ನವದೆಹಲಿ : ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ, ದೆಹಲಿ ಸರ್ಕಾರದ ಸಹಯೋಗದೊಂದಿಗೆ ನವದೆಹಲಿಯ ಗುರುದ್ವಾರ ಶ್ರೀ ರಾಕಾಬ್‌ಗಂಜ್ ಸಾಹಿಬ್‌ನಲ್ಲಿ 400 ಹಾಸಿಗೆಗಳ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ.
ಇದು ಮೇ 10 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ಕೋವಿಡ್ ಕೇಂದ್ರಕ್ಕೆ ₹2 ಕೋಟಿ ದೇಣಿಗೆ ನೀಡಿದ್ದಕ್ಕಾಗಿ ಡಿಎಸ್‌ಜಿಎಂಸಿ ಅಧ್ಯಕ್ಷ ಮಂಜಿಂದರ್ ಸಿರ್ಸಾ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಧನ್ಯವಾದ ಅರ್ಪಿಸಿದರು. ಆದರೆ, ಇದಕ್ಕೆ ದೇಶಾದ್ಯಂತ ಸಿಖ್ ಸಮುದಾಯಗಳು ವಿರೋಧ ವ್ಯಕ್ತಪಡಿಸಿದ್ದು, ಬಚ್ಚನ್ ಹಣವನ್ನು ಹಿಂತಿರುಗಿಸಿ ಎಂದು ಆಗ್ರಹಿಸಿದ್ದಾರೆ.
ಸೌಲಭ್ಯಗಳು ಯಾವುವು : ಆಮ್ಲಜನಕ ಹಾಸಿಗೆಗಳಿಂದ, ತಜ್ಞ ವೈದ್ಯರಿಂದ ಹಿಡಿದು ಎಲ್ಲಾ ರೀತಿಯ ಔಷಧಿಗಳು ಇಲ್ಲಿ ಲಭ್ಯವಿರುತ್ತವೆ. ಈ ಕೇಂದ್ರವು ಜೈಪ್ರಕಾಶ್ ಆಸ್ಪತ್ರೆಗೆ ಸಂಬಂಧಿಸಿದೆ ಮತ್ತು ಸ್ಥಳೀಯ ಡಿಎಂ ಇದಕ್ಕಾಗಿ ನೋಡಲ್ ಅಧಿಕಾರಿಯಾಗಿದ್ದಾರೆ.
ಯಾವುದೇ ರೋಗಿಗೆ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ. ರೋಗಿಗಳನ್ನು ಸಾಗಿಸಲು ಉಚಿತ ಆ್ಯಂಬುಲೆನ್ಸ್ ಸೇವೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆ ಇದ್ದು, ಎಲ್ಲವೂ ಉಚಿತವಾಗಿದೆ.
ವಿವಾದ ಏನು? : ಈ ಕೇಂದ್ರಕ್ಕೆ ಅಮಿತಾಬ್ ಬಚ್ಚನ್ ದೇಣಿಗೆ ನೀಡಿದ ಸುದ್ದಿಯ ನಂತರ, ಸಿಖ್ಖರು ವಿಶೇಷವಾಗಿ 1984ರ ಘಟನೆಯ ಸಂತ್ರಸ್ತರು ಇದನ್ನು ವಿರೋಧಿಸಿದ್ದು, ಮತ್ತು ಬಚ್ಚನ್ ಅವರಿಂದ ಹಣವನ್ನು ತೆಗೆದುಕೊಂಡಿದ್ದಕ್ಕಾಗಿ ಸಿರ್ಸಾ ಅವರನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.
1984ರ ನರಮೇಧದಲ್ಲಿ ಅಮಿತಾಬ್ ಬಚ್ಚನ್ ಅಪರಾಧಿ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಆದ್ದರಿಂದ ಅವರಿಂದ ಯಾವುದೇ ರೀತಿಯ ಸಹಾಯ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಜಗ್ಗೋ ಪಾರ್ಟಿ ಅಮಿತಾಬ್ ಅವರ ಹಣ ಹಿಂದಿರುಗಿಸುತ್ತದೆ : ಮತ್ತೆ ಅಧಿಕಾರಕ್ಕೆ ಬಂದರೆ, ಅವರು ಮೊದಲು ಮಾಡಬೇಕಾಗಿರುವುದು ಬಚ್ಚನ್ ಹಣವನ್ನು ಹಿಂದಿರುಗಿಸುವುದು ಎಂದು DSGMC ಮಾಜಿ ಮುಖ್ಯಸ್ಥ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರ 2 ಕೋಟಿ ರೂ.ಗಳ ದೇಣಿಗೆ ಬಗ್ಗೆ ಸಮಿತಿ ಅಧ್ಯಕ್ಷ ಮಂಜಿಂದರ್ ಸಿರ್ಸಾ ಅವರು 2 ಕೋಟಿ ರೂ.ಗಳ ವಹಿವಾಟಿನ ಎಲ್ಲಾ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಅವರೊಂದಿಗಿನ ಸಂಭಾಷಣೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಕ್ಕಾಗಿ ಸಿರ್ಸಾ ಸಹ ಸಂಗತ್‌ಗೆ ಕ್ಷಮೆಯಾಚಿಸಿದ್ದಾರೆ ..