ETV Bharat / bharat

ರಕ್ಷಾ ಬಂಧನದಂದು ನ್ಯಾಯಮೂರ್ತಿಗಳಾಗಿ ಆಯ್ಕೆ ಆದ ಅಕ್ಕ - ತಮ್ಮ: ಹಬ್ಬದ ಸಂಭ್ರಮ ಹೆಚ್ಚಿಸಿದ ನ್ಯಾಯಾಧೀಶರ ಮಕ್ಕಳು! - ನ್ಯಾಯಮೂರ್ತಿಗಳಾದ ಸಹೋದರರು

siblings become judges: ನಿವೃತ್ತ ನ್ಯಾಯಾಧೀಶ ಆರ್​ಬಿ ಸಿಂಗ್​ ಮೌರ್ಯ ಅವರ ಮಕ್ಕಳು ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ.

siblings become judges on Rakshabandhan day in Agra
ರಕ್ಷಾಬಂಧನದಂದು ನ್ಯಾಯಮೂರ್ತಿಗಳಾದ ಅಕ್ಕ ತಮ್ಮ
author img

By ETV Bharat Karnataka Team

Published : Aug 31, 2023, 12:24 PM IST

Updated : Aug 31, 2023, 12:38 PM IST

ಆಗ್ರಾ (ಉತ್ತರ ಪ್ರದೇಶ): ದೇಶಾದ್ಯಂತ ನಿನ್ನೆ ರಕ್ಷಾಬಂಧನ ಹಬ್ಬದ ಕಳೆಕಟ್ಟಿತ್ತು. ಇಂದು ಕೂಡ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಆಗ್ರಾದ ನಿವೃತ್ತ ನ್ಯಾಯಾಧೀಶರ ಮಕ್ಕಳು ರಕ್ಷಾಬಂಧನದ ಕಳೆ ಹೆಚ್ಚಿಸಿದ್ದಾರೆ. ಹೌದು, ಅಕ್ಕ - ತಮ್ಮ ಒಂದೇ ದಿನ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು, ಆಪ್ತರು, ಪರಿಚಯಿಸ್ಥರು ಸಂಭ್ರಮಿಸಿದ್ದಾರೆ. ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡು ಗಮನ ಸೆಳೆದಿದ್ದಾರೆ.

siblings become judges on Rakshabandhan day in Agra
ರಕ್ಷಾಬಂಧನದಂದು ನ್ಯಾಯಮೂರ್ತಿಗಳಾದ ಅಕ್ಕ ತಮ್ಮ

ಗುರಿ ಮತ್ತು ಕಠಿಣ ಪರಿಶ್ರಮ ಅಗತ್ಯ: ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಾಧೀಶರ ಮಕ್ಕಳು, ''ಯಶಸ್ಸಿಗೆ ಯಾವುದೇ ಶಾರ್ಟ್ ಕಟ್​ ಇಲ್ಲ. ಗುರಿ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಬಹುದು. ಸಂಪೂರ್ಣ ಸಮರ್ಪಣೆ ಜೊತೆಗೆ ಗಟ್ಟಿ ಗುರಿ ಹೊಂದುವ ಮೂಲಕ ನಿಮ್ಮ ಸಿದ್ಧತೆ ಪ್ರಾರಂಭಿಸಿ'' ಎಂದು ತಮ್ಮ ಮನದಾಳದ ಮಾತು ಹೇಳಿ ಸಲಹೆ ನೀಡಿದ್ದಾರೆ.

ಆಗ್ರಾದ ಖಂಡೌಲಿ ಪೊಲೀಸ್​ ಠಾಣೆಎ ವ್ಯಾಪ್ತಿಯ ನಾಗ್ಲಾ ಅರ್ಜುನ್​​ ನಿವಾಸಿ ಆರ್​ಬಿ ಸಿಂಗ್​ ಮೌರ್ಯ ಅವರು ನಿವೃತ್ತ ನ್ಯಾಯಾಧೀಶರು. ಅವರ ಪುತ್ರಿ ಶೈಲಜಾ (25) ಮತ್ತು ಪುತ್ರ ಸುಧಾಂಶ್​​ (22) ಉತ್ತರ ಪ್ರದೇಶ ನ್ಯಾಯಾಂಗ ಸೇವೆಗೆ ಆಯ್ಕೆ ಆಗಿದ್ದಾರೆ. ಉತ್ತರ ಪ್ರದೇಶ ನ್ಯಾಯಾಂಗ ಸೇವಾ ಪರೀಕ್ಷಾ ಫಲಿತಾಂಶದಲ್ಲಿ ಶೈಲಜಾ ಅವರು 51 ನೇ ರ‍್ಯಾಂಕ್​ ಪಡೆದರೆ, ಸುಧಾಂಶ್​​ 276 ನೇ ರ‍್ಯಾಂಕ್​ ಗಳಿಸಿಕೊಂಡಿದ್ದಾರೆ.

