ETV Bharat / bharat

ರಸ್ತೆ ಅಪಘಾತದಲ್ಲಿ 'ಲೇಡಿ ಸಿಂಗಂ' ಖ್ಯಾತಿಯ ಎಸ್‌ಐ ಸಾವು; ಕುಟುಂಬಸ್ಥರಿಂದ ಕೊಲೆ ಆರೋಪ

ಸೋಮವಾರ ಮಧ್ಯರಾತ್ರಿ ಸಂಭವಿಸಿದ ಕಾರು ಮತ್ತು ಟ್ರಕ್‌ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಅಸ್ಸಾಂ ರಾಜ್ಯದ ನಾಗಾಂವ್‌ನ ಜಖಲಬಂಧದಲ್ಲಿ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಮೃತಪಟ್ಟಿದ್ದಾರೆ.

author img

By

Published : May 17, 2023, 8:30 AM IST

SI Junmoni Rabha died  SI Junmoni Rabha died in a horrific road accident  SI Junmoni Rabha died news  ಭೀಕರ ರಸ್ತೆ ಅಪಘಾತದಲ್ಲಿ ಲೆಡಿ ಸಿಂಗಂ​ ಸಾವು  ಪೂರ್ವ ನಿಯೋಜಿತ ಕೊಲೆ ಎಂದು ಕುಟುಂಬಸ್ಥರ ಆರೋಪ  ಮಧ್ಯರಾತ್ರಿ ಟ್ರಕ್‌ಗೆ ಮುಖಾಮುಖಿ ಡಿಕ್ಕಿ  ಮಧ್ಯರಾತ್ರಿ ಕಾರು ಮತ್ತು ಟ್ರಕ್‌ ಮುಖಾಮುಖಿ ಡಿಕ್ಕಿ  ಎಸ್‌ಐ ಜುನ್ಮೋನಿ ರಾಭಾ ಮೃತ  ಕಾರು ಎದುರಿಗೆ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ  ಭಾವಿಪತಿಯನ್ನೇ ಜೈಲಿಗಟ್ಟಿದ ಲೇಡಿ ಸಿಂಗಂ  ಅಸ್ಸೋಂ ಪೊಲೀಸ್ ಇಲಾಖೆಯ ಜುನ್ಮೋನಿ ರಾಭಾ  ನಾಗಾಂವ್ ಪೊಲೀಸ್ ಠಾಣೆ ಮೈದಾನ
ಭೀಕರ ರಸ್ತೆ ಅಪಘಾತದಲ್ಲಿ ಲೆಡಿ ಸಿಂಗಂ​ ಸಾವು

ನಾಗಾಂವ್ (ಅಸ್ಸಾಂ): ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ 'ಲೇಡಿ ಸಿಂಗಂ' ಎಂದೇ ಜನಪ್ರಿಯರಾಗಿದ್ದ ಸಬ್‌ ಇನ್ಸ್‌ಪೆಕ್ಟರ್‌ (ಎಸ್‌ಐ) ಜುನ್ಮೋನಿ ರಾಭಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ ಇವರು ವಿವಾದಗಳೊಂದಿಗೆ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದ್ದರು. ಇದೀಗ ಇವರು ಪ್ರಯಾಣಿಸುತ್ತಿದ್ದ ಕಾರು ಎದುರಿಗೆ ಬರುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊರಿಕೋಲಾಂಗ್ ಪೊಲೀಸ್ ಔಟ್‌ಪೋಸ್ಟ್‌ ಉಸ್ತುವಾರಿ ವಹಿಸಿದ್ದ ಜುನ್ಮೋನಿ ರಾಭಾ ಸೋಮವಾರ ತಡರಾತ್ರಿ ತಮ್ಮ ಖಾಸಗಿ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಉತ್ತರ ಪ್ರದೇಶದಿಂದ ಬರುತ್ತಿದ್ದ ಕಂಟೈನರ್ ವಾಹನ ಹಾಗು ರಾಭಾ ಅವರ ಕಾರು ಪರಸ್ಪರ ಡಿಕ್ಕಿಯಾಗಿವೆ. ಜಖಲಬಂಧ ಠಾಣೆ ವ್ಯಾಪ್ತಿಯ ಸರುಭುಗಿಯ ಗ್ರಾಮದಲ್ಲಿ ಘಟನೆ ನಡೆದಿದೆ.

ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದರು. ಜುನ್ಮೋನಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿವಿಲ್ ಡ್ರೆಸ್​ನಲ್ಲಿದ್ದ ರಾಭಾ ಆ ಸಮಯದಲ್ಲಿ ಒಬ್ಬರೇ ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಜಿಲ್ಲಾ ಎಸ್ಪಿ ಹೇಳಿದ್ದಾರೆ.

ಜುನ್ಮೋನಿ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ ಗುವಾಹಟಿಯ ದಕ್ಷಿಣ್ ಗಾಂವ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ. ನಿವಾಸದಲ್ಲಿ ಶೋಕದ ವಾತಾವರಣ ತುಂಬಿತ್ತು. ಕುಟುಂಬ ಸದಸ್ಯರು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರು, ಯಾರೋ ಆಕೆಯನ್ನು ಕೊಂದು ಅಪಘಾತವಾಗಿ ಬಣ್ಣಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಯ ಮೃತದೇಹವನ್ನು ನಾಗಾಂವ್ ಪೊಲೀಸ್ ಠಾಣೆಯ ಮೈದಾನಕ್ಕೆ ಕೊಂಡೊಯ್ಯಲಾಗಿದೆ. ಪೊಲೀಸರು ಸಂತ್ರಸ್ತೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಲೀನಾ ಡೇಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ದರ್ಶನ ಪಡೆದರು.

ಜುನ್ಮೋನಿ ರಾಭಾ ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿ ಕಟ್ಟುನಿಟ್ಟಾಗಿದ್ದರು. ಇದೇ ಕಾರಣಕ್ಕೆ 'ಲೇಡಿ ಸಿಂಗಂ' ಮತ್ತು 'ದಬಾಂಗ್ ಪೊಲೀಸ್' ಎಂದು ಖ್ಯಾತಿ ಗಳಿಸಿದ್ದರು. ರಾಭಾ ಅನೇಕ ವಿವಾದಗಳಲ್ಲಿಯೂ ಸಿಲುಕಿಕೊಂಡಿದ್ದರು. ಕಳೆದ ವರ್ಷದ ಜೂನ್‌ನಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಕೆಲಕಾಲ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ನಂತರ ಅಮಾನತು ಆದೇಶ ಹಿಂತೆಗೆದುಕೊಳ್ಳಲಾಗಿತ್ತು. ಇದರ ಜತೆಗೆ ಬಿಜೆಪಿ ಶಾಸಕರೊಬ್ಬರೊಂದಿಗಿನ ದೂರವಾಣಿ ಸಂಭಾಷಣೆಯಿಂದಲೂ ವಿವಾದಕ್ಕೀಡಾಗಿದ್ದರು.

ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮಗಳನ್ನು ಪೂರ್ವಯೋಜಿತ ಸಂಚು ನಡೆಸಿ ಕೊಂದು ಹಾಕಲಾಗಿದೆ. ಆಕೆ ಮತ್ತೊಬ್ಬ ಸಬ್​ ಇನ್ಸ್​ಪೆಕ್ಟರ್ ಜೊತೆ ರಾತ್ರಿ ಸಂಚರಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿರುವುದಾಗಿ ತಾಯಿ ತಿಳಿಸಿದ್ದಾರೆ. ನಾಗಾಂವ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಲೇಡಿ ಎಸ್​ಐ ಅರೆಸ್ಟ್.. ಸೇವೆಯಿಂದಲೂ ಸಸ್ಪೆಂಡ್

ಭಾವಿ ಪತಿಯನ್ನೇ ಜೈಲಿಗಟ್ಟಿದ್ದರು: ಜುನ್ಮೋನಿ ರಾಭಾ ಅವರು ರಾಣಾ ಪೊಗಾಗ್ ಎಂಬವರ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಣಾ ವಿರುದ್ಧ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರಿಂದ ಕೋಟ್ಯಂತರ ಹಣ ಪಡೆದು ವಂಚಿಸಿದ ಆರೋಪ ಕೇಳಿಬಂದಿತ್ತು. ಈತ ವಂಚಕ ಎಂದು ಗೊತ್ತಾಗುತ್ತಿದ್ದಂತೆ ಪತ್ನಿ ಹಾಗು ಎಸ್‌ಐ ಜುನ್ಮೋನಿ​ ಕೇಸು ದಾಖಲು ಮಾಡಿಕೊಂಡಿದ್ದರು. ನಂತರ ಬಂಧಿಸಿ ಜೈಲಿಗಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.