ETV Bharat / bharat

2020ರ ಮೇನಿಂದ ಆಗಸ್ಟ್​ವರೆಗೆ 4621 ಶ್ರಮಿಕ್ ರೈಲುಗಳು ಓಡಾಟ:ರೈಲ್ವೆ ಇಲಾಖೆ ಮಾಹಿತಿ - Shramik Train

ಕೊರೊನಾ ಸಮಯದಲ್ಲಿ ಲಾಕ್​ಡೌನ್​ ಜಾರಿಯಾದ ಮೇಲೆ ತಮ್ಮ ರಾಜ್ಯಗಳಿಗೆ ತೆರಳಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಶ್ರಮಿಕ್​ ರೈಲು ಸೇವೆ ನೀಡಿತ್ತು. ಈ ಶ್ರಮಿಕ್​ ರೈಲಿನ ಸಂಪೂರ್ಣ ಮಾಹಿತಿಯನ್ನು ಈಗ ಕೇಂದ್ರ ರೈಲ್ವೆ ಇಲಾಖೆ ನೀಡಿದೆ.

Shramik Express Trains
ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳು
author img

By

Published : Feb 4, 2021, 6:52 PM IST

ನವದೆಹಲಿ: ಕೊರೊನಾ ಹಿನ್ನೆಲೆ ಮೇ 1, 2020 ರಿಂದ ಆಗಸ್ಟ್ 31, 2020 ರ ನಡುವೆ ಒಟ್ಟು 4,621 ಶ್ರಮಿಕ್ ವಿಶೇಷ ರೈಲುಗಳು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಜನರು ತಮ್ಮ ತವರು ರಾಜ್ಯಗಳಿಗೆ ತೆರಳಲು ಸೇವೆ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Shramik Express Trains
ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳು

2020 ರ ಮೇ 1 ರಿಂದ 2020 ರ ಆಗಸ್ಟ್ 31 ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ರಮಿಕ್ ಸ್ಪೆಷಲ್​ ರೈಲುಗಳು 63.19 ಲಕ್ಷ ಪ್ರಯಾಣಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಿದೆ. ಶ್ರಮಿಕ್ ವಿಶೇಷ ರೈಲುಗಳಿಗಾಗಿ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರಗಳು ಕೋರಿದ್ದವು. ಸಾಮಾನ್ಯ ಸಂದರ್ಭಗಳಲ್ಲಿ ಅಂತಹ ವಿಶೇಷ ರೈಲುಗಳನ್ನು ರಾಜ್ಯ ಸರ್ಕಾರ / ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಪೂರ್ಣ ದರಗಳಲ್ಲಿ ಕಾಯ್ದಿರಿಸಲಾಗುತ್ತದೆ. ಇದರಲ್ಲಿ ಸಾಮಾನ್ಯ ಶುಲ್ಕ, ಸೇವಾ ಶುಲ್ಕ, ಖಾಲಿ ಸಾಗಾಟ ಶುಲ್ಕ ಇತ್ಯಾದಿಗಳು ಸೇರಿವೆ.

Shramik Express Trains
ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳು

ಆದರೆ, ಭಾರತೀಯ ರೈಲ್ವೆ ಸಾಮಾನ್ಯ ಶುಲ್ಕದಲ್ಲಿ ಶ್ರಮಿಕ್ ಸ್ಪೆಷಲ್ಸ್ ಕಾಯ್ದಿರಿಸಲು ಅನುಮತಿ ನೀಡಿತ್ತು. ಈ ಸೇವೆಗೆ ರಾಜ್ಯ ಸರ್ಕಾರಗಳು ಅಥವಾ ಅವರ ಅಧಿಕೃತ ಪ್ರತಿನಿಧಿಗಳಿಂದ ಶ್ರಮಿಕ್ ವಿಶೇಷ ರೈಲುಗಳಿಗೆ ಶುಲ್ಕವನ್ನು ಸಂಗ್ರಹಿಸಲಾಗಿದೆ. ರೈಲ್ವೆ ಪ್ರಯಾಣಿಕರಿಂದ ಯಾವುದೇ ಶುಲ್ಕವನ್ನು ನೇರವಾಗಿ ಪಡೆದುಕೊಳ್ಳಲಾಗಿಲಿಲ್ಲ. 2020 ರ ಮೇ 1 ರಿಂದ 2020 ರ ಆಗಸ್ಟ್ 31 ರವರೆಗೆ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಲು ರಾಜ್ಯ ಸರ್ಕಾರಗಳಿಂದ ಅಥವಾ ರಾಜ್ಯ ಸರ್ಕಾರಗಳ ಪ್ರತಿನಿಧಿಗಳಿಂದ ಅಂದಾಜು 433 ಕೋಟಿ ರೂ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.