ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ನಡೆದ ಎನ್‌ಕೌಂಟರ್‌ನಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದು, ಗಾಯಕನನ್ನು ಕೊಲ್ಲಲು ಈ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಇಬ್ಬರು ಶಾರ್ಪ್‌ಶೂಟರ್‌ಗಳಾದ ಮನ್‌ಪ್ರೀತ್ ಮನ್ನು ಮತ್ತು ಜಗ್ರೂಪ್ ರೂಪ ಅವರನ್ನು ಪೊಲೀಸರು ಎನ್‌ಕೌಂಟರ್ ಮಾಡುವಾಗ ಎಕೆ 47 ರೈಫಲ್ ಮತ್ತು 9 ಎಂಎಂ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು. ಅಮೃತಸರದ ಅಟ್ಟಾರಿ ಗಡಿಯ ಬಳಿ ಎನ್‌ಕೌಂಟರ್ ನಡೆದಿದೆ.
ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಾನೆ. ಮನ್ನು ಎಕೆ 47 ರಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಶಿಶ್, ಫೌಜಿ ಮತ್ತು ಸೆರ್ಸಾ ಅವರಿಗೆ ಬ್ಯಾಕಪ್ ಒದಗಿಸಲು ಬೇರೆ ಬೇರೆ ಶಸ್ತ್ರಾಸ್ತ್ರಗಳನ್ನು ನೀಡಲಾಗಿತ್ತಂತೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ಪಲ್ಟಿ: ಐವರು ಪ್ರಯಾಣಿಕರಿಗೆ ಗಾಯ