ETV Bharat / bharat

ಗ್ಯಾಂಗ್​ಸ್ಟರ್​ನಿಂದ ಯುವಕನ ಮೇಲೆ ಗುಂಡು.. ಸ್ಥಳದಲ್ಲೇ ಸಾವು

author img

By

Published : Jun 13, 2022, 9:07 AM IST

ಗ್ಯಾಂಗ್​ಸ್ಟರ್​​​​ವೊಬ್ಬ ಯುವಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

gun firing at Islamabad railway track Amritsar, Police search for gangster in Amritsar, Punjab crime news, ಅಮೃತಸರದ ಇಸ್ಲಾಮಾಬಾದ್ ರೈಲ್ವೇ ಟ್ರ್ಯಾಕ್ ಬಳಿ ಗುಂಡಿನ ದಾಳಿ, ಅಮೃತಸರದಲ್ಲಿ ಗ್ಯಾಂಗ್​ಸ್ಟಾರ್​ಗಾಗಿ ಪೋಲಿಸರಿಂದ ಹುಡುಕಾಟ, ಪಂಜಾಬ್ ಅಪರಾಧ ಸುದ್ದಿ,
ಗ್ಯಾಂಗ್​ಸ್ಟಾರ್​ನಿಂದ ಯುವಕನ ಮೇಲೆ ಗುಂಡು

ಅಮೃತಸರ( ಪಂಜಾಬ್​): ಗ್ಯಾಂಗ್​​ಸ್ಟರ್​​​​ ಒಬ್ಬ ಇಸ್ಲಾಮಾಬಾದ್ ರೈಲ್ವೆ ಟ್ರ್ಯಾಕ್​ ಮೇಲೆ ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಗ್ಯಾಂಗ್​ಸ್ಟಾರ್​ ಸೋನು ಸಿಲಿಂಡರ್​ ಈ ಕೃತ್ಯ ಎಸಗಿದ್ದಾನೆ ಎಂದು ಮೃತನ ಕುಟುಂಬ ಆರೋಪಿಸಿದೆ.

ನಿನ್ನೆ ಸಂಜೆ ವೇಳೆ ಇಸ್ಲಾಮಾಬಾದ್ ರೈಲ್ವೆ ಟ್ರ್ಯಾಕ್​ ಬಳಿ ಇಬ್ಬರು ಯುವಕರು ನಿಂತಿದ್ದರು. ಈ ವೇಳೆ ಆರೋಪಿ ಸೋನು ಸಿಲಿಂಡರ್​ ಏಕಾಏಕಿ ಯುವಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮನಿಷ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಓದಿ: ದುಬೈನಲ್ಲಿ ಸೆರೆಯಾದ ಪಂಜಾಬ್​ ಯುವಕ: ಮಗನನ್ನ ಭಾರತಕ್ಕೆ ಕರೆ ತರುವಂತೆ ಕುಟುಂಬಸ್ಥರ ಮನವಿ

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕುಟುಂಬದ ದೂರಿನ ಮೇರೆಗೆ ದೂರು ದಾಖಲಾಗಿದ್ದು, ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಇಸ್ಲಾಮಾಬಾದ್ ಪೊಲೀಸ್ ಠಾಣೆ ಅಧಿಕಾರಿ ಪುನೀತ್ ಧಿಲ್ಲೋನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.