ನವದೆಹಲಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯ್ ಎಂದು ದೆಹಲಿ ಪೊಲೀಸರು ನಿನ್ನೆಯಷ್ಟೇ ಹೇಳಿದ್ದರು. ಬಿಷ್ಣೋಯ್ ಅವರ ಸಹೋದರ ಅನ್ಮೋಲ್ (ಅನ್ಮೋಲ್ ಬಿಷ್ಣೋಯ್) ದೇಶದಿಂದ ಪಲಾಯನ ಮಾಡಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತಿವೆ. ಬಿಷ್ಣೋಯ್ ಅವರ ಸೋದರಳಿಯ ಸಚಿನ್ ಸಹ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಗುಪ್ತಚರ ಸಂಸ್ಥೆಗಳ ಪ್ರಕಾರ, ಸಿಧು ಮೂಸೆವಾಲಾ ಹತ್ಯೆಯ ಜವಾಬ್ದಾರಿಯನ್ನು ಹೊತ್ತಿರುವ ಸಚಿನ್ ಬಿಷ್ಣೋಯ್ ಕೂಡ ಶೀಘ್ರದಲ್ಲೇ ದೇಶ ತೊರೆಯುವ ಸಂದೇಹವಿದೆ. ಬಂಧಿತ ಶಂಕಿತರ ವಿಚಾರಣೆಯಲ್ಲಿ ಅನ್ಮೋಲ್ ಹೆಸರು ಬಂದಿದ್ದು, ಈ ಘಟನೆಯ ಹೊಣೆಯನ್ನು ಸ್ವತಃ ಸಚಿನ್ ವಹಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದುವರೆಗೆ 5 ಶೂಟರ್‌ಗಳನ್ನು ಗುರುತಿಸಲಾಗಿದ್ದು, ಈವರೆಗೆ ಬಂಧಿಸಿರುವವರಲ್ಲಿ ಯಾರೂ ಈ ಘಟನೆಯ ಶೂಟರ್ಗಳಲ್ಲ. ಆದರೆ ಯಾವುದೋ ರೀತಿಯಲ್ಲಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಮುಂಬೈ ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ನಿವಾಸಿ ಸೌರಭ್ ಮಹಾಕಲ್ ಎಂಬಾತನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆ ನಿವಾಸಿ ಸಂತೋಷ್ ಅಲಿಯಾಸ್ ಸೋನು ಎಂಬಾತ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಸೋನಿಪತ್‌ನ ನಿವಾಸಿಗಳಾದ ಪ್ರಿಯವ್ರತ್ ಮತ್ತು ಮಂಜೀತ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮಹಾಕಾಲ್ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಹಾಗೆಯೇ ಪಂಜಾಬ್‌ನ ತರಣ್ ನಿವಾಸಿಗಳಾದ ಮನ್‌ಪ್ರೀತ್ ಮತ್ತು ಜಗ್ರೂಪ್ ಅವರ ಎರಡು ಚಿತ್ರಗಳು ಸಹ ಪೊಲೀಸರ ಬಳಿ ಇವೆ. ಗುಂಡಿನ ದಾಳಿಯಲ್ಲಿ ಅವರೂ ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
-
Interpol issued Red Corner Notice against Satinderjit Singh alias Goldy Brar. He claimed responsibility of killing #SidhuMooseWala: Interpol pic.twitter.com/g42EQyvcF7
— ANI (@ANI) June 9, 2022 " class="align-text-top noRightClick twitterSection" data="
">Interpol issued Red Corner Notice against Satinderjit Singh alias Goldy Brar. He claimed responsibility of killing #SidhuMooseWala: Interpol pic.twitter.com/g42EQyvcF7
— ANI (@ANI) June 9, 2022Interpol issued Red Corner Notice against Satinderjit Singh alias Goldy Brar. He claimed responsibility of killing #SidhuMooseWala: Interpol pic.twitter.com/g42EQyvcF7
— ANI (@ANI) June 9, 2022
ಲಾರೆನ್ಸ್ ಬಿಷ್ಣೋಯ್ ಪಂಜಾಬ್‌ನಲ್ಲಿ ಗಾಯಕರಿಂದ ಸುಲಿಗೆ ದಂಧೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ವರ್ಷ ಕರೆ ಮಾಡಿ ಮೂಸೆವಾಲಾಗೆ ಬೆದರಿಕೆ ಹಾಕಿದ್ದನಂತೆ. ಮೂಸೆವಾಲಾ ಹತ್ಯೆಯ ನಂತರ ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ನಲ್ಲಿ ಇನ್ನೂ ಅನೇಕ ಗಾಯಕರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
100 ಜನ ವಶಕ್ಕೆ: ಸಿಧು ಮೂಸೇವಾಲಾ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಯುವಕರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಮುಂಜಾನೆ ಮೊಹಾಲಿಯ ಕ್ಲೈಮೇಟ್ ಟವರ್ ಪ್ರದೇಶದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. 100ಕ್ಕೂ ಹೆಚ್ಚು ನೌಕರರ ಮೇಲೆ ದಾಳಿ ನಡೆಸಿದ ಪೊಲೀಸರು ಈ ವೇಳೆ ಕೆಲವು ವಾಹನಗಳನ್ನೂ ವಶಪಡಿಸಿಕೊಂಡಿದ್ದಾರೆ. ಮೇ 29ರಂದು ನಡೆದಿದ್ದ ಸಿಧು ಮೂಸೇವಾಲಾ ಹತ್ಯೆ ಪ್ರಕರಣದಲ್ಲಿ ಈ ಯುವಕರ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: ಕುತೂಹಲಕರ ಘಟ್ಟಕ್ಕೆ ರಾಜ್ಯಸಭೆ ಚುನಾವಣಾ ಕಣ: ಜೆಡಿಎಸ್-ಕಾಂಗ್ರೆಸ್ ಹಗ್ಗಜಗ್ಗಾಟ ಬಿಜೆಪಿಗೆ ಲಾಭ?