ಅಕ್ಕ ತಮ್ಮ ಮೊದಲ ಪ್ರಯತ್ನದಲ್ಲೇ (ಪರೀಕ್ಷೆ) ಯಶಸ್ಸು ಕಂಡಿದ್ದಾರೆ. ಸಹೋದರ ಸಹೋದರಿ ಮನೆಯಲ್ಲೇ ಓದುತ್ತಿದ್ದರು. ರಕ್ಷಾಬಂಧನ ದಿನದಂದು ಹೊರಬಿದ್ದ ಫಲಿತಾಂಶದ ಪ್ರಕಾರ, ಇವರು ನ್ಯಾಯಮೂರ್ತಿಗಳಾಗಿ ಆಯ್ಕೆ ಆಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಶೈಲಜಾ ಮತ್ತು ಸುಧಾಂಶ್​ ಉತ್ತರ ಪ್ರದೇಶದ ನ್ಯಾಯಾಂಗ ಸೇವೆಯಲ್ಲಿ ಸಿವಿಲ್​ ನ್ಯಾಯಾಧೀಶರಾಗಿ (ಕಿರಿಯ ವಿಭಾಗ) ಆಯ್ಕೆ ಆಗಿದ್ದಾರೆ. ​ ​

ಇದನ್ನೂ ಓದಿ: ನೆಲ್ಲೈನಲ್ಲಿ ಗಗನಯಾನ ಎಂಜಿನ್​​​​​ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ : ಇಸ್ರೋ

ಭಯ ಬೇಡ, ಗುರಿ ಹೊಂದಿಸಿ: ಉತ್ತಮ ಗುರಿ ಹೊಂದುವಂತೆ ಯುವಕರಿಗೆ ಶೈಲಜಾ ಮತ್ತು ಸುಧಾಂಶ್​​ ಅವರು ಸಲಹೆ ನೀಡಿದ್ದಾರೆ. ಗಾಬರಿಯಾಗಬೇಡಿ, ನಿಮ್ಮ ಗುರಿಗಳನ್ನು ಹೊಂದಿಸಿಕೊಳ್ಳಿ. ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಿ. ಕಠಿಣ ಪರಿಶ್ರಮ ಖಂಡಿತವಾಗಿಯೂ ಫಲಿತಾಂಶ ನೀಡುತ್ತದೆ. ಯಶಸ್ಸಿಗೆ ಯಾವುದೇ ಶಾರ್ಟ್​ ಕಟ್​ ಇಲ್ಲ. ಮನಸ್ಸಿಟ್ಟು, ಕಷ್ಟಪಟ್ಟು ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಪಿಯುಸಿ ಬಳಿಕ ಶೈಲಜಾ ಅವರು ಜಡ್ಜ್ ಆಗುವ ಗುರಿ ಹೊಂದಿದರು. ತಂದೆ, ಅಣ್ಣ ನನಗೆ ಸ್ಫೂರ್ತಿ. ಅವರನ್ನು ನೋಡಿ ಜಡ್ಜ್ ಆಗುವ ಗುರಿ ಹೊಂದಿದೆ. ನಾನು, ನನ್ನ ಕಿರಿಯ ಸಹೋದರ ಸುಧಾಂಶ್​ ಮನೆಯಲ್ಲೇ ಗುರಿ ಸಾಧನೆಗೆ ಬೇಕಾದ ಅಭ್ಯಾಸ ಮಾಡುತ್ತಿದ್ದೆವು. ಮೊದಲು ನಾವಿಬ್ಬರು ಚರ್ಚೆ ನಡೆಸುತ್ತಿದ್ದೆವು. ಬಳಿಕ ಅಧ್ಯಯನಕ್ಕೆ ತಂದೆ, ಅಣ್ಣ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: Raksha Bandhan: ರಕ್ಷಾಬಂಧನ ಆಚರಿಸಿದ ರಿಷಬ್​ ಶೆಟ್ಟಿ ಮಕ್ಕಳು - ಅಣ್ಣ ತಂಗಿಯ​ ಕ್ಯೂಟ್​ ಫೋಟೋಗಳಿಲ್ಲಿವೆ

ಅಣ್ಣ, ಅಪ್ಪ ನ್ಯಾಯಾಧೀಶರು: ಇವರ ಹಿರಿಯ ಸಹೋದರ ಅರ್ಜಿತ್​ ಸಿಂಗ್​​ ಕೂಡ ನ್ಯಾಯಾಧೀಶರು. ಭದೋಹಿಯಲ್ಲಿ ಸಿವಿಲ್​​ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕುಟುಂಬದಲ್ಲೀಗ ಓರ್ವ ನಿವೃತ್ತ ನ್ಯಾಯಾಧೀಶರು ಮತ್ತು ಮೂವರು ಹಾಲಿ ನ್ಯಾಯಾಧೀಶರಿದ್ದಾರೆ. ತಂದೆ ಜುಲೈನಲ್ಲಿ ಇತಾಹ್​ ಜಿಲ್ಲಾ ನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾಗಿದ್ದಾರೆ.

Last Updated : Aug 31, 2023, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.