ETV Bharat / bharat

ಲಿವ್​ ಇನ್​​ ರಿಲೇಷನ್​ಶಿಪ್​​ನಲ್ಲಿದ್ದ ಯುವತಿ ಕೊಂದ ಪ್ರೇಮಿ.. ಯಾರಿಗೂ ಗೊತ್ತಾಗದಂತೆ ಹಿಮದಲ್ಲಿ ಹೂಳಿದ.. ಆದರೆ?

ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲಿ ದಿಲ್ಲಿಯ ಶ್ರದ್ಧಾ ವಾಕರ್​ ಕೊಲೆ ಹೋಲುವ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯನ್ನು ಕೊಂದ ಪ್ರೇಮಿ ಶವವನ್ನು ಹಿಮಾಚಲಪ್ರದೇಶದಲ್ಲಿ ಬಿಸಾಡಿ ಬಂದಿದ್ದಾನೆ. 7 ತಿಂಗಳ ಹಿಂದೆ ಈ ಘಟನೆ ನಡೆದಿದೆ.

shraddha-like-murder-in-ghaziabad
ಉತ್ತರಪ್ರದೇಶದಲ್ಲಿ ಶ್ರದ್ಧಾ ವಾಕರ್​ ಕೊಲೆ ಮಾದರಿ ಕೇಸ್​
author img

By

Published : Dec 24, 2022, 7:50 AM IST

ನವದೆಹಲಿ/ಗಾಜಿಯಾಬಾದ್: ದಿಲ್ಲಿಯಲ್ಲಿ ಹಿಂದು ಯುವತಿ ಶ್ರದ್ಧಾ ವಾಕರ್​ಳನ್ನು ಅನ್ಯಧರ್ಮದ ಅಫ್ತಾಬ್​ ಪೂನಾವಾಲಾ 35 ತುಂಡು ಮಾಡಿ ಕೊಂದ ಪ್ರಕರಣದಂತೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಥೇಟ್​ ಅಂಥದ್ದೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಹಜೀವನ ನಡೆಸುತ್ತಿದ್ದ ಯುವತಿಯನ್ನು, ಪ್ರೇಮಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದ ಕುಲುವಿನಲ್ಲಿ ಎಸೆದು ಬಂದ ಆಘಾತಕಾರಿ ಕೇಸ್​ ಬಯಲಾಗಿದೆ.

ಗಾಜಿಯಾಬಾದ್​ ಮೂಲದ ಕೊಲೆಯಾದ ಯುವತಿ ಕುಟುಂಬದೊಂದಿಗೆ ದೂರವಾಗಿ ಆರೋಪಿ ರಾಮನ್​ ಎಂಬಾತನ ಜೊತೆಗೆ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದರು. ಮದುವೆ ವಿಷಯಕ್ಕಾಗಿ ಇಬ್ಬರ ಮಧ್ಯೆ ನಡೆದ ಜಗಳದಲ್ಲಿ ಯುವಕ, ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಹಿಮಾಚಲಪ್ರದೇಶದಲ್ಲಿ ಬಿಸಾಡಿದ್ದ.

ಪ್ರಕರಣವೇನು?: ಗಾಜಿಯಾಬಾದ್​ನ ವಸುಂದರಾ ಪ್ರದೇಶದ ನಿವಾಸಿಯಾದ ಯುವತಿ, ಕುಟುಂಬವನ್ನು ತ್ಯಜಿಸಿ ಏಕಾಂಗಿಯಾಗಿ ಜೀವಿಸುತ್ತಿದ್ದಳು. ಅದೇ ಜಿಲ್ಲೆಯ ಸಿರೌಲಿಯ ಯುವಕ ರಾಮನ್​ ಆಕೆಯ ಜೊತೆಗೆ ಪ್ರೇಮಸಂಬಂಧ ಹೊಂದಿದ್ದ. ಬಳಿಕ ಇಬ್ಬರು ಸಹಜೀವನ ನಡೆಸುತ್ತಿದ್ದರು.

ಕೆಲ ವರ್ಷಗಳ ಬಳಿಕ ಯುವತಿ ಮದುವೆಯಾಗಲು ರಾಮನ್​ನನ್ನು ಕೇಳಿದ್ದಾಳೆ. ಇದಕ್ಕೆ ಆತ ಒಪ್ಪಿಗೆ ನೀಡಿರಲಿಲ್ಲ. ಇದು ಇಬ್ಬರ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿತ್ತು. ಬಳಿಕ ಯುವತಿ ಒತ್ತಡ ಹೇರಿದ್ದರಿಂದ ರಾಮನ್​ ಆಕೆಯನ್ನು ಪ್ರವಾಸಕ್ಕೆಂದು ಹಿಮಾಚಲಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಕುಲುವಿನಲ್ಲಿದ್ದಾಗ ಕಾರಿನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದಂತೆ ಹಿಮದಲ್ಲಿ ಶವವನ್ನು ಬಿಸಾಡಿ ಬಂದಿದ್ದಾನೆ.

ನಿರ್ಜನ ಪ್ರದೇಶದಲ್ಲಿ 7 ತಿಂಗಳ ಹಿಂದೆ ಯುವತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಯುವತಿಯನ್ನು ಕೊಲೆ ಮಾಡಿ ರಾಮನ್​ ಬಳಿಕ ಅದೇ ಮನೆಯಲ್ಲಿ ನಿರಾಳವಾಗಿ ವಾಸ ಮಾಡುತ್ತಿದ್ದ, ಇದು ಯಾರಿಗೂ ಅನುಮಾನ ಮೂಡಿಸಿರಲಿಲ್ಲ.

ಕೇಸ್​ ಬಯಲಾಗಿದ್ದೇಗೆ?: ಈ ಕಡೆ ಯುವತಿಯ ತಾಯಿ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ನಾಪತ್ತೆ ಕೇಸ್​ ದಾಖಲಿಸಿದ್ದರು. 7 ತಿಂಗಳಿಂದ ತನ್ನ ಮಗಳು ಕಾಣುತ್ತಿಲ್ಲ ಎಂದು ದೂರು ನೀಡಿದ್ದರು. ತನಿಖೆ ನಡೆಸಿದಾಗ ಆಕೆ ರಾಮನ್​ ಜೊತೆ ಸಹಜೀವನ ನಡೆಸುತ್ತಿದ್ದುದು ಗೊತ್ತಾಗಿದೆ. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕೊಲೆ ರಹಸ್ಯವನ್ನು ಬಾಯಿಬಿಟ್ಟಿದ್ದಾನೆ.

ಓದಿ: -40 ಡಿಗ್ರಿಗೆ ಇಳಿದ ತಾಪಮಾನ: ಮಂಜುಗಡ್ಡೆಯಂತಾದ ಅಮೆರಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.