ETV Bharat / bharat

ಸಿಧು ಮೂಸೆ ವಾಲಾ ಕೊನೆಯ ಹಾಡನ್ನು ತೆಗೆದುಹಾಕಿದ ಯೂಟ್ಯೂಬ್‌ : ಕಾರಣ!?

ಈ ಹಾಡು ಪಂಜಾಬ್‌ನ ನೀರಿನ ಸಮಸ್ಯೆಯ ಕುರಿತಾಗಿತ್ತು. ಹಾಗೆ ಸಟ್ಲೆಜ್-ಯಮುನಾ ಲಿಂಕ್ ಕಾಲುವೆಯ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಷಯ ಸಾಕಷ್ಟು ಸಮಯದಿಂದ ಪಂಜಾಬ್ ಮತ್ತು ಹರಿಯಾಣದ ನಡುವೆ ಘರ್ಷಣೆಯಲ್ಲೇ ಇದೆ. ಪರಿಣಾಮ ಯೂಟ್ಯೂಬ್​ನಿಂದ ತೆಗೆದುಹಾಕಲಾಗಿದೆ.

ಸಿಧು ಮೂಸ್ ವಾಲಾ ಅವರ ಕೊನೆಯ ಹಾಡನ್ನು ತೆಗೆದುಹಾಕಿದ  ಯೂಟ್ಯೂಬ್‌ : ಕಾರಣ!?

author img

By

Published : Jun 26, 2022, 5:22 PM IST

ನವದೆಹಲಿ: ಸಿಧು ಮೂಸೆ ವಾಲಾ ಅವರ ಹತ್ಯೆಯ ನಂತರ ಬಿಡುಗಡೆಯಾದ ಕೊನೆಯ ಹಾಡಾದ ಸಟ್ಲೆಜ್-ಯಮುನಾ ಲಿಂಕ್ ಕಾಲುವೆಯನ್ನು ಉಲ್ಲೇಖಿಸುವ ಸಾಹಿತ್ಯ ಇದ್ದ ವಿಡಿಯೋವನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ.

ಈ ಹಾಡು ಪಂಜಾಬ್‌ನ ನೀರಿನ ಸಮಸ್ಯೆಯ ಕುರಿತಾಗಿತ್ತು. ಹಾಗೆ ಸಟ್ಲೆಜ್-ಯಮುನಾ ಲಿಂಕ್ ಕಾಲುವೆಯ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಷಯ ಸಾಕಷ್ಟು ಸಮಯದಿಂದ ಪಂಜಾಬ್ ಮತ್ತು ಹರಿಯಾಣದ ನಡುವೆ ಸಂಘರ್ಷದ ವಿಷಯವಾಗೇ ಉಳಿದಿದೆ.

ಜೂನ್ 23 ರಂದು ಯುಟ್ಯೂಬ್​ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಅದಾಗ್ಯೂ, ವಿಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, "ಸರ್ಕಾರದಿಂದ ಕಾನೂನು ದೂರಿನ ಕಾರಣ ಈ ವಿಷಯವು ಈ ದೇಶದ ಡೊಮೇನ್‌ನಲ್ಲಿ ಲಭ್ಯವಿಲ್ಲ" ಎಂದು ಹೇಳುವ ಸಂದೇಶವು ಇದೀಗ ಪ್ರದರ್ಶಿಸಲ್ಪಡುತ್ತದೆ.

ಈ ಹಾಡಿನಲ್ಲಿ ನೀರಿನ ಸಮಸ್ಯೆ ಜೊತೆ ಅವಿಭಜಿತ ಪಂಜಾಬ್ 1984 ರ ಸಿಖ್ ವಿರೋಧಿ ದಂಗೆಗಳ ಬಗ್ಗೆಯೂ ಮಾಹಿತಿ ಇದೆ. ಈ ವಿಡಿಯೋದಲ್ಲಿ ರೈತ ಆಂದೋಲನದ ಸಮಯದಲ್ಲಿ ಕೆಂಪು ಕೋಟೆಯಲ್ಲಿ ಸಿಖ್ ಧ್ವಜವನ್ನು ಹಾರಿಸುವುದನ್ನು ಸಹ ತೋರಿಸಲಾಗಿತ್ತು.

ಇದನ್ನೂ ಓದಿ : Gujarat riots case: 'ನಾನು ಅಪರಾಧಿ ಅಲ್ಲ' ಎಂದು ಕೂಗಿ ಕೂಗಿ ಹೇಳಿದ ತೀಸ್ತಾ ಸೆಟಲ್ವಾಡ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.