ಮೀರತ್(ಉತ್ತರ ಪ್ರದೇಶ): ಉಮೇಶ್‌ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗೆ ಹಲವು ತಂಡಗಳು ಶೋಧಕಾರ್ಯದಲ್ಲಿ ತೊಡಗಿವೆ. ಈ ಸಂಬಂಧ ಭಾನುವಾರ ಉತ್ತರ ಪ್ರದೇಶದ ಎಸ್‌ಟಿಎಫ್(ಸ್ಪೆಷಲ್ ಟಾಸ್ಕ್ ಫೋರ್ಸ್) ಭೂಗತ ಪಾತಕಿ ಅತೀಕ್ ಅಹ್ಮದ್‌ನ ಸೋದರ ಮಾವ ಅಖ್ಲಾಕ್ ಅಹ್ಮದ್ನನ್ನು ಮೀರತ್‌ನಲ್ಲಿ ಬಂಧಿಸಿದೆ.
ಕೊಲೆ ಪ್ರಕರಣದ ಆರೋಪಿಗಳಿಗೆ ಅತೀಕ್ನ ಸೋದರ ಮಾವ ಅಖ್ಲಾಕ್ ಅಹ್ಮದ್ ಸಹಾಯ ಮಾಡಿದ್ದರು. ಈ ಪ್ರಕರಣದಲ್ಲಿ ಶೂಟರ್ ಗುಡ್ಡು ಮುಸ್ಲಿಂನ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವು ಮಾ. 5ರಂದು ನಡೆದ ಭೇಟಿಯ ದೃಶ್ಯಗಳು ಎಂದು ಹೇಳಲಾಗುತ್ತಿದೆ. ಈ ಶೂಟರ್ ಮೀರತ್‌ನಲ್ಲಿರುವ ಅತೀಕ್ ಅವರ ಸೋದರ ಮಾವ ಡಾ. ಅಕ್ಲಾಖ್ ಅವರ ಮನೆಗೆ ಹೋಗಿದ್ದ. ಇನ್ನು ವಿಡಿಯೋದಲ್ಲಿ ಅಖ್ಲಾಕ್, ಶೂಟರ್‌ನನ್ನು ಮನೆಗೆ ಸ್ವಾಗತಿಸುತ್ತಿರುವುದು ಕಂಡು ಬಂದಿದೆ.
ಶೂಟರ್‌ಗಳಿಗೆ ಆಶ್ರಯ ನೀಡಿದ ಆರೋಪ: ಪ್ರಯಾಗ್‌ರಾಜ್ ನಲ್ಲಿ ನಡೆದಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಯುಪಿ ಎಸ್‌ಟಿಎಫ್ ಭಾನುವಾರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶೂಟರ್‌ಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಅಖ್ಲಾಕ್‌ನನ್ನು ಬಂಧಿಸಿದೆ. ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಶೂಟರ್‌ಗಳೊಂದಿಗೆ ಅಖ್ಲಾಕ್‌ನ ಸಂಪರ್ಕ ದೃಢಪಟ್ಟಿದೆ.
ಅಖ್ಲಾಕ್ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಶೂಟರ್ ಗುಡ್ಡು ಮುಸ್ಲಿಂನನ್ನು ಅಖ್ಲಾಕ್ ಸ್ವಾಗತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಡಾ. ಅಖ್ಲಾಕ್ ಅವರನ್ನು ಮೀರತ್‌ನಲ್ಲಿರುವ ಭಾವನ್‌ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ, ಅತೀಕ್ ಅಹ್ಮದ್ ಅವರನ್ನು ಭೇಟಿಯಾಗಲು ಅಖ್ಲಾಕ್ ಆಗಾಗ ಜೈಲಿಗೆ ಹೋಗುತ್ತಿದ್ದರು ಎಂದು ತಿಳಿಸಿದ್ದಾರೆ. ಇನ್ನು ಉಮೇಶ್ ಪಾಲ್ ಹತ್ಯೆಯ ನಂತರ ಗುಡ್ಡು ಮತ್ತು ಅತೀಕ್ ಅವರ ಮಗ ಅಸಾದ್ ಅಖ್ಲಾಕ್ ಮನೆಯಲ್ಲಿ ತಲೆಮರೆಸಿಕೊಂಡಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ.
ಸದ್ಯ, ಶೂಟರ್ ಗುಡ್ಡು ಮುಸ್ಲಿಂ ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅತೀಕ್ ಅವರ ಸೋದರ ಮಾವ ಮತ್ತು ಅವರ ಕುಟುಂಬ ಶೂಟರ್‌ನನ್ನು ಸ್ವಾಗತಿಸುತ್ತಿರುವುದು ಕಂಡು ಬಂದಿದೆ. ಎಸ್‌ಟಿಎಫ್ ಈ ಹಿಂದೆ ಮೀರತ್ ನಿವಾಸಿ ಅಖ್ಲಾಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.
ಇದಾದ ಬಳಿಕ ಆತನನ್ನು ಪ್ರಯಾಗ್‌ರಾಜ್ ಪೊಲೀಸರಿಗೆ ಒಪ್ಪಿಸಲಾಗಿತ್ತು. ಮತ್ತೊಂದೆಡೆ, ಅಖ್ಲಾಕ್ ಉಮೇಶ್‌ಪಾಲ್ ಕೊಲೆ ಮಾಡಿದ ಶೂಟರ್‌ಗಳಿಗೆ ಅವರ ಮನೆಯಲ್ಲಿ ಆಶ್ರಯ ನೀಡಿರುವುದು ಬೆಳಕಿಗೆ ಬಂದ ನಂತರ ಮೀರತ್‌ನ ಗುಪ್ತಚರ ಸಂಸ್ಥೆಗಳು ಸಹ ಅಲರ್ಟ್ ಆಗಿವೆ. ಕೊಲೆಗಾರರ ಖರ್ಚಿಗೆ ಅತೀಕ್ ಸೋದರ ಮಾವನ ಬಳಿ ಹಣವಿತ್ತು ಎಂದು ಹೇಳಲಾಗುತ್ತಿದೆ. ಬಳಿಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿತ್ತು. ದುಷ್ಕರ್ಮಿಗಳು ಅಪರಾಧ ಎಸಗಿದ ನಂತರ ಮೀರತ್‌ಗೆ ಬಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ, ಅತೀಕ್ ಅವರ ಸೋದರ ಮಾವ ಅಖ್ಲಾಕ್ ಪೊಲೀಸರ ನಿಗಾದಲ್ಲಿದ್ದರು.
ಇದನ್ನೂ ಓದಿ:101 ಕೇಸ್ ಎದುರಿಸುತ್ತಿರುವ ಮಾಫಿಯಾ ಡಾನ್ ಅತೀಕ್ ಅಹ್ಮದ್: ಕಿಡ್ನಾಪ್ ಕೇಸ್ನಲ್ಲಿ ಜೀವಾವಧಿ ಶಿಕ್ಷೆ