ಶ್ರೀನಗರ(ಜಮ್ಮು ಕಾಶ್ಮೀರ್): ತನ್ನ ಆನ್‌ಲೈನ್ ಮ್ಯಾಗಜೀನ್‌ನಲ್ಲಿ ‘ಪ್ರಚೋದನಕಾರಿ ಮತ್ತು ದೇಶದ್ರೋಹಿ’ ಲೇಖನವನ್ನು ಪ್ರಕಟಿಸಿದ ಆರೋಪದದಡಿ ಕಾಶ್ಮೀರ್ ವಿಶ್ವವಿದ್ಯಾಲಯದ ಮಾಜಿ ಪಿಎಚ್‌ಡಿ ವಿದ್ಯಾರ್ಥಿಯನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (ಎಸ್ಐಎ) ಭಾನುವಾರ ಬಂಧಿಸಿದೆ. ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎಸ್‌ಐಎ ನಗರದ ಹಲವು ಸ್ಥಳಗಳಲ್ಲಿ ಶೋಧ ಕೈಗೊಂಡಿತ್ತು. ಈ ವೇಳೆ ಅಬ್ದುಲ್ ಆಲಾ ಫಾಜಿಲಿಯನ್ನು ಅವರ ಹುಮ್ಹಮಾ ನಿವಾಸದಿಂದ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯ ಕರ್ತವ್ಯದೊಂದಿಗೆ ನಿಯೋಜಿಸಲಾದ ಎಸ್‌ಐಎ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾಸಿಕ ಡಿಜಿಟಲ್ ನಿಯತಕಾಲಿಕೆ 'ದಿ ಕಾಶ್ಮೀರ್ ವಾಲಾ'ದಲ್ಲಿ ಪ್ರಕಟಗೊಂಡ ಲೇಖನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಫಾಜಿಲಿ ಮತ್ತು ಸಂಪಾದಕ ಸೇರಿದಂತೆ ಇತರ ಸಹಚರರ ವಿರುದ್ಧ ಹುಡುಕಾಟ ನಡೆಸಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಓದಿ: ಮರ್ಯಾದಾ ಹತ್ಯೆ.. ಸುಪಾರಿ ಕೊಟ್ಟು ಅಳಿಯನ ಕೊಲ್ಲಿಸಿದ ಮಾವ!
ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಡಿಜಿಟಲ್ ಉಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸ್ಐಎ ತಂಡ ವಶಪಡಿಸಿಕೊಂಡಿವೆ. ‘The shackles of slavery will break’ ಎಂಬ ಶೀರ್ಷಿಕೆಯ ಫಾಜಿಲಿ ಅವರ ಲೇಖನ ಪ್ರಕರಣಗೊಂಡಿತ್ತು. ಈ ಲೇಖನ ಅತ್ಯಂತ ಪ್ರಚೋದನಕಾರಿ, ದೇಶದ್ರೋಹಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಭಯೋತ್ಪಾದನೆಯನ್ನು ವೈಭವೀಕರಿಸುವ ಮೂಲಕ ಹಿಂಸಾಚಾರದ ಹಾದಿಯನ್ನು ಹಿಡಿಯಲು ಯುವಕರನ್ನು ಉತ್ತೇಜಿಸುವ ಉದ್ದೇಶದಿಂದ ಬರೆಯಲಾಗಿದೆ ಎಂಬುದು ಎಸ್ಐಎ ಗಮನಕ್ಕೆ ಬಂದಿದೆ. ಹಾಗಾಗಿ ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಮೂಲಕ ಕೇಂದ್ರ ಸರ್ಕಾರವು ಮಾರ್ಚ್ 2021 ರವರೆಗೆ ಐದು ವರ್ಷಗಳ ಕಾಲ ಫಾಜಿಲಿಗೆ ಮಾಸಿಕ 30,000 ರೂ.ಗಳನ್ನು ನೀಡಿದ್ದರಿಂದ ವಿಶ್ವವಿದ್ಯಾಲಯದ ಫಾರ್ಮಾಸ್ಯುಟಿಕಲ್ ಸೈನ್ಸಸ್ ವಿಭಾಗದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ ಎಂದು ಎಸ್ಎಐ ಅಧಿಕಾರಿ ಹೇಳಿದರು.