ ಸುಬೇದಾರ್ ಚಂದನ್ ಕುಮಾರ್ ಮಿಶ್ರಾ ಮತ್ತು ನೈಬ್ ಸುಬೇದಾರ್ ಓಂಕಾರ್ ಸಿಂಗ್, ಎಲ್/ಹವಿಲ್ದಾರ್ ಗೋಪಿನಾಥ್ ಮಕುರ್, ಸಿಪಾಯಿ ಸುಖ ರಾಮ್, ಹವಾಲ್ದಾರ್ ಚರಣ್ ಸಿಂಗ್ ಮತ್ತು 26 ಯಾಂತ್ರೀಕೃತ ಪದಾತಿದಳದ ನಾಯಕ್ ರವೀಂದರ್ ಸಿಂಗ್ ಥಾಪಾ ಎಂದು ಸೇನೆ ತಿಳಿಸಿದೆ.
221 ಫೀಲ್ಡ್ ರೆಜಿಮೆಂಟ್‌ನ ನಾಯಕ್ ವೈಶಾಖ್ ಎಸ್ ಮತ್ತು ನಾಯಕ್ ಪ್ರಮೋದ್ ಸಿಂಗ್ ಮೃತರು, 25 ಗ್ರೆನೇಡಿಯರ್ ನಾಲ್ವರು ಸೈನಿಕರು ಎಲ್/ನಾಯಕ್ ಭೂಪೇಂದ್ರ ಸಿಂಗ್, ನಾಯಕ್ ಶ್ಯಾಮ್ ಸಿಂಗ್ ಯಾದವ್, ನಾಯಕ್ ಲೋಕೇಶ್ ಕುಮಾರ್ ಮತ್ತು ಗ್ರೆನೇಡಿಯರ್ ವಿಕಾಸ್ ಕುಮಾರ್.
8 ರಾಜಸ್ಥಾನ ರೈಫಲ್ಸ್ ನ ಸುಬೇದಾರ್ ಗುಮಾನ್ ಸಿಂಗ್ ಮತ್ತು ಎಲ್/ಹವಿಲ್ಡರ್ ಅರವಿಂದ್ ಸಿಂಗ್, 113 ಇಂಜಿನಿಯರ್ ರೆಜಿಮೆಂಟ್‌ನ ಎಲ್/ನಾಯಕ್ ಸೋಂಬೀರ್ ಸಿಂಗ್ ಮತ್ತು 1871 ಫೀಲ್ಡ್ ರೆಜಿಮೆಂಟ್‌ನ ಎಲ್/ನಾಯಕ್ ಮನೋಜ್ ಕುಮಾರ್ ಕೂಡ ಅಪಘಾತದಲ್ಲಿ ಮಡಿದ ಸೈನಿಕರಲ್ಲಿ ಸೇರಿದ್ದಾರೆ ಎಂದು ಸೇನೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಡೋಂಟ್ವರಿ BF 7 ಭಾರತಕ್ಕೆ ಅಪಾಯಕಾರಿಯಲ್ಲ: ವಿಜ್ಞಾನಿ ರಾಕೇಶ್ ಮಿಶ್ರಾ ಅಭಯ