ETV Bharat / bharat

25 ಕಿ.ಮೀ ದೂರದವರೆಗೆ ಸಂಬಂಧಿಗಳ ಬೆನ್ನೇರಿ ಆಸ್ಪತ್ರೆಗೆ ದಾಖಲಾದ ಮಹಿಳೆ.! - ಹಿಮಾಚಲ ಪ್ರದೇಶ ವೈರಲ್ ಸುದ್ದಿ

ಮಹಿಳೆಯನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸುವ ದೃಶ್ಯ ಹಿಮಾಚಲ ಪ್ರದೇಶದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

Sick woman of Marod village was picked up on back by relatives and taken to hospital
25 ಕಿ.ಮೀ ದೂರದವರೆಗೆ ಸಂಬಂಧಿಗಳ 'ಹೆಗಲೇರಿ' ಆಸ್ಪತ್ರೆಗೆ ದಾಖಲಾದ ಮಹಿಳೆ
author img

By

Published : Feb 17, 2021, 5:16 PM IST

ಕುಲ್ಲು, ಹಿಮಾಚಲ ಪ್ರದೇಶ: ಹೊಟ್ಟೆ ನೋವಿನಿಂದ ನರಳುತ್ತಿದ್ದ ಮಹಿಳೆಯನ್ನು ಬೆನ್ನ ಮೇಲೆ ಹೊತ್ತು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಸಾಗಿಸಿದ ಘಟನೆ ಕುಲ್ಲು ಬಳಿಯ ಮರೋಡ್ ಗ್ರಾಮದಲ್ಲಿ ನಡೆದಿದೆ.

ವೈರಲ್ಲಾದ ವಿಡಿಯೋ

ಗ್ರಾಮದ ಡೋಲಾ ಸಿಂಗ್ ಪತ್ನಿ ಲೀಲಾದೇವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿಯೇ ಉಪಚಾರ ಮಾಡಿದರೂ ಹೊಟ್ಟೆ ನೋವು ನಿವಾರಣೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು.

ಇದನ್ನೂ ಓದಿ: ಕೋವಿಡ್ ಕುರಿತ ಸಾರ್ಕ್​​​ ಸಭೆಗೆ ಭಾರತದಿಂದ ಪಾಕ್​​ಗೆ ಆಹ್ವಾನ

ಆಸ್ಪತ್ರೆಗಳು ಹತ್ತಿರವಿಲ್ಲದ ಕಾರಣ ಮತ್ತು ಸರಿಯಾದ ರಸ್ತೆಯಿಲ್ಲದ ಕಾರಣದಿಂದ ಮಹಿಳೆಯನ್ನು 25 ಕಿಲೋಮೀಟರ್ ದೂರದವರೆಗೆ ಬೆನ್ನ ಮೇಲೆ ಹೊತ್ತು ಸಾಗಿಸಲಾಯಿತು. ಇದಾದ ನಂತರ 13 ಕಿಲೋಮೀಟರ್ ದೂರದವರೆಗೆ ಒಂದು ವಾಹನದ ಮೂಲಕ ಕ್ಲಿನಿಕ್​ಗೆ ಸಾಗಿಸಲಾಯಿತು.

ಮಹಿಳೆಯನ್ನು ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಗ್ರಾಮಕ್ಕೆ ರಸ್ತೆ ಸೇರಿ ಮೂಲಸೌಕರ್ಯ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